ಸಂಕಷ್ಟದಲ್ಲಿ ರೈತರ ಕೈಹಿಡಿದ PM ಕಿಸಾನ್; 8ನೇ ಕಂತಿನ 20 ಸಾವಿರ ಕೋಟಿ ರೂ ಬಿಡುಗಡೆ!
- ಕೊರೋನಾ ಸಂಕಷ್ಟ, ಸೈಕ್ಲೋನ್ ಹೊಡೆದಿಂದ ಕಂಗಾಲಾಗಿದ್ದ ರೈತರಿಗೆ ಗುಡ್ ನ್ಯೂಸ್
- ಪಿಎಂ ಕಿಸಾನ್ 8ನೇ ಕಂತಿನ ಹಣ ಬಿಡುಗಡೆ ಮಾಡಿದ ಮೋದಿ
- ಫಲಾನುಭವಿ ರೈತರಿಗೆ 20,000 ಕೋಟಿ ರೂಪಾಯಿ ಬಿಡುಗಡೆ
ನವದೆಹಲಿ(ಮೇ.14): ಅಕ್ಷಯ ತೃತೀಯ ದಿನ ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಗುಡ್ ನ್ಯೂಸ್ ನೀಡಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಫಲಾನುಭವಿ ರೈತರಿಗೆ 20,000 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದ್ದಾರೆ. ಇದು 8ನೇ ಕಂತಿನ ಹಣವಾಗಿದ್ದು, ಸಂಕಷ್ಟದಲ್ಲಿದ್ದ ರೈತರಿಗೆ ಕೊಂಚ ಸಮಾಧಾನ ತಂದಿದೆ.
ಕೊರೋನಾ ಮಧ್ಯೆ ರೈತರಿಗೆ ಗುಡ್ ನ್ಯೂಸ್: PM-KISAN ನಿಧಿ ಬಿಡುಗಡೆ, ಹೀಗೆ ಚೆಕ್ ಮಾಡಿ!.
8.5 ಕೋಟಿ ಫಲಾನುಭವಿ ರೈತರಿಗೆ ಈ ಹಣ ಬಿಡುಗಡೆ ಮಾಡಲಾಗಿದೆ. 2021-22ರ ಆರ್ಥಿಕ ಸಾಲಿನ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೊದಲ ಕಂತಿನ ಹಣವಾಗಿದೆ. ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಆಗಲಿದೆ. ಹಣ ಬಿಡುಗಡೆ ಮಾಡಿದ ಬಳಿಕ ಪ್ರಧಾನಿ ಮೋದಿ ದೇಶದ ರೈತರನ್ನುದ್ದೇಶಿ ಮಾತನಾಡಿದರು.
ಲಾಕ್‌ಡೌನ್ ಎಫೆಕ್ಟ್: ಕಿಸಾನ್ ಸಮ್ಮಾನ ಯೋಜನೆ, ರೈತರ ಖಾತೆಗೆ ಹಣ ಜಮೆ
ಈ ಹಿಂದಿನ ಕಂತನ್ನು ಡಿಸೆಂಬರ್ 25, 2020ರಂದು ಬಿಡುಗಡೆ ಮಾಡಲಾಗಿತ್ತು. ಕೊರೋನಾ ಕಾರಣ ಲಾಕ್‌ಡೌನ್, ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತ ಸೈಕ್ಲೋನ್ ಕಾರು ಅಕಾಲಿಕ ಮಳೆ ಕೂಡ ರೈತರಿಗೆ ಹೆಚ್ಚಿನ ಸಮಸ್ಯೆಯನ್ನೇ ತಂದೊಡ್ಡಿದೆ.
PM ಕಿಸಾನ್ ಸಮ್ಮಾನ್ ನಿಧಿ:
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ, ಸಣ್ಣ ಹಾಗೂ ಮಧ್ಯಮ ರೈತರಿಗೆ ವರ್ಷಕ್ಕೆ 6,000 ರೂಪಾಯಿ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗುತ್ತದೆ. ಮೂರು ಕಂತುಗಳಲ್ಲಿ ಈ ಹಣ ಬಿಡುಗಡೆ ಮಾಡಲಾಗುತ್ತದಿ. ಪ್ರತಿ ಕಂತಿನಲ್ಲಿ 2,000 ರೂಪಾಯಿ ಹಣ ರೈತರ ಖಾತೆಗೆ ವರ್ಗಾವಣೆ ಆಗಲಿದೆ. 2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಯೋಜನೆ ಆರಂಭಿಸಲಾಗಿದೆ.