ಭಾರತ ಮತ್ತು ಥಾಯ್ಲೆಂಡ್ ದೇಶಗಳು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಮುಕ್ತ, ಎಲ್ಲರನ್ನೂ ಒಳಗೊಂಡ ಮತ್ತು ನಿಯಮಾಧಾರಿತ ಕ್ರಮವನ್ನು ಬೆಂಬಲಿಸುತ್ತವೆಯೇ ಹೊರತು ವಿಸ್ತರಣಾವಾದವನ್ನಲ್ಲ’ ಎಂದು ಚೀನಾ ಹೆಸರು ಹೇಳದೆಯೇ ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ ಚಾಟಿ ಬೀಸಿದ್ದಾರೆ.
ಬ್ಯಾಂಕಾಕ್: ‘ಭಾರತ ಮತ್ತು ಥಾಯ್ಲೆಂಡ್ ದೇಶಗಳು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಮುಕ್ತ, ಎಲ್ಲರನ್ನೂ ಒಳಗೊಂಡ ಮತ್ತು ನಿಯಮಾಧಾರಿತ ಕ್ರಮವನ್ನು ಬೆಂಬಲಿಸುತ್ತವೆಯೇ ಹೊರತು ವಿಸ್ತರಣಾವಾದವನ್ನಲ್ಲ’ ಎಂದು ಚೀನಾ ಹೆಸರು ಹೇಳದೆಯೇ ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ ಚಾಟಿ ಬೀಸಿದ್ದಾರೆ.
ಗುರುವಾರ ಇಲ್ಲಿ ಥಾಯ್ಲೆಂಡ್ ಪ್ರಧಾನಿ ಪೆಟೋಂಗ್ಟರ್ನ್ ಶಿನಾವಾತ್ರಾ ಅವರೊಂದಿಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋದಿ, ‘ಭಾರತದ ಈಶಾನ್ಯ ರಾಜ್ಯಗಳು ಮತ್ತು ಥಾಯ್ಲೆಂಡ್ ನಡುವಿನ ಪ್ರವಾಸೋದ್ಯಮ, ಸಂಸ್ಕೃತಿ, ಶಿಕ್ಷಣ, ಎಂಎಸ್‌ಎಂಇ, ಕೈಮಗ್ಗ ಮತ್ತು ಕರಕುಶಲ ಕ್ಷೇತ್ರಗಳಲ್ಲಿನ ಸಹಕಾರಕ್ಕೆ ನಾವು ಒತ್ತು ನೀಡುತ್ತೇವೆ. ಪರಸ್ಪರ ವ್ಯಾಪಾರ, ಹೂಡಿಕೆ ಮತ್ತು ವಿನಿಮಯವನ್ನು ಹೆಚ್ಚಿಸುವ ಬಗ್ಗೆಯೂ ಚರ್ಚಿಸಿದೆವು’ ಎಂದರು.
ಇದನ್ನೂ ಓದಿ: ಚೀನಾದಲ್ಲಿ ಅಮೆರಿಕ ಸಿಬ್ಬಂದಿಗೆ ಪ್ರಣಯ ನಿಷೇಧ: ಕಾರಣವೇನು ಗೊತ್ತೆ?
ಇದೇ ವೇಳೆ ಎರಡೂ ದೇಶಗಳು ಡಿಜಿಟಲ್ ತಂತ್ರಜ್ಞಾನದಿಂದ ಹಿಡಿದು ಸಂಸ್ಕೃತಿಯ ವರೆಗಿನ ಸಹಕಾರಕ್ಕೆ ಸಂಬಂಧಿಸಿದಂತೆ ಜಂಟಿ ಘೋಷಣೆ ಮತ್ತು ಒಪ್ಪಂದಗಳಿಗೆ ಸಹಿ ಮಾಡಿದರು.ಬಳಿಕ ಪ್ರಧಾನಿ ಮೋದಿ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಭಾಗಿಯಾದರು.
