ನವದೆಹಲಿ(ಜೂ.30): ದೇಶವನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ ದೇಶದ 80 ಕೋಟಿ ಬಡವರಿಗೆ ನವೆಂಬರ್‌ ಅಂತ್ಯದವರೆಗೂ ಉಚಿತ ರೇಷನ್ ಹಂಚುವ ಘೋಷಣೆ ಮಾಡಿದ್ದಾರೆ. ಇಷ್ಟೇ ಅಲ್ಲದೇ ಕೊರೋನಾವನ್ನು ಗಂಭೀರವಾಗಿ ಪರಿಗಣಿಸಿ ಎಚ್ಚರದಿಂದಿರುವಂತೆಯೂ ಮನವಿ ಮಾಡಿಕೊಂಡಿದ್ದಾರೆ. ಯಾರು ನಿಯಮ ಪಾಲಿಸುವುದಿಲ್ಲವೋ ಅವರಿಗೆ ಬುದ್ಧಿ ಹೇಳುವಂತೆ ಆಗ್ರಹಿಸಿದ್ದಾರೆ

ಮೋದಿ ಭಾಷಣದ ಪ್ರಮುಖ ಅಂಶಗಳು:

* ಕೊರೋನಾದಿಂದ ಆಗುತ್ತಿರುವ ಸಾವುಗಳನ್ನು ಗಮನಿಸಿದರೆ ಹಾಗೂ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪರಿಸ್ಥಿತಿ ಬಹಳ ನಿಯಂತ್ರಣದಲ್ಲಿದೆ. ಸೂಕ್ತ ಸಮಯದಲ್ಲಿ ತೆಗೆದುಕೊಂಡ ನಿರ್ಧಾರ ಅನೇಕರ ಪ್ರಾಣ ಕಾಪಾಡಿದೆ. ಆದರೆ ಅನ್‌ಲಾಕ್‌ ಯಾವಾಗಿಂದ ಜಾರಿಗೊಳಿಸಿದ್ದೇವೋ ಅಂದಿನಿಂದ ಜನರು ಕೊಂಚ ಅಜಾರೂಕತೆ ತೋರುತ್ತಿದ್ದಾರೆ.

ಮೋದಿ ಭಾಷಣ: ಒಂದೆಡೆ ಕೊರೋನಾ ಕಾಟ, ಮತ್ತೊಂದೆಡೆ ಚೀನಾ ಬಿಕ್ಕಟ್ಟು

* ಆರಂಭದಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರದ ಬಗ್ಗೆ ಜನರು ಬಹಳ ಜಾಗಾರೂಕರಾಗಿದ್ದರು. ಆದರೆ ಈಗ ಆ ಜಾಗರೂಕತೆ ಇಲ್ಲ. ಆರಂಭದಲ್ಲಿ ಗಂಭೀರವಾಗಿ ನಿಯಮಗಳನ್ನು ಪಾಲಿಸುತ್ತಿದ್ದರು. ಈಗಲೂ ಸರ್ಕಾರಗಳು ಹಾಗೂ ನಾಗರಿಕರು ಮತ್ತೆ ಅದೇ ಬಗೆಯ ಜಾಗರೂಕತೆ ತೋರಿಸಬೇಕಿದೆ. ಅದರಲ್ಲೂ ವಿಶೇಷವಾಗಿ ಕಂಟೈನ್‌ಮೆಂಟ್‌ ಝೋನ್‌ ಜನರು ಎಚ್ಚರದಿಂದಿರಬೇಕು. ಅಜಾರೂಕತೆ ವಹಿಸುವವರನ್ನು ಎಚ್ಚರಿಸಬೇಕಿದೆ. ಭಾರತದಲ್ಲಿ ಹಳ್ಳಿಯ ಮುಖ್ಯಸ್ಥನಾಗಲಿ ಅಥವಾ ದೇಶದ ಪ್ರಧಾನಿಯಾಗಲಿ ಯಾರೂ ಕಾನೂನಿಗಿಂತ ದೊಡ್ಡವರಲ್ಲ. 

* ಸರ್ಕಾರ ಹಾಗೂ ಅಧಿಕಾರಿಗಳು ಯಾರೊಬ್ಬರೂ ಹಸಿವಿನಿಂದ ಉಳಿಯದಂತೆ ಎಚ್ಚರವಹಿಸಿದರು. ಹೀಗಾಗೇ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಜಾರಿಗೊಳಿಸಲಾಯ್ತು. ಕಳೆದ ಮೂರು ತಿಂಗಳಲ್ಲಿ ಇಪ್ಪತ್ತು ಕೋಟಿ ಜನರ ಜನಧನ್‌ ಖಾತೆಗೆ ಹಣ ಜಮಾವಣೆ ಮಾಡಿದ್ದೇವೆ. ಉದ್ಯೋಗ ಸೃಷ್ಟಿಗೆ 50 ಕೋಟಿ ವ್ಯಯಿಸಲಾಗಿದೆ.

ಜಿಮ್, ಸಿನಿಮಾ? ಹೊಸ ಲಾಕ್ ಡೌನ್ ನಿಯಮ ಪ್ರಕಟ, ಮಂಗಳವಾರದ ಮೋದಿ ಭಾಷಣ ಕುತೂಹಲ!

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ವಿಸ್ತರಣೆ

* ಇನ್ನು ಮಳೆಗಾಲ ಆರಂಭವಾಗಲಿದೆ ಹಾಗೂ ಹೀಗಿರುವಾಗ ಉಳಿದ ಕ್ಷೇತ್ರಕ್ಕೆ ಹೋಲಿಸಿದರೆ ಕೃಷಿ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಇರುತ್ತದೆ. ಅಲ್ಲದೇ ಹಬ್ಬ ಆಚರಣೆಗಳೂ ಹೆಚ್ಚು ಇರುತ್ತದೆ. ಇದು ಅಗತ್ಯ ಹಾಗೂ ಖರ್ಚು ಹೆಚ್ಚಿಸುತ್ತದೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ನವೆಂಬರ್ ತಿಂಗಳ ಅಂತ್ಯದವರೆಗೆ ವಿಸ್ತರಿಸಲಾಗುತ್ತದೆ.

ಸರ್ಕಾರದಿಂದ ಈ ಐದು ತಿಂಗಳಲ್ಲಿ ಹೆಚ್ಚು ಜನರಿಗೆ ಪ್ರತಿ ತಿಂಗಳು, ಕುಟುಂಬದ ಪ್ರತಿ ಸದಸ್ಯರಿಗೆ ಐದು ತಿಂಗಳು ಐದು ಕೆ. ಜಿ ಗೋಧಿ/ ಅಕ್ಕಿ ನೀಡಲಾಗುತ್ತದೆ. ಜೊತೆಗೆ ಒಂದು ಕೆ. ಜಿ. ಬೇಳೇ ಕಾಳುಗಳನ್ನೂ ನೀಡಲಾಗುತ್ತದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ವಿಸ್ತರಣೆಯಿಂದ 90 ಸಾವಿರ ಕೋಟಿ ರೂ. ವೆಚ್ಚ. ಈ ಯೋಜನೆಯಿಂದ ಒಟ್ಟು 1.50 ಲಕ್ಷ ಕೋಟಿ ರೂ. ಖರ್ಚು

* ಒಂದೇ ರಾಷ್ಟ್ರ ಒಂದೇ ರೇಷನ್ ಕಾರ್ಡ್‌ ಯೋಜನೆ ಕೂಡಾ ಜಾರಿಗೊಳಿಸಲಾಗುತ್ತದೆ. ಇದರಿಂದ ಕಡು ಬಡವರು ಹಾಗೂ ಕೆಲಸಕ್ಕಾಗಿ ಬೇರೆ ರಾಜ್ಯಕ್ಕೆ ತೆರಳುವ ಬಡವರಿಗೆ ಇದು ಬಹಳ ಉಪಯೋಗವಾಗುತ್ತದೆ.

* ಬಡವರ ಹಸಿವು ನೀಗಿಸುವ ಯೋಜನೆ ಯಶಸ್ವಿಯಾಗಿದೆ ಎಂದರೆ ಇದರಲ್ಲಿ ಇಬ್ಬರ ಪಾತ್ರ ಬಹಳ ಪ್ರಮುಖವಾದದ್ದು. ರೈತರು ಹಾಗೂ ನ್ಯಾಯಯುತವಾಗಿ ಟ್ಯಾಕ್ಸ್‌ ಕಟ್ಟುವವರಿಂದ ಮಾತ್ರ ಇದು ಸಾಧ್ಯವಾಗಿದೆ. ಇವರಿಂದಾಗಿಯೇ ಬಡವರು ಹಸಿವಿಲ್ಲದೇ ಬದುಕುತ್ತಿದ್ದಾರೆ.

* ಇಂದು ರೈತರು ಹಾಗೂ ತೆರೆಗೆದಾರರಿಗೆ ಅಭಿನಂದಿಸುತ್ತೇನೆ ಹಾಗೂ ನಮಿಸುತ್ತೇನೆ. ಮುಂದಿನ ದಿನಗಳಲ್ಲಿ ನಮ್ಮ ಪ್ರಯಾಸ ಹೆಚ್ಚಿಸುತ್ತೇವೆ. ಎಲ್ಲರನ್ನೂ ಸಶಕ್ತರನ್ನಾಗಿಸಲು ನಿರಂತರವಾಗಿ ಕೆಲಸ ಮಾಡುತ್ತೇವೆ. ಆರ್ಥಿಕ ಶಕ್ತಿ ಹೆಚ್ಚಿಸಲು ಶ್ರಮ ಕೈಗೊಳ್ಳುತ್ತೇವೆ.

* ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಅನೇಕ ರಾಜ್ಯಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಅವರಂತೆ ಉಳಿದ ರಾಜ್ಯಗಳೂ ಚೆನ್ನಾಗಿ ಕೆಲಸ ಮಾಡಬೇಕೆಂದು ನಿರೀಕ್ಷೆ.

* ಕೊರೋನಾ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಎಚ್ಚರವಹಿಸಿ, ಜಾಗರೂಕತೆಯಿಂದ ಇದ್ದು ಇದನ್ನು ನಿಯಂತ್ರಿಸುವಲ್ಲಿ ಶ್ರಮ ವಹಿಸಿ.