ನವದೆಹಲಿ(ಜೂ,  29) ದೇಶ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ(ಜೂ. 30) ಮಧ್ಯಾಹ್ನ 4 ಗಂಟೆಗೆ ಮಾತನಾಡಲಿದ್ದಾರೆ.  ಕೊರೋನಾ ಲಾಕ್ ಡೌನ್, ಅನ್ ಲಾಕ್ ಯಾವುದರ ಬಗ್ಗೆ ಮಾತನಾಡಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ. 

ಇದೆಲ್ಲದರ ಮಧ್ಯೆ ಹೊಸ ಲಾಕ್ ಡೌನ್ ನಿಯಮ ಪ್ರಕಟವಾಗಿದೆ. ಶಾಲಾ, ಕಾಲೇಜು ಬಂದ್  ಇರುವುದನ್ನು ಜುಲೈ 31 ವರೆಗೂ ಮುಂದುವರಿಕೆ ಮಾಡಲಾಗಿದೆ.  ಮೆಟ್ರೋ ನಿರ್ಬಂಧ, ಸಿನಿಮಾ, ಜಿಮ್ ಮೇಲೆ ನಿರ್ಬಂಧ  ಸಹ ಮುಂದುವರಿಯಲಿದ್ದು ರಾತ್ರಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.

ಕರ್ನಾಟಕದಲ್ಲಿ ಮತ್ತೆ ಸಾವಿರ, ಬೆಂಗಳೂರಿನ ಕತೆ ಏನು?

ಕಂಟೈನ್‌ಮೆಂಟ್ ವಲಯಗಳಲ್ಲಿಯಥಾಸ್ಥಿತಿ ಜಾರಿಯಲ್ಲಿರಲಿದ್ದು ಅಗತ್ಯ ಚಟುವಟಿಕೆಗೆ ಮಾತ್ರ ಅನುಮತಿ ಸಿಕ್ಕಲಿದೆ. ರಾತ್ರಿ ಕರ್ಫ್ಯೂ ಸಮಯವನ್ನು ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ನಿಗದಿಪಡಿಸಲಾಗಿದೆ.