ಮೋದಿ ಭಾಷಣ: ಒಂದೆಡೆ ಕೊರೋನಾ ಕಾಟ, ಮತ್ತೊಂದೆಡೆ ಚೀನಾ ಬಿಕ್ಕಟ್ಟು
ಮಂಗಳವಾರ ಪ್ರಧಾನ ನರೇಂದ್ರ ಮೋದಿ ಅವರು ಮತ್ತೆ ದೇಶವನ್ನುದ್ದೇಶಿಸಿ ಮಾತು| ಸಂಜೆ 4 ಗಂಟೆಗೆ ಪ್ರಧಾನಿ ಮೋದಿ ಭಾಷಣ| ಕುತೂಹಲ ಮೂಡಿಸಿದೆ ಟ್ವೀಟ್
ನವದೆಹಲಿ(ಜೂ.30):ಮಂಗಳವಾರ ಪ್ರಧಾನ ನರೇಂದ್ರ ಮೋದಿ ಅವರು ಮತ್ತೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಬಗ್ಗೆ ಪ್ರಧಾನಿ ಕಚೇರಿ ಟ್ವಿಟರ್ ಖಾತೆ ಮಾಹಿತಿ ಹಂಚಿಕೊಂಡಿದ್ದು, ಸಂಜೆ 4 ಗಂಟೆಗೆ ಪ್ರಧಾನಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಹೇಳಿದೆ.
ಒಂದನೇ ಹಂತದ ಅನ್‌ಲಾಕ್ ಪ್ರಕ್ರಿಯೆಯ ದಿನ ಕೊನೆಗೊಳ್ಳುವ ದಿನದಂತೆ ಪ್ರಧಾನಿ ಮೋದಿ ಭಾಷಣ ಮಾಡುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
"
ಭಾರತದಲ್ಲಿ ಹೆಚ್ಚುತ್ತಿದೆ ಕೊರೋನಾ ಅಟ್ಟಹಾಸ:
ಇನ್ನು ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಸೋಮವಾರ ಒಂದೇ ದಿನ 18584 ಪ್ರಕರಣಗಳು ದಾಖಲಾಗಿದ್ದು, 415 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 5,59,426 ಆಗಿದೆ.
ಚೀನಾ ಭಾರತ ಬಿಕ್ಕಟ್ಟು:
ಲಡಾಖ್ ಗಡಿಯಲ್ಲಿ ಚೀನಾ ಮತ್ತೆ ನರಿ ಬುದ್ಧಿ ಪ್ರದರರ್ಶಿಸುತ್ತಿದೆ. ಹೀಗಿರುವಾಗ ಉಭಯ ರಾಷ್ಟ್ರಗಳ ನಡುವಿನ ಸಂಘರ್ಷದ ಕುರಿತಾಗಿಯೂ ಮೋದಿ ತಮ್ಮ ಭಾಷಣದಲ್ಲಿ ಮಾತನಾಡುವ ಸಾಧ್ಯತೆಗಳಿವೆ ಎಂದೂ ಹೇಳಲಾಗಿದೆ