Asianet Suvarna News Asianet Suvarna News

ಸೌದಿ ದೊರೆ ಸಲ್ಮಾನ್ ಜೊತೆ ಪ್ರಧಾನಿ ಮೋದಿ ಮಾತುಕತೆ

ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತೀಯ ವಲಸಿಗರನ್ನು ರಕ್ಷಿಸಲು ಸೌದಿ ಅರೆಬಿಯಾದ ಅಧಿಕಾರಿಗಳು ಬೆಂಬಲ ನೀಡಿದ್ದಕ್ಕಾಗಿ ಪ್ರಧಾನಮಂತ್ರಿ ಸೌದಿ ದೊರೆ ಸಲ್ಮಾನ್ ಅವರಿಗೆ ವಿಶೇಷ ಕೃತಜ್ಞತೆ ಸಲ್ಲಿಸಿದ್ದಾರೆ.

PM modi talks to Majesty the King of Saudi Arabia through phone call
Author
Bangalore, First Published Sep 10, 2020, 1:26 PM IST

ನವದೆಹಲಿ(ಸೆ.10): ಪ್ರಧಾನಿ ನರೇಂದ್ರ ಮೋದಿ ಸೌದಿ ಅರೆಬಿಯಾದ ದೊರೆ ಸಲ್ಮಾನ್ ಬಿನ್ ಅಬ್ದುಲ್ಲಾಜೀಜ್ ಜೊತೆ ಫೋನ್ ಮೂಲಕ ಮಾತನಾಡಿದ್ದಾರೆ. ಕೊರೋನಾ ವೈರಸ್‌ನಿಂದ ಜಾಗತಿಕವಾಗಿ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ನಾಯಕರು ಪರಸ್ಪರ ಚರ್ಚೆ ನಡೆಸಿದ್ದಾರೆ.

ಜಿ-20 ಬಳಗದ ಅಧ್ಯಕ್ಷತೆ ವಹಿಸಿಕೊಳ್ಳಲು ಸೌದಿ ಅರೆಬಿಯಾ ತೋರಿಸುತ್ತಿರುವ ನಾಯಕತ್ವದ ಬಗ್ಗೆ ಪ್ರಧಾನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಿ-20ಯಲ್ಲಿ ತೆಗೆದುಕೊಳ್ಳಲಾದ ಕ್ರಮಗಳು ಕೊರೋನಾ ನಿಯಂತ್ರಿಸಲು ಸಮನ್ವಯ ಕಾರ್ಯಗಳನ್ನು ನಡೆಸಲು ನೆರವಾಗಲಿದೆ ಎಂದು ನಾಯಕರು ಹೇಳಿದ್ದಾರೆ. ಇಬ್ಬರೂ ಜಿ.20 ಮುಂದಿರುವ ವಿಚಾರಗಳಲ್ಲಿ ಆದ್ಯತೆಗಳ ಬಗ್ಗೆಯೂ ಮೋದಿ ಹಾಗೂ ಸೌದಿ ದೊರೆ ಚರ್ಚಿಸಿದ್ದಾರೆ.

NEPಯಿಂದ ಶಿಕ್ಷಣದ ಯಶಸ್ಸು ಅಡಗಿದೆ: ಮಹತ್ವದ ಅಂಶಗಳನ್ನು ಬಿಚ್ಚಿಟ್ಟ ಮೋದಿ

ಭಾರತ ಮತ್ತು ಸೌದಿ ಅರೆಬಿಯಾದ ನಡುವಿನ ದ್ವಿಪಕ್ಷೀಯ ಸಂಬಂಧಗಳ ಸ್ಥಿತಿಗತಿ ಕುರಿತು ಉಭಯ ನಾಯಕರು ಚರ್ಚಿಸಿ ಈ ಬಗ್ಗೆ ತಮಗಿರುವ ತೃಪ್ತಿಯನ್ನೂ ವ್ಯಕ್ತಪಡಿಸಿದ್ದಾರೆ. ಎಲ್ಲ ವಲಯಗಳಲ್ಲಿ ಸಂಬಂಧಗಳನ್ನು ಬಲಿಷ್ಠಗೊಳಿಸಿ ಮತ್ತಷ್ಟು ಬಲವರ್ಧನೆ ಮಾಡುವ ಬದ್ಧತೆಯನ್ನೂ ನೆನಪಿಸಿಕೊಂಡಿದ್ದಾರೆ.

ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತೀಯ ವಲಸಿಗರನ್ನು ರಕ್ಷಿಸಲು ಸೌದಿ ಅರೆಬಿಯಾದ ಅಧಿಕಾರಿಗಳು ಬೆಂಬಲ ನೀಡಿದ್ದಕ್ಕಾಗಿ ಪ್ರಧಾನಿ ಸಲ್ಮಾನ್ ಅವರಿಗೆ ವಿಶೇಷ ಕೃತಜ್ಞತೆ ಸಲ್ಲಿಸಿದ್ದಾರೆ.

'LPG ಸಬ್ಸಿಡಿ ರದ್ದು ಮಾಡಿ ಮಹಿಳೆಯರು ಕೂಡಿಡುವ ಡಬ್ಬಿ ಹಣಕ್ಕೂ ಮೋದಿ ಸರ್ಕಾರ ಕನ್ನ'

ದೊರೆ ಸಲ್ಮಾನ್ ಬಿನ್ ಅಬ್ದುಲ್ಲಾಜೀಜ್ ಅಲ್ ಸೌದ್, ಸೌದಿ ಅರೆಬಿಯಾದ ರಾಜಮನೆತನದ  ಎಲ್ಲಾ ಸದಸ್ಯರು ಹಾಗೂ ಪ್ರಜೆಗಳಿಗೆ ಉತ್ತಮ ಆರೋಗ್ಯ ಲಭಿಸಲಿ ಹಾಗೂ ಒಳ್ಳೆಯದಾಗಲಿ ಎಂದು ಪ್ರಧಾನಮಂತ್ರಿ ಶುಭಾಶಯ ಕೋರಿದ್ದಾರೆ.

Follow Us:
Download App:
  • android
  • ios