Asianet Suvarna News Asianet Suvarna News

ನಡೆಯುವಾಗ ಮುಗ್ಗರಿಸಿದ ಸಿಎಂ ಸ್ಟಾಲಿನ್‌ಗೆ ಪ್ರಧಾನಿ ಮೋದಿಯ ನೆರವು, ವಿಡಿಯೋ ವೈರಲ್!

ಖೇಲೋ ಇಂಡಿಯಾ ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಜೊತೆ ವೇದಿಕೆಯತ್ತ ಸಾಗುತ್ತಿರುವಾಗ ಸ್ಟಾಲಿನ್ ಆಯ ತಪ್ಪಿದ ಘಟನೆ ನಡೆದಿದೆ. ಆದರೆ ಪ್ರಧಾನಿ ಮೋದಿ ಸ್ಟಾಲಿನ್ ಕೈಹಿಡಿದು ಹೆಜ್ಜೆ ಹಾಕಿದ ಕಾರಣ ಹೆಚ್ಚಿನ ಅನಾಹುತಗಳು ಸಂಭವಿಸಲಿಲ್ಲ. ಈ ವಿಡಿಯೋ ವೈರಲ್ ಆಗಿದ. 
 

PM Modi support help MK stalin to walk when he lost balance slightly in chennai ckm
Author
First Published Jan 20, 2024, 4:08 PM IST

ಚೆನ್ನೈ(ಜ.20) ಪ್ರಧಾನಿ ನರೇಂದ್ರ ಮೋದಿ ತಮಿಳುನಾಡು ಭೇಟಿಯಲ್ಲಿ ನಡೆದ ಘಟನೆ ಭಾರಿ ವೈರಲ್ ಆಗಿದೆ. ಖೇಲೋ ಇಂಡಿಯಾ ಕಾರ್ಯಕ್ರಮ ಉದ್ಘಾಟನೆಗೆ ಚೆನ್ನೈಗೆ ಆಗಮಿಸಿದ ಪ್ರಧಾನಿ ಮೋದಿ, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕೈಹಿಡು ವೇದಿಕೆಯತ್ತ ಸಾಗಿದ್ದಾರೆ. ಆದರೆ ಹೆಜ್ಜೆ ಹಾಕುತ್ತಿದ್ದ ಎಂಕೆ ಸ್ಟಾಲಿನ್ ಆಯ ತಪ್ಪಿದ್ದಾರೆ. ಇತ್ತ ಪ್ರಧಾನಿ ನರೇಂದ್ರ ಮೋದಿ ನೆರವಿನಿಂದ ಯಾವುದೇ ಅನಾಹುತ ಸಂಭವಿಸಲಿಲ್ಲ. ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ.

ತಮಿಳುನಾಡಿನ ಖೇಲೋ ಇಂಡಿಯಾ ಕಾರ್ಯಕ್ರಮ ಉದ್ಘಾಟಿಸಲು ಪ್ರಧಾನಿ ಮೋದಿ ಚೆನ್ನೈಗೆ ಆಗಮಿಸಿದ್ದರು. ಈ ವೇಳೆ ಪ್ರಧಾನಿ ಮೋದಿ, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಪುತ್ರ ಹಾಗೂ ಕ್ರೀಡಾಸಚಿವ ಉದಯನಿಧಿ ಸ್ಟಾಲಿನ್ ಜೊತೆಗಿದ್ದರು. ಪ್ರಧಾನಿ ಮೋದಿಯನ್ನು ಸ್ವಾಗತಿಸಿ ಇತರ ಸಚಿವರು, ಅಧಿಕಾರಿಗಳ ಜೊತೆ ಖೇಲೋ ಇಂಡಿಯಾ ಕಾರ್ಯಕ್ರಮದ ವೇದಿಕೆಯತ್ತ ತೆರಳಿದ್ದಾರೆ.

ಮಸೀದಿ ಕೆಡವಿ ಮಂದಿರ ಕಟ್ಟಿದ್ದನ್ನ ಒಪ್ಪೋದಿಲ್ಲ: ಉದಯನಿಧಿ ಸ್ಟ್ಯಾಲಿನ್‌

ಪ್ರಧಾನಿ ಮೋದಿ ಹೆಜ್ಜೆ ಹಾಕುತ್ತಾ ತೆರಳುವಾಗ ಎಂಕೆ ಸ್ಟಾಲಿನ್ ಕೈ ಹಿಡಿದು ಮಾತನಾಡುತ್ತಾ ಸಾಗಿದ್ದಾರೆ. ಆದರೆ ಫ್ಲೋರ್ ಗಮನಿಸಿದ ಎಂಕೆ ಸ್ಟಾಲಿನ್ ಹೆಜ್ಜೆ ಹಾಕುತ್ತಾ ಆಯ ತಪ್ಪಿದ್ದಾರೆ. ಮುಗ್ಗರಿಸಿದ ಎಂಕೆ ಸ್ಟಾಲಿನ್‌ಗೆ ಪ್ರಧಾನಿ ನೆರವು ಸಹಾಯ ಮಾಡಿದೆ. ಕೈ ಹಿಡಿದಿದ್ದ ಕಾರಣ ಎಂಕೆ ಸ್ಟಾಲಿನ್‌ಗೆ ಯಾವುದೇ ಅಪಾಯ ಸಂಭವಿಸಲಿಲ್ಲ. ಈ ವಿಡಿಯೋ ಇದೀಗ ವೈರಲ್ ಆಗಿದೆ.

 

 

ಸ್ಟಾಲಿನ್ ಮುಗ್ಗರಿಸುತ್ತಿದ್ದಂತೆ ಪ್ರಧಾನಿ ಮೋದಿ ಗಟ್ಟಿಯಾಗಿ ಹಿಡಿದಿದ್ದಾರೆ. ಇದರಿಂದ ಮತ್ತೆ ಸರಾಗವಾಗಿ ಹೆಜ್ಜೆ ಹಾಕಿ ಖೇಲೋ ಇಂಡಿಯಾ ಕಾರ್ಯಕ್ರಮ ಸ್ಥಳ ತಲುಪಿದ್ದಾರೆ. ಆದರೆ ಈ ಘಟನೆ ಇಬ್ಬರು ನಾಯಕರ ಮುಖದಲ್ಲಿ ನಗು ತರಿಸಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತದಲ್ಲಿ ಒಲಿಂಪಿಕ್ಸ್ ಆಯೋಜನೆ, ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಹೆಚ್ಚಿನ ಪದಕ ಗೆಲುವಿಗೆ ಕ್ರೀಡಾಪಟುಗಳ ತಯಾರಿಗೆ ಕೇಂದ್ರ ಸರ್ಕಾರ ನೀಡುತ್ತಿರು ಪ್ರೋತ್ಸಾಹದ ಮಾತನಾಡಿದ್ದಾರೆ. ಇದೇ ವೇಳೆ ಕಳೆದ 10 ವರ್ಷದಲ್ಲಿ ಕ್ರೀಡಾ ಕ್ಷೇತ್ರದ ಭ್ರಷ್ಟಾಚಾರವನ್ನು ಬಿಜೆಪಿ ಸರ್ಕಾರ ಅಂತ್ಯಗೊಳಿಸಿದೆ. ಯುಪಿ ಅವಧಿಯಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಕೇಳಿ ಬಂದ ಭ್ರಷ್ಟಾಚಾರಗಳ ಸರಮಾಲೆಯನ್ನು ನಮ್ಮ ಆಡಳಿತದಲ್ಲಿ ಅಂತ್ಯಗೊಳಿಸಲಾಗಿದೆ. ಈ ಮೂಲಕ ಕ್ರೀಡಾಪಟುಗಳಳಿಗೆ ನ್ಯಾಯ ಒದಗಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಹಿಂದೂ ಆಚರಣೆಗಳ ದ್ವೇಷಕ್ಕೆ ಒಂದಾದ ಸಿದ್ಧರಾಮಯ್ಯ-ಸ್ಟ್ಯಾಲಿನ್‌, ಆಯುಧಪೂಜೆಯೇ ಟಾರ್ಗೆಟ್‌!

Latest Videos
Follow Us:
Download App:
  • android
  • ios