ಆಯೋಧ್ಯೆ ರಾಮ ಮಂದಿರದಲ್ಲಿ ಮುಂದಿನ ರಾಮನವಮಿ, ದೇಶದ ಜನತೆಗೆ ಮೋದಿ ಸಂದೇಶ!
ವಿಜಯದಶಮಿ ಆಚರಣೆ ಪ್ರಯುಕ್ತ ರಾವಣ ದಹನ ಮಾಡಿದ ಪ್ರಧಾನಿ ನರೇಂದ್ರ ಮೋದಿ ಭಕ್ತರನ್ನುದ್ದೇಶಿಸಿ ಮಾತನಾಡಿದ್ದಾರೆ. ಇದೇ ವೇಳೆ ಮುಂದಿನ ರಾಮ ನವಮಿ ಆಚರಣೆ ಆಯೋಧ್ಯೆ ರಾಮ ಮಂದಿರಲ್ಲಿ ನಡೆಯಲಿದೆ ಎಂದಿದ್ದಾರೆ. ರಾಮ ಮಂದಿರ ಕುರಿತು ಮೋದಿ ಆಡಿತ ಮಾತಿನ ಹೈಲೈಟ್ಸ್ ಇಲ್ಲಿದೆ.
ನವದೆಹಲಿ(ಆ.24) ಮುಂದಿನ ರಾಮನವಮಿ ಆಚರಣೆ ಆಯೋಧ್ಯೆ ರಾಮ ಮಂದಿರದಲ್ಲಿ ನಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯ ರಾಮಲೀಲಾ ಮೈದಾನದಲ್ಲಿ ಆಯೋಜಿಸಿದ ವಿಜಯದಶಮಿ ಆಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ ರಾವಣ ಪ್ರತಿಕೃತಿ ದಹನ ಮಾಡಿದರು. ನಕಾರಾತ್ಮಕ ಶಕ್ತಿಗಳ ಅಂತ್ಯವನ್ನು ಸೂಚಿಸುವ ಹಬ್ಬ ಶ್ರೀರಾಮ ಚಂದ್ರನ ವಿಜಯ ಪಥವನ್ನು ಸಾರಿಹೇಳುತ್ತದೆ ಎಂದರು.
ಆಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಕೆಲವೇ ತಿಂಗಳು ಮಾತ್ರ ಬಾಕಿ. ಶ್ರೀರಾಮನ ವಿಜಯ ದಶಮಿ ಕುರಿತು ಮಾತನಾಡಿದ ಮೋದಿ, ನಮಗೆ ರಾಮ ಮಂದಿರ ನಿರ್ಮಾಣ ನೋಡುವ ಸೌಭ್ಯ ಸಿಕ್ಕಿದೆ. 5 ಶತಮಾನಗಳ ಬಳಿಕ ನಮ್ಮ ತಾಳ್ಮೆ, ಸಹನೆಗೆ ಸಿಕ್ಕ ಗೆಲುವು ಇದು. ಕೆಲವೇ ತಿಂಗಳಲ್ಲಿ ಶ್ರೀ ರಾಮ ಮಂದಿರ ಉದ್ಘಾನೆಗೊಳ್ಳುತ್ತಿದೆ. ಮುಂದಿನ ರಾಮ ನವಮಿ ಆಚರಣೆ ರಾಮ ಮಂದಿರದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಇಡೀ ವಿಶ್ವಕ್ಕೆ ರಾಮ ನವಮಿ ಸಂದೇಶ ಸಾರುತ್ತೇವೆ ಎಂದು ಮೋದಿ ಹೇಳಿದ್ದಾರೆ.
ರಾಮಲೀಲಾ ಮೈದಾನದಲ್ಲಿ ರಾವಣ ದಹನ ಮಾಡಿ ವಿಜಯದಶಮಿ ಆಚರಿಸಿದ ಪ್ರಧಾನಿ ಮೋದಿ!
2024ರ ಜನವರಿ ಕೊನೆಯ ವಾರದಲ್ಲಿ ರಾಮ ಮಂದಿರ ಉದ್ಘಾಟನೆ ನಡೆಯಲಿದೆ. ಮಂದಿರ ಉದ್ಘಾಟನೆಯಾದ ಮೂರೇ ತಿಂಗಳಿಗೆ ರಾಮ ನವಮಿ ಹಬ್ಬ ಆಚರಿಸಲಾಗುತ್ತದೆ. ಎಪ್ರಿಲ್ 17, 2024ರಂದು ರಾಮ ನವಮಿ ಹಬ್ಬ ಆಚರಿಸಲಾಗುತ್ತದೆ. ಬರೋಬ್ಬರಿ 500 ವರ್ಷಗಳ ಬಳಿಕ ಆಯೋಧ್ಯೆಯ ಭವ್ಯ ರಾಮ ಮಂದಿರದಲ್ಲೇ ರಾಮ ನವಮಿ ಆಚರಣೆ ನಡೆಯಲಿದೆ.
ರಾಮ ಮಂದಿರದಲ್ಲಿ ಭಗವಾನ್ ಶ್ರೀ ರಾಮ ಪ್ರತಿಷ್ಠಾನಗೆ ಕೆಲವೇ ತಿಂಗಳು ಮಾತ್ರ ಉಳಿದಿದೆ. ರಾಮನ ಉತ್ಸವ ವಿಜಯದಶಮಿಯಿಂದ ಶುರುವಾಗಿತ್ತು. ಇದೀಗ ನಮ್ಮ ಸೌಭಾಗ್ಯ, ರಾಮ ಮಂದಿರ ಕೂಡ ಉದ್ಘಾಟನೆಗೊಳ್ಳುತ್ತಿದೆ. ಹೀಗಾಗಿ ರಾಮ ನವಮಿಯನ್ನು ಆಯೋಧ್ಯೆಯಲ್ಲಿ ಆಚರಿಸಲು ಸಾಧ್ಯವಾಗಲಿದೆ ಎಂದು ಮೋದಿ ಹೇಳಿದ್ದಾರೆ.
ವಿಶ್ವ ವಿಖ್ಯಾತ ಜಂಬೂ ಸವಾರಿಗೆ ಅಧಿಕೃತ ಚಾಲನೆ ಕೊಟ್ಟ ರಾಜವಂಶಸ್ಥ ಯದುವೀರ್: ಸಿಎಂ, ಡಿಸಿಎಂ ಪುಷ್ಪಾರ್ಚನೆ
ಚಂದ್ರಯಾನ 3 ಯಶಸ್ವಿಯಾದ 2 ತಿಂಗಳಿಗೆ ನಾವು ವಿಜಯ ದಶಮಿ ಹಬ್ಬ ಆಚರಣೆ ಮಾಡುತ್ತಿದ್ದೇವೆ. ವಿಜಯ ದಶಮಿಯಲ್ಲಿ ನಾವು ಆಯುಧ ಪೂಜೆಯನ್ನು ಮಾಡುತ್ತೇವೆ. ನಾವು ಆಯುಧಗಳನ್ನು ಪೂಜೆ ಮಾಡುತ್ತೇವೆ. ಭಾರತದ ಆಯುಧ ಪೂಜೆ ಮಹತ್ವ ಎಂದರೆ ನಾವು ಆಕ್ರಮಣ ಮಾಡಲು ಈ ಆಯುಧ ಬಳಕೆ ಮಾಡುವುದಿಲ್ಲ. ಆದರೆ ನಮ್ಮ ಮಣ್ಣು ರಕ್ಷಿಸಲು ಈ ಆಯುಧ ಬಳಸಲು ನಮಗೆ ಗೊತ್ತಿದೆ ಎಂದು ಮೋದಿ ಹೇಳಿದ್ದಾರೆ. ಈ ಮೂಲಕ ದೇಶದ ಗಡಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂಬ ಸಂದೇಶ ನೀಡಿದ್ದಾರೆ.