Asianet Suvarna News Asianet Suvarna News

ಮೋದಿಜೀ ಇನ್ನೂ ಸುಮ್ಮನಿರುತ್ತೀರಾ? ಪ್ರಜ್ವಲ್‌ ರೇವಣ್ಣ ಕೇಸ್‌ನಲ್ಲಿ ಪ್ರಿಯಾಂಕಾ ವಾದ್ರಾ ಚಾಟಿ!

ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಕೇಸ್‌ನಲ್ಲಿ ಪ್ರಿಯಾಂಕಾ ವಾದ್ರಾ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನೆ ಮಾಡಿದ್ದಾರೆ.
 

PM Modi still remain silent Priyanka Gandhi slams BJP over Prajwal Revanna sex scandal san
Author
First Published Apr 29, 2024, 1:44 PM IST

ಬೆಂಗಳೂರು (ಏ.29): ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್‌ ರೇವಣ್ಣ ಶಾಮೀಲಾಗಿರುವ ಲೈಂಗಿಕ ಹಗರಣದ ಕುರಿತು ಕಾಂಗ್ರೆಸ್ ಸೋಮವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸುತ್ತಾರೆಯೇ ಎಂದು ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಶ್ನಿಸಿದ್ದಾರೆ. 'ಪ್ರಧಾನಿ, ಅವರ ಭುಜದ ಮೇಲೆ ಕೈಯಿಟ್ಟು ಫೋಟೋ ತೆಗೆಸಿಕೊಳ್ಳುವ ನಾಯಕ.  10 ದಿನಗಳ ಮೊದಲು ಪ್ರಧಾನಿಯೇ ಪ್ರಚಾರಕ್ಕೆ ಆತನ ಪರವಾಗಿ ತೆರಳಿದ್ದ ನಾಯಕ.  ವೇದಿಕೆಯಲ್ಲಿ ಅವರನ್ನು ಹೊಗಳಿದ್ದ ಮೋದಿ. ಇಂದು ಕರ್ನಾಟಕದ ಆ ನಾಯಕ ದೇಶದಿಂದ ತಲೆಮರೆಸಿಕೊಂಡಿದ್ದಾನೆ. ಅವನ ಘೋರ ಅಪರಾಧಗಳ ಬಗ್ಗೆ ಕೇಳಿದಾಗ ಹೃದಯ ವಿದ್ರಾವಕವಾಗುತ್ತದೆ. ಈತ ನೂರಾರು ಮಹಿಳೆಯರ ಜೀವನವನ್ನು ಹಾಳುಮಾಡಿದ್ದಾನೆ. ಮೋದಿಜೀ, ಇನ್ನೂ ಸುಮ್ಮನಿರುತ್ತೀರಾ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಬಿಜೆಪಿ ನಾಯಕರೊಬ್ಬರು ಪಕ್ಷದ ಅಧ್ಯಕ್ಷರಿಗೆ ಪತ್ರವನ್ನೂ ಬರೆದಿದ್ದರು. ಇದರಲ್ಲಿ “ಪ್ರಜ್ವಲ್ ರೇವಣ್ಣ ಸ್ಲೀಜ್ ವೀಡಿಯೊಗಳು” ಇರುವ ಪೆನ್ ಡ್ರೈವ್‌ನ ಉಪಸ್ಥಿತಿಯನ್ನು ಬಹಿರಂಗಪಡಿಸಿದ್ದರು. ಹಾಗಿದ್ದರೂ ಬಿಜೆಪಿಯು ಜೆಡಿ (ಎಸ್) ನೊಂದಿಗೆ ಮೈತ್ರಿಗೆ ಏಕೆ ಮುಂದಾಯಿತು ಎಂದು ವಿರೋಧ ಪಕ್ಷವು ಕೇಳಿದೆ. ಅವರ ಬಳಿ ಕೆಲಸ ಮಾಡಲು ಪ್ರಾರಂಭಿಸಿದ ನಾಲ್ಕು ತಿಂಗಳ ನಂತರ ರೇವಣ್ಣ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು ಮತ್ತು ಪ್ರಜ್ವಲ್ ತನ್ನ ಮಗಳಿಗೆ ವಿಡಿಯೋ ಕರೆ ಮಾಡಿ "ಅಶ್ಲೀಲ ಸಂಭಾಷಣೆ" ನಡೆಸುತ್ತಿದ್ದ ಎಂದು ಅವರ ಅಡುಗೆ ಮಾಡುವ ಮಹಿಳೆಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಕಳೆದ ವರ್ಷ ಡಿಸೆಂಬರ್ 8 ರಂದು ಬಿಜೆಪಿ ನಾಯಕ ದೇವರಾಜೇಗೌಡ ಅವರು ಬಿಜೆಪಿ ಅಧ್ಯಕ್ಷರಿಗೆ ಬರೆದ ಪತ್ರವನ್ನು ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.      ಪತ್ರದಲ್ಲಿ ಪ್ರಜ್ವಲ್ ರೇವಣ್ಣ ಅವರ ಸ್ಲೀಜ್ ವಿಡಿಯೋಗಳ ಪೆನ್ ಡ್ರೈವ್ ಇರುವುದನ್ನು ಬಹಿರಂಗಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜ್ವಲ್‌ ರೇವಣ್ಣ ವಿಡಿಯೋ ಬಗ್ಗೆ ಮಾಹಿತಿ ಇದ್ದರೂ, ಬಿಜೆಪಿ ಈ ಮೈತ್ರಿಗೆ ಮುಂದಾಗಿದ್ದೇಕೆ? ಸರಣಿ ಅತ್ಯಾಚಾರದ ವಿಡಿಯೋ ರೆಕಾರ್ಡ್ ಮಾಡಿ ಪೆನ್‌ಡ್ರೈವ್‌ನಲ್ಲಿ ಇಟ್ಟಿರುವ ಬಗ್ಗೆ ಏಕೆ ಕ್ರಮ ಕೈಗೊಂಡಿಲ್ಲ? ಪ್ರಜ್ವಲ್ ವಿಶ್ವದ ಅತಿ ದೊಡ್ಡ ಮತ್ತು ಅನಾಚಾರದ ಲೈಂಗಿಕ ದೌರ್ಜನ್ಯದ ಕಿಂಗ್‌ಪಿನ್ ಎಂದು ತಿಳಿದಿದ್ದರೂ ಪ್ರಧಾನಿ, ಪ್ರಜ್ವಲ್ ರೇವಣ್ಣ ಪರ ಪ್ರಚಾರ ಮಾಡಿ ವೇದಿಕೆ ಹಂಚಿಕೊಂಡಿದ್ದು ಏಕೆ? ಎಂದು ಪವನ್‌ ಖೇರಾ ಪ್ರಶ್ನೆ ಮಾಡಿದ್ದಾರೆ.

ಪ್ರಜ್ವಲ್ ರೇವಣ್ಣ ಎಲ್ಲ ದಾಖಲೆ ಮುರಿದಿದ್ದಾರೆ, ಹಾಸನದಲ್ಲಿ 3000ಕ್ಕೂ ಅಧಿಕ ವಿಡಿಯೋಗಳು ಹರಿದಾಡ್ತಿವೆ; ಅಲ್ಕಾ ಲಂಬಾ

ಪ್ರಜ್ವಲ್‌ ರೇವಣ್ಣ ಜರ್ಮನಿಗೆ ತಪ್ಪಿಸಿಕೊಂಡು ಹೋಗಲು ಸಹಾಯ ಮಾಡಿದವರು ಯಾರು? ನಮ್ಮ ಪ್ರಧಾನಿ ಯಾಕೆ ಮೌನವಾಗಿದ್ದಾರೆ ಎಂದೂ ಪ್ರಶ್ನೆ ಮಾಡಿದ್ದಾರೆ. ರೇವಣ್ಣ ಅವರ ಪತ್ನಿ ಭವಾನಿ ಅವರ ತನಗೆ ಸಂಬಂಧಿ ಎಂದು ದೂರುದಾರರು ತಿಳಿಸಿದ್ದಾರೆ. ತನಗೆ ಹಾಗೂ ತನ್ನ ಕುಟುಂಬದ ಇತರ ಸದಸ್ಯರಿಗೆ ಜೀವ ಬೆದರಿಕೆ ಇದೆ ಎಂದೂ ಆರೋಪಿಸಿದ್ದಾರೆ.

ಪ್ರಜ್ವಲ್‌ ರೇವಣ್ಣ ವಿರುದ್ಧ ತನಿಖೆಗೆ ಇಬ್ಬರು ಲೇಡಿ ಅಧಿಕಾರಿಗಳು

Latest Videos
Follow Us:
Download App:
  • android
  • ios