ಸಿಎಂ ಸ್ಥಾನದಿಂದ ಪಿಎಂವರೆಗೆ, 20 ವರ್ಷ ಪೂರೈಸಿದ ಮೋದಿ ಬಗ್ಗೆ MyGovIndiaನಿಂದ ಕ್ವಿಜ್!
* ಅಧಿಕಾರಕ್ಕೇರಿ 20 ವರ್ಷ ಪೂರೈಸಿದ ಮೋದಿ
* 20 ವರ್ಷಗಳನ್ನು ಪೂರ್ಣಗೊಳಿಸಿದ ಪ್ರಧಾನಮಂತ್ರಿಯವರ ಬಗ್ಗೆ 'MyGovʼ ರಸಪ್ರಶ್ನೆ
ನವದೆಹಲಿ(ಆ.07) ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ(narendra Modi) ಅವರು ಇಂದು ಸರಕಾರದ ಮುಖ್ಯಸ್ಥರಾಗಿ 20 ವರ್ಷಗಳನ್ನು ಪೂರೈಸಿದ್ದಾರೆ. ಈ ಸಂದರ್ಭದಲ್ಲಿ, ʻಸೇವಾ ಸಮರ್ಪಣ್ ರಸಪ್ರಶ್ನೆ ಸ್ಪರ್ಧೆʼಯನ್ನು ʻಮೈಗವ್ಇಂಡಿಯಾʼ(MyGovIndia) ಆಯೋಜಿಸುತ್ತಿದೆ. ಈ ಕುರಿತು ಟ್ವೀಟ್ ಪ್ರಧಾನಮಂತ್ರಿಗಳ ಕಾರ್ಯಾಲಯ ಹೀಗೆ ಟ್ವೀಟ್ ಮಾಡಿದೆ:
"ಪ್ರಧಾನಮಂತ್ರಿ ಮೋದಿಯವರು ಅವರು ಇಂದು, ಅಕ್ಟೋಬರ್ 7ರಂದು ಸರಕಾರದ ಮುಖ್ಯಸ್ಥರಾಗಿ 20 ವರ್ಷಗಳನ್ನು ಪೂರ್ಣಗೊಳಿಸಿದ್ದಾರೆ. ಅವರು ಸದಾ ತಮ್ಮನ್ನು 'ಆತ್ಮನಿರ್ಭರ್ ಭಾರತ್'ಗಾಗಿ ದುಡಿಯುತ್ತಿರುವ 'ಪ್ರಧಾನ ಸೇವಕ' ಎಂದು ಹೇಳಿಕೊಳ್ಳುತ್ತಾರೆ. ಕಳೆದ 20 ವರ್ಷಗಳಲ್ಲಿ ರಾಷ್ಟ್ರ ನಿರ್ಮಾಣದ ವಿವಿಧ ಅಂಶಗಳ ಕುರಿತಾದ ಈ ರಸಪ್ರಶ್ನೆಯಲ್ಲಿ @mygovindia ಮೂಲಕ ಭಾಗವಹಿಸಲು ಇಲ್ಲಿ ಕ್ಲಿಕ್ಕಿಸಿ: https://t.co/nEYpBCltGN".
ಪ್ರಧಾನಿ ಮೋದಿ ಆಡಳಿತದ ಹಲವು ಪ್ರಥಮಗಳು
- 2014ರಲ್ಲಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ಎಲ್ಲಾ ಸಾರ್ಕ್ ದೇಶಗಳ ಗಣ್ಯರನ್ನು ಆಹ್ವಾನಿಸುವ ಮೂಲಕ ನೆರೆ ದೇಶಗಳ ಜೊತೆ ಸಂಬಂಧ ಸುಧಾರಣೆಗೆ ಹೊಸ ಹಾದಿ ತೆರೆದರು.
- 2015ರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಗಣರಾಜ್ಯೋತ್ಸವ ಕಾರ್ಯಕ್ರಮದ ಅತಿಥಿಯಾಗಿ ಆಹ್ವಾನಿಸಿದರು. ಇದು ಅಮೆರಿಕದ ಅಧ್ಯಕ್ಷರೊಬ್ಬರು ಗಣರಾಜ್ಯೋತ್ಸವದ ಅತಿಥಿಯಾದ ಮೊದಲ ಉದಾಹರಣೆ.
- 2017ರಲ್ಲಿ ಇಸ್ರೇಲ್‌ಗೆ ಭೇಟಿ ನೀಡುವ ಮೂಲಕ, ಆ ದೇಶಕ್ಕೆ ಭೇಟಿ ಕೊಟ್ಟಭಾರತದ ಮೊದಲ ಪ್ರಧಾನಿ ಎಂಬ ಹಿರಿಮೆಗೆ ಪಾತ್ರರಾದರು.
- 2021ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಭಾರತಕ್ಕೆ ಅಧ್ಯಕ್ಷ ಹುದ್ದೆ ಸಿಕ್ಕಿದ ಸಂದರ್ಭದಲ್ಲಿ ಸಭೆಯ ಅಧ್ಯಕ್ಷತೆಯನ್ನು ಮೋದಿ ವಹಿಸಿದ್ದರು. ಭಾರತದ ಪ್ರಧಾನಿಯೊಬ್ಬರು ಹೀಗೆ ಸಭೆಯ ಅಧ್ಯಕ್ಷತೆ ವಹಿಸಿದ್ದು ಇದೇ ಮೊದಲು.
ಅತ್ಯಂತ ಜನಪ್ರಿಯ ನಾಯಕ
ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಿದ್ದ ಅವಧಿಯಲ್ಲಿ ಸಾಕಷ್ಟುಸವಾಲುಗಳನ್ನು ಎದುರಿಸಿದ ಹೊರತಾಗಿಯೂ, ದೇಶದ ಅತ್ಯಂತ ಜನಪ್ರಿಯ ರಾಜಕೀಯ ನಾಯಕ ಎಂಬ ಹಿರಿಮೆ ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲೇ ಇದೆ. ಮಾರ್ನಿಂಗ್ ಕನ್ಸಲ್ಟ್ ಎಂಬ ಸಂಸ್ಥೆ ಇತ್ತೀಚೆಗೆ ನಡೆಸಿದ ಸಮೀಕ್ಷೆ ಅನ್ವಯ ನರೇಂದ್ರ ಮೋದಿ ಅತ್ಯಂತ ಹೆಚ್ಚಿನ ಅಪ್ರೂವಲ್ ರೇಟಿಂಗ್ ಹೊಂದಿರುವ ನಾಯಕರಾಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲೂ ಸೂಪರ್‌ಸ್ಟಾರ್
ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಹೆಚ್ಚಿನ ಹಿಂಬಾಲಕರು ಇರುವ ಟಾಪ್ 5 ರಾಜಕಾರಣಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡಾ ಒಬ್ಬರು. ಉಳಿದ ನಾಯಕರೆಂದರೆ ಬರಾಕ್ ಒಬಾಮಾ, ಡೊನಾಲ್ಡ್ ಟ್ರಂಪ್, ಜೋ ಬೈಡೆನ್, ಇಂಡೋನೇಷ್ಯಾ ಅಧ್ಯಕ್ಷ ಜೋಕೋ ವಿಡುಡು.