Asianet Suvarna News

ಚಿರಾಗ್‌ಗೆ ಚಿಕ್ಕಪ್ಪನಿಂದ ಟೆನ್ಶನ್: ಮೋದಿ ಸಂಪುಟ ಸೇರಲು ಸಜ್ಜಾದ ಪಶುಪತಿ, ಹೊಸ ಕುರ್ತಾ ರೆಡಿ!

* ಮೋದಿ ಸಂಪುಟ ರಚನೆಗೆ ವೇದಿಕೆ ಸಜ್ಜು

* ಮಂತ್ರಿಯಾಗುವ ಹಾದಿಯಲ್ಲಿದ್ದಾರೆ ಪಶುಪತಿ

* ಕರೆ ಮಾಡಿ ದೆಹಲಿಗೆ ಕರೆಸಿಕೊಂಡ ಅಮಿತ್ ಶಾ

Cabinet Calling Chirag Paswan Uncle Shopping For Kurta pod
Author
Bangalore, First Published Jul 6, 2021, 3:57 PM IST
  • Facebook
  • Twitter
  • Whatsapp

ಪಾಟ್ನಾ(ಜು.06): ದಿವಂಗತ ನಾಯಕ ರಾಮ್‌ ವಿಲಾಸ್‌ ಪಾಸ್ವಾನ್‌ ರಾಜಕೀಯ ಗದ್ದುಗೆ ಮೇಲೆ ತಮ್ಮ ಹಿಡಿತ ಸಾಧಿಸಲು ಚಿಕ್ಕಪ್ಪ ಹಾಗೂ ಮಗ ಇಬ್ಬರೂ ಭಾರೀ ಪ್ರಯತ್ನ ನಡೆಸುತ್ತಿದ್ದಾರೆ. ಇವರ ಈ ಭಿನ್ನಮತದಿಂದ ಎಲ್‌ಜೆಪಿ ಎರಡು ಹೋಳಾಗಿದೆ. ಹೀಗಿರುವಾಗಲೇ ಎಲ್‌ಜೆಪಿ ಸಂಸದ ಪಶುಪತಿ ಕುಮಾರ್‌ ಪಾರಸ್ ಮೋದಿ ಸಂಪುಟದಲ್ಲಿ ಸ್ಥಾನ ಪಡೆಯಲಿದ್ದಾರೆಂಬ ಮಾತುಗಳು ಸದ್ದು ಮಾಡಿವೆ. ಪ್ರಮಾಣ ವಚನಕ್ಕೆ ಅವರು ತಯಾರಿ ನಡೆಸುತ್ತಿದ್ದು, ಇದಕ್ಕಾಗಿ ಹೊಸ ಕುರ್ತಾ ಖರೀದಿಸುವ ದೃಶ್ಯಗಳೂ ಕಂಡು ಬಂದಿದೆ.

ಮಂತ್ರಿಯಾಗುವ ಮುನ್ನ ಕುರ್ತಾ ಖರೀದಿ

ವಾಸ್ತವವಾಗಿ ಸೋಶಿಯಲ್ ಮೀಡಿಯಾದಲ್ಲಿ ಸಂಸದ ಪಶುಪತಿಯವರು ಕುರ್ತಾ ಖರೀದಿಸುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಇದಾದ ಬಳಿಕ ರಾಜಕೀಯ ವಲಯದಲ್ಲಿ ಮಂತ್ರಿಗಿರಿ ವಿಚಾರ ಭಾರೀ ಸದ್ದು ಮಾಡಿದೆ. ಹೀಗಿರುವಾಗ ಚಿಕ್ಕಪ್ಪ ತನ್ನ ಅಣ್ಣನ ಮಗನನ್ನು ಹಿಂದಿಕ್ಕಿ ಸಚಿವರಾಗುವ ರೇಸ್‌ನಲ್ಲಿದ್ದಾರೆ. ಮೋದಿ ಸಂಪುಟದಲ್ಲಿ ಅವರ ಸ್ಥಾನ ಬಹುತೇಕ ಖಚಿತ ಎನ್ನಲಾಗಿದೆ. ಅಲ್ಲದೇ ಅವರು ತಡರಾತ್ರಿ ಪಾಟ್ನಾದಿಂದ ದೆಹಲಿಗೆ ತೆರಳಿದ್ದಾರೆ.

ಕರೆ ಮಾಡಿ ದೆಹಲಿಗೆ ಕರೆಸಿಕೊಂಡ ಅಮಿತ್ ಶಾ

ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಪಶುಪತಿ ಪಾರಸ್, ಸೋಮವಾರ ಗೃಹ ಸಚಿವ ಅಮಿತ್ ಶಾರ ಕರೆ ಬಂದಿತ್ತು. ಅವರು ದೆಹಲಿಗೆ ಕರೆದಿದ್ದಾರೆ. ಹಾಗಾದ್ರೆ ನೀವು ಮೋದಿ ಸಂಪುಟದ ಸಚಿವರಾಗುತ್ತೀರಾ ಎಂದು ವರದಿಗಾರರೊಬ್ಬರು ಪ್ರಶ್ನಿಸಿದಾಗ, ಈ ರಹಸ್ಯವನ್ನು ಕೆಲ ಹೊತ್ತು ರಹಸ್ಯವಾಗೇ ಇಡೋಣ ಎಂದಿದ್ದಾರೆ. 

Follow Us:
Download App:
  • android
  • ios