Asianet Suvarna News Asianet Suvarna News

ಕೊರೋನಾ ಎದುರಿಸಲು ಸೇನಾ ಪಡೆ ಸಿದ್ಧತೆ ಪರಿಶೀಲಿಸಿದ ಪ್ರಧಾನಿ ಮೋದಿ!

ಭಾರತದಲ್ಲಿ ಕೊರೋನಾ ವೈರಸ್ ಮೀತಿ ಮೀರಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಭಾರತೀಯ ಸೇನೆ ಅಖಾಡಕ್ಕಿಳಿದಿದೆ. ಇದೀಗ ಪ್ರದಾನಿ  ಮೋದಿ  ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಜೊತೆ ಸೇನಾ ಪಡೆ ಕೈಗೊಂಡಿರುವ ಸಿದ್ಧತೆ ಪರಿಶೀಲನೆ ನಡೆಸಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
 

PM Modi reviews preparations by Armed Forces to assist in Covid management ckm
Author
Bengaluru, First Published Apr 26, 2021, 3:59 PM IST

ನವದೆಹಲಿ(ಏ.26): ಕೊರೋನಾ ವೈರಸ್ ಭೀಕರತೆಯಿಂದ ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಭಾರತೀಯ ಸೇನಾ ಪಡೆ ನೆರವು ಪಡೆದುಕೊಂಡಿದೆ. ದೇಶದಲ್ಲಿ ಎದುರಾಗಿರುವ ಸಮಸ್ಯೆ ನಿವಾರಸಿಸಲು ಶಸಸ್ತ್ರ ಪಡೆ ಹಗಳಿರುಳು ಶ್ರಮಿಸುತ್ತಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಸೇನಾ ಪಡೆ ಕೈಗೊಂಡಿರುವ ಸಿದ್ಧತೆಗಳು, ಮುಂದಿನ ರೂಪುರೇಶೆ ಕುರಿತು ಪರಿಶೀಲನೆ ನಡೆಸಿದ್ದಾರೆ. 

'ಮಿಸ್ಟರ್ ಮಿನಿಸ್ಟರ್,  ಇದು ಪ್ರಧಾನಿಯ ಕರ್ತವ್ಯ, ಪುಕ್ಕಟೆ ಪ್ರಚಾರ ಬದಿಗಿಡಿ

ಭಾರತೀಯ ಸೇನಾ ಪಡೆ ಭಾರತದ ಕೊರೋನಾ ಪರಿಸ್ಥಿತಿ ನಿಭಾಯಿಸಲು ಕೈಗೊಂಡಿರುವ ಕ್ರಮಗಳ ಕುರಿತು ಪ್ರದಾನಿ ನರೇಂದ್ರ ಮೋದಿಗೆ ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ವಿವರಿಸಿದರು. ಇದರಲ್ಲಿ ಕಳೆದ 2 ವರ್ಷಗಳಲ್ಲಿ ನಿವೃತ್ತರಾದ ಶಸಸ್ತ್ರ ಪಡೆಗಳ ಎಲ್ಲಾ ವೈದ್ಯಕೀಯ ಸಿಬ್ಬಂದಿಯನ್ನು ಮತ್ತೆ ಕೆಲಸಕ್ಕೆ ಕರೆಸಿಕೊಳ್ಳಲಾಗುತ್ತಿದೆ. ವೈದ್ಯಕೀಯ ಅಧಿಕಾರಿಗಳಿಗೆ ವೈದ್ಯಕೀಯ ತುರ್ತು ಸಹಾಯ ಮಾರ್ಗಗಳ ಮೂಲಕ ತಮ್ಮ ಸೇವೆಯನ್ನು ಲಭ್ಯವಾಗುವಂತೆ ಮಾಡಲಾಗಿದೆ ಎಂದು ಬಿಪಿನ್ ರಾವತ್ ವಿವರಿಸಿದ್ದಾರೆ.

14 ದಿನ ಕರ್ನಾಟಕ ಲಾಕ್‌ಡೌನ್: ಸಿಎಂ ಘೋಷಣೆ, ಎಂದಿನಿಂದ?

ಕಮಾಂಡ್ ಹೆಡ್‌ಕ್ವಾರ್ಟರ್, ಕಾರ್ಪ್ ಹೆಡ್‌ಕ್ವಾರ್ಟರ್, ಡಿವಿಶನ್ ಹೆಡ್‌ಕ್ವಾರ್ಟರ್, ವಾಯುಸೇನೆ, ನೌಕಾ ಪಡೆಗಳಲ್ಲಿ ಹೆಚ್ಚುವರಿ ಸಿಬ್ಬಂದಿ ಹಾಗೂ ವೈದ್ಯಕೀಯ ಸಿಬ್ಬಂದಿಗಳನ್ನು ನೇಮಿಸಲಾಗಿದೆ.  ಆಸ್ಪತ್ರೆಗಳಲ್ಲಿನ ವೈದ್ಯರಿಗೆ ಪೂರಕವಾಗಿ ನರ್ಸ್‌ಗಳನ್ನು, ಸಹಾಯಕ ಸಿಬ್ಬಂದಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಲಾಗುತ್ತಿದೆ ಎಂದು ರಾವತ್ ಪ್ರಧಾನಿಗೆ ವಿವರಿಸಿದರು. 

ಸೇನಾ ಆಸ್ಪತ್ರೆ, ಸೇನೆಯ ವಿವಿದ ಸಂಸ್ಥೆಗಳಲ್ಲಿ ಲಭ್ಯವಿರುವ ಆಮ್ಲಜನಕ ಸಿಲಿಂಡರ್‌ಗಳನ್ನು ತುರ್ತು ಅಗತ್ಯಕ್ಕೆ ಬಿಡುಗಡೆ ಮಾಡಲಾಗುವವುದು ಎಂದಿದ್ದಾರೆ. ಮಿಲಿಟರಿ ವೈದ್ಯಕೀಯ ಮೂಲ ಸೌಕರ್ಯವನ್ನು ನಾಗರಿಕರಿಗೆ ಲಭ್ಯವಾಗುವಂತೆ ಮಾಡಲಾಗಿದೆ ಎಂದು ವಿವರಿಸಿದರು.

ಇದೇ ವೇಳೆ ಪ್ರಧಾನಿ ಮೋದಿ, ಭಾರತ ವಿವಿದ ಭಾಗಗಳಿಗೆ ಹಾಗೂ ವಿದೇಶಗಳಿಂದ ಆಮ್ಲಜನಕ ಮತ್ತು ಇತರ ಅಗತ್ಯ ವಸ್ತುಗಳನ್ನು ತರಲು  IAF ಕೈಗೊಳ್ಳುತ್ತಿರುವ ಕಾರ್ಯಾಚರಣೆಗಳನ್ನೂ ಪರಿಶೀಲಿಸಿದರು. 

Follow Us:
Download App:
  • android
  • ios