Subhash Chandra Bose Statue : ಇಂಡಿಯಾ ಗೇಟ್ ನಲ್ಲಿ ಸ್ಥಾಪನೆಯಾಗಲಿದೆ ನೇತಾಜಿ ಪ್ರತಿಮೆ
ನೇತಾಜಿ ಸುಭಾಷ್ ಚಂದ್ರ ಬೋಸ್ 125ನೇ ಜನ್ಮದಿನಾಚರಣೆ
ಪ್ರತಿಮೆ ಸ್ಥಾಪನೆ ಆಗುವವರೆಗೂ ಹೊಲೊಗ್ರಾಮ್ ನಲ್ಲಿ ಇರಲಿದೆ ನೇತಾಜಿ ಪ್ರತಿಮೆ
ಈಗಾಗಲೇ ಇರುವ ಭವ್ಯ ಮೇಲಾವರಣದ ಅಡಿಯಲ್ಲಿ ಪ್ರತಿಮೆ ಸ್ಥಾಪನೆ
ನವದೆಹಲಿ (ಜ. 21): ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ (Netaji Subhash Chandra Bose) ಅವರ 125ನೇ ಜನ್ಮ ದಿನಾಚರಣೆಗೂ ಮುನ್ನ ಸ್ವಾತಂತ್ರ್ಯ ಚಳುವಳಿಗೆ (independence movement) ಅವರ ನೀಡಿದ ಕೊಡುಗೆಗಳನ್ನು ಗೌರವಿಸುವ ಸಲುವಾಗಿ ಅವರ ಭವ್ಯ ಪ್ರತಿಮೆಯನ್ನು ಇಂಡಿಯಾ ಗೇಟ್ ನಲ್ಲಿ(India Gate) ಈಗಾಗಲೇ ಖಾಲಿ ಇರುವ ಭವ್ಯ ಮೇಲಾವರಣದ ಅಡಿಯಲ್ಲಿ ಸ್ಥಾಪನೆ ಮಾಡಲಾಗುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ (Prime Minister Narendra Modi)ತಿಳಿಸಿದ್ದಾರೆ. ಇಂಡಿಯಾ ಗೇಟ್ ನ ಈ ಭವ್ಯ ಮೇಲಾವರಣದ ಮುಂದೆ ಇಲ್ಲಿಯವರೆಗೂ ಅಮರ್ ಜವಾನ್ ಜ್ಯೋತಿ (Amar Jawan Jyothi) ಉರಿಯುತ್ತಿತ್ತು. ಶುಕ್ರವಾರ ಈ ಜ್ಯೋತಿಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕ ಜ್ಯೋತಿಯೊಂದಿಗೆ ಲೀನ ಮಾಡಲಾಗುತ್ತದೆ.
"ಇಡೀ ರಾಷ್ಟ್ರವು ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ 125 ನೇ ಜನ್ಮ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಮಯದಲ್ಲಿ, ಗ್ರಾನೈಟ್‌ನಿಂದ ಮಾಡಿದ ಅವರ ಭವ್ಯವಾದ ಪ್ರತಿಮೆಯನ್ನು ಇಂಡಿಯಾ ಗೇಟ್‌ನಲ್ಲಿ ಸ್ಥಾಪಿಸಲಾಗುತ್ತದೆ ಎನ್ನುವುದನ್ನು ಹಂಚಿಕೊಳ್ಳಲು ನನಗೆ ಬಹಳ ಸಂತಸವಾಗುತ್ತದೆ. ಇದು ಅವರಿಗೆ ಭಾರತದ ಋಣಭಾರದ ಸಂಕೇತ' ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಪ್ರತಿಮೆಯ ಸ್ಥಾಪನೆ ಪೂರ್ಣಗೊಳ್ಳುವವರೆಗೆ ನೇತಾಜಿಯವರ ಹೊಲೊಗ್ರಾಮ್ ಅನ್ನು ಪ್ರತಿಮೆಯ ಸ್ಥಳದಲ್ಲಿ ಪ್ರದರ್ಶಿಸಲಾಗುವುದು ಎಂದು ಪ್ರಧಾನಿ ಹೇಳಿದರು. ನೇತಾಜಿ ಅವರ ಜನ್ಮದಿನವಾದ ಜನವರಿ 23 ರಂದು ನಾನು ಹೊಲೊಗ್ರಾಮ್ ಪ್ರತಿಮೆಯನ್ನು ಅನಾವರಣ ಮಾಡಲಿದ್ದೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಈ ಪ್ರತಿಮೆಯನ್ನು ಭವ್ಯ ಮೇಲಾವರಣದ ಅಡಿಯಲ್ಲಿ ಸ್ಥಾಪಿಸಲಾಗುವುದು. ಮೇಲಾವರಣದ ಮುಂದೆ ಕಳೆದ 50 ವರ್ಷಗಳಿಂದ ಉರಿಯುತ್ತಿದ್ದ ಅಮರ್ ಜವಾನ್ ಜ್ಯೋತಿಯನ್ನು ಶುಕ್ರವಾರ, ರಾಷ್ಟ್ರೀಯ ಯುದ್ಧ ಸ್ಮಾರಕದೊಂದಿಗೆ ಅಧಿಕೃತ ಸಮಾರಂಭದಲ್ಲಿ ವಿಲೀನ ಮಾಡಲಾಗುತ್ತದೆ. 1930ರ ದಶಕದಲ್ಲಿ ಸರ್ ಎಡ್ವಿನ್ ಲ್ಯುಟೆನ್ಸ್, ದೆಹಲಿಯಲ್ಲಿ ಸ್ಮಾರಕಗಳನ್ನು ನಿರ್ಮಾಣ ಮಾಡುವ ವೇಳೆ ಈ ಮೇಲಾವರಣವನ್ನು ನಿರ್ಮಾಣ ಮಾಡಿದ್ದರು. ಇದರಲ್ಲಿ ಇಂಗ್ಲೆಂಡ್ ನ ಮಾಜಿ ರಾಜ 5ನೇ ಜಾರ್ಜ್ ಪ್ರತಿಮೆನ್ನು ಇಡಲಾಗಿತ್ತು. 1968ರಲ್ಲಿ 5ನೇ ಜಾರ್ಜ್ ಪ್ರತಿಮೆಯನ್ನು ತೆಗೆದುಹಾಕಿದ ಬಳಿಕ ಈ ಮೇಲಾವರಣ ಖಾಲಿ ಉಳಿದಿತ್ತು. ಜಾರ್ಜ್ ಪ್ರತಿಮೆಯನ್ನು ಬಳಿಕ ದೆಹಲಿಯ ಕೊರೊನೇಷನ್ ಪಾರ್ಕ್ ಗೆ ಸ್ಥಳಾಂತರ ಮಾಡಲಾಗಿತ್ತು. ಇದಕ್ಕೂ ಮುನ್ನ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವಾದ ಜನವರಿ 23 ರಿಂದಲೇ ಇನ್ನು ಮುಂದೆ ಗಣರಾಜ್ಯೋತ್ಸವ ಸಂಭ್ರಮಗಳು ಆರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. ಇಲ್ಲಿಯವರೆಗೂ ಜನವರಿ 23 ರಂದು "ಪರಾಕ್ರಮ ದಿವಸ್" ಎಂದು ಆಚರಣೆ ಮಾಡಲಾಗುತ್ತಿತ್ತು. ಜನವರಿ 24 ರಿಂದ ಗಣರಾಜ್ಯೋತ್ಸವ ಸಂಭ್ರಮಗಳು ಆರಂಭವಾಗುತ್ತಿದ್ದವು.
Rahul Gandhi : ಹಿಂದುತ್ವವಾದಿಗಳು ಹೇಡಿಗಳು, ಸೈಬರ್ ಜಗತ್ತಿನಲ್ಲಿ ದ್ವೇಷ ಹರಡುತ್ತಿದ್ದಾರೆ!
ಇಂಡಿಯಾ ಗೇಟ್ ಹಾಗೂ ರಾಜಪಥದಲ್ಲಿ ಕೇಂದ್ರ ಸರ್ಕಾರ ಮಾಡುತ್ತಿರುವ ಬದಲಾವಣೆಗಳು ಈಗಾಗಲೇ ಚರ್ಚೆ, ವಿವಾದ ಮತ್ತು ಪ್ರಶ್ನೆಗಳನ್ನು ಹುಟಟ್ಟುಹಾಕುತ್ತಿರುವಂತೆಯೇ, ನೇತಾಜಿಯ ಪ್ರತಿಮೆಯನ್ನು ಸ್ಥಾಪನೆ ಮಾಡುವ ಘೋಷಣೆಯನ್ನು ಸರ್ಕಾರ ಮಾಡಿದೆ. ಗಣರಾಜ್ಯೋತ್ಸವವು ನವೀಕರಿಸಿದ ರಾಜಪಥದಲ್ಲಿ ನಡೆಯುತ್ತದೆ, ಇದು ಇಂಡಿಯಾ ಗೇಟ್ ಅನ್ನು ಬ್ರಿಟಿಷ್-ನಿರ್ಮಿತ ರಾಷ್ಟ್ರಪತಿ ಭವನಕ್ಕೆ ಸಂಪರ್ಕಿಸುವ ವಿಧ್ಯುಕ್ತ ರಸ್ತೆಯಾಗಿದೆ.
MOTN Survey : ಬಿಜೆಪಿಯಲ್ಲಿ ಮೋದಿ ನಂತರ ಯಾರು? ಮೂಡ್ ಆಫ್ ದ ನೇಷನ್ ಸರ್ವೇಯ ಸ್ಪೆಷಲ್ ಜನಾಭಿಪ್ರಾಯ!
ಹೇಗಿರಲಿದೆ ಪ್ರತಿಮೆ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಗ್ರಾನೈಟ್ ನ ಪ್ರತಿಮೆ 28 ಫೀಟ್ ಎತ್ತರವಾಗಿರಲಿದ್ದು, 6 ಫೀಟ್ ಅಗಲವಾಗಿರಲಿದೆ. ನೇತಾಜಿ ಪ್ರತಿಮೆ ಸ್ಥಾಪನೆಯಾಗಿರುವ ನೇರದಲ್ಲಿ ಇಂಡಿಯಾ ಗೇಟ್ ಇರಲಿದೆ. ಇಂಡಿಯಾ ಗೇಟ್ ನವ ದೆಹಲಿಯ ರಾಜಪಥ್‌ನಲ್ಲಿರುವ 42 ಮೀಟರ್ ಎತ್ತರದ ಯುದ್ಧ ಸ್ಮಾರಕ ಲಾಂಛನವಾಗಿದೆ. ಇದು ಸ್ವತಂತ್ರ ಭಾರತದ ರಾಷ್ಟ್ರೀಯ ಸ್ಮಾರಕ. ಇದನ್ನು ಮೊದಲಿಗೆ ಕಿಂಗ್ಸ್ ವೇ ಎನ್ನುವ ಹೆಸರಿನಿಂದ ಕರೆಯಲಾಗುತ್ತಿತ್ತು. ಇದನ್ನು ಸರ್ ಎಡ್ವರ್ಡ್ ಲ್ಯುಟೆನ್ಸ್ ವಿನ್ಯಾಸಗೊಳಿಸಿದ್ದಾರೆ. ಈ ಸ್ಮಾರಕವು ಪ್ಯಾರಿಸ್‌ನಲ್ಲಿರುವ ಆರ್ಕ್ ಡಿ ಟ್ರಯೋಂಫ್‌ನಿಂದ ಪ್ರೇರಿತವಾಗಿದೆ. ಇದನ್ನು 1931 ರಲ್ಲಿ ನಿರ್ಮಿಸಲಾಗಿತ್ತು.