* ಮತ್ತೋರ್ವ ಕರ್ನಾಟಕ ಸಂಸದರೊಬ್ಬರಿಗೆ  ದೆಹಲಿಗೆ ಬರುವಂತೆ ಕರೆ * ಹಿರಿಯ ಕೇಂದ್ರ ಮಂತ್ರಿಗಳಿಂದ ಜುಲೈ 8ರಂದು ದೆಹಲಿಗೆ ಬರಲು ಸೂಚನೆ * ಸಚಿವ ಸ್ಥಾನ ದಕ್ಕುವ ನಿರೀಕ್ಷೆ 

ವಿಜಯಪುರ, (ಜುಲೈ.06): ಕೇಂದ್ರ ಸಂಪುಟ ವಿಸ್ತರಣೆ ಮಧ್ಯೆ ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಕುಟುಂಬ ಸಮೇತ ದೆಹಲಿಗೆ ತೆರಳಿರುವುದು ಕುತೂಹಲ ಮೂಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದರ ಬೆನ್ನಲ್ಲೇ ಕರ್ನಾಟಕ ರಾಜ್ಯದಲ್ಲೇ ಬಿಜೆಪಿ ಹಿರಿಯ ಸಂಸದರಾಗಿರುವ ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಅವರಿಗೆ ಕೇಂದ್ರದಿಂದ ದೆಹಲಿ ಬುಲಾವ್ ಬಂದಿದೆ‌. ತಮಗೆ ದೆಹಲಿಗೆ ಬರುವಂತೆ ಬುಲಾವ್ ಬಂದಿರವುದನ್ನು ರಮೇಶ್ ಜಿಗಜಿಣಗಿ ಖಚಿತ ಪಡಿಸಿದ್ದಾರೆ. ಇದರಿಂದ ಇವರಿಗೂ ಮಂತ್ರಿ ಭಾಗ್ಯ ಸಿಗುವುದು ಸಾಧ್ಯತೆಗಳಿವೆ.

ಕೇಂದ್ರ ಸಂಪುಟ ವಿಸ್ತರಣೆ: ಕುಟುಂಬ ಸಮೇತ ದಿಲ್ಲಿಗೆ ಹೊರಟ ಕರ್ನಾಟಕದ ಸಂಸದ

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಹಿರಿಯ ಕೇಂದ್ರ ಮಂತ್ರಿಗಳಿಂದ ಜುಲೈ 8ರಂದು ದೆಹಲಿಗೆ ಬರಲು ಸೂಚನೆ ಬಂದಿದೆ. ಈ ಹಿನ್ನೆಲೆಯಲ್ಲಿ ಇಂದು (ಮಂಗಳವಾರ( ಸಂಜೆ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದೇನೆ. ನನ್ನ ಹಾಗೆ ಇತರ ಸಂಸದರಿಗೂ ಬುಲಾವ್ ಬಂದಿದೆ. ಸಚಿವ ಸ್ಥಾನ ಸಿಗುವ ಬಗ್ಗೆ ಇನ್ನೂ ಪಕ್ಕಾ ಇಲ್ಲ ಎಂದ ಸಂಸದ ಜಿಗಜಿಣಗಿ ಸ್ಪಷ್ಟಪಡಿಸಿದರು.

ಮೋದಿ ಅವರ ಕೇಂದ್ರದ ಮೊದಲ ಅವಧಿ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದ ರಮೇಶ್ ಜಿಗಜಿಣಗಿ ಅವರಿಗೆ ಎರಡನೇ ಅವಧಿ ಸರ್ಕಾರ ರಚನೆ ಸಂದರ್ಭದಲ್ಲಿ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಆದ್ರೆ, ಇದೀಗ ಜುಲೈ 8ರಂದು ಕೇಂದ್ರ ಸಂಪುಟ ವಿಸ್ತರಣೆಯಲ್ಲಿ ಮತ್ತೆ ಸಚಿವ ಸ್ಥಾನ ದಕ್ಕುವ ನಿರೀಕ್ಷೆ ಇದೆ.

"