ಪ್ರಧಾನಿ ನರೇಂದ್ರ ಮೋದಿಗೆ ಮೊದಲ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿಗೆ ಪ್ರಶಸ್ತಿ ನೀಡಿ ಗೌರವ ದೇಶ ಕಟ್ಟುವ ಕಾರ್ಯದಲ್ಲಿ ಲತಾ ದೀದಿ ಮಹತ್ ಕಾರ್ಯ, ನನ್ನ ಅಕ್ಕ ಎಂದ ಮೋದಿ
ಮುಂಬೈ(ಏ.24); ಪ್ರಧಾನಿ ನರೇಂದ್ರ ಮೋದಿಗೆ ಮೊದಲ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪ್ರಶಸ್ತಿ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ನೆನದು ಭಾವುಕರಾಗಿದ್ದಾರೆ. ನನಗೆ ಲತಾ ದೀದಿ ನನ್ನ ಹಿರಿಯ ಸಹೋದರಿ ಇದ್ದಂತೆ. ಅವರಿಂದ ಅಪಾರ ಪ್ರೀತಿ ಪಡೆದಿದ್ದೇನೆ. ಆದರೆ ಮುಂಬರವು ರಾಖಿ ಹಬ್ಬಕ್ಕೆ ದೀದಿ ಇಲ್ಲ ಅನ್ನೋ ನೋವು ಕಾಡುತ್ತಿದೆ ಎಂದು ಮೋದಿ ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ನೀಡಲಾಗುತ್ತಿದೆ. ಮೊದಲ ಪ್ರಶಸ್ತಿಯನ್ನು ಪ್ರಧಾನಿ ಮೋದಿಗೆ ನೀಡಿ ಗೌರವಿಸಲಾಗಿದೆ. ಖ್ಯಾತ ಹಾಗೂ ಹಿರಿಯ ಗಾಯಕಿ ಆಶಾ ಬೋಸ್ಲೆ, ಲತಾ ಮಂಗೇಶ್ಕರ್ ಕುಟುಂಬ ಸದಸ್ಯರು ಮೋದಿಗೆ ಪ್ರಶಸ್ತಿ ಹಸ್ತಾಂತರಿಸಿದರು.
The Kashmir Files ಮೆಚ್ಚಿದ PM Modi ರುದ್ರಾಕ್ಷಿ ಮಾಲೆ ಉಡುಗೊರೆ ನೀಡಿದ Anupam Kher
ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಪ್ರಧಾನಿ ಮೋದಿ, ಪ್ರಶಸ್ತಿಯನ್ನು ದೇಶದ ಜನತೆಗೆ ಅರ್ಪಿಸಿದ್ದಾರೆ. ಲತಾ ದೀದಿ ಅಕ್ಕನ ಹೆಸರಿನಲ್ಲಿ ನೀಡುವ ಪ್ರಶಸ್ತಿ ಬಂದಾಗ ಅದನ್ನು ಸ್ವೀಕರಿಸದೇ ಇರಲು ಸಾಧ್ಯವಿಲ್ಲ. ಅವರ ಪ್ರೀತಿ, ದೇಶದಲ್ಲಿ ಏಕತೆ, ಸಾಮರಸ್ಯ ಹಾಗೂ ಜನರಲ್ಲಿ ಪ್ರೀತಿ ತುಂಬಿದ ದೀದಿ ಎಂದಿಗೂ ಶ್ವಾಶ್ವತ ಎಂದು ಮೋದಿ ಹೇಳಿದ್ದಾರೆ.
ಲತಾ ಮಂಗೇಶ್ಕರ್ ಸ್ಮರಣಾರ್ಥ ಈ ಪ್ರಶಸ್ತಿ ನೀಡಲು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ. ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿದ ವ್ಯಕ್ತಿಗಳನ್ನು ಆಯ್ಕೆ ಮಾಡಿ ಪ್ರತಿ ವರ್ಷ ಈ ಪ್ರಶಸ್ತಿ ನೀಡಲಾಗುದುವುದು ಎಂದು ಮಾಸ್ಟರ್ ದೀನನಾಥ್ ಮಂಗೇಶ್ಕರ್ ಸ್ಮೃತಿ ಪ್ರತಿಷ್ಠಾನ ಚಾರಿಟಬಲ್ ಟ್ರಸ್ಟ್ ತಿಳಿಸಿದೆ.
ಏಪ್ರಿಲ್ 24 ರಂದು ಗಾಯಕಿ ಲತಾ ಮಂಗೇಶ್ಕರ್ ತಂದೆ ದೀನನಾಥ್ ಮಂಗೇಶ್ಕರ್ ಅವರ 90ನೇ ಪುಣ್ಮಸ್ಮರಣೆ ದಿನವಾಗಿದೆ. ಇದೇ ದಿನ ಪ್ರತಿಷ್ಠಿತ ಪ್ರಶಸ್ತಿಯನ್ನು ವಿತರಿಸಲಾಗಿದೆ.
ಕಾಶ್ಮೀರ ಭೇಟಿ ಬಳಿಕ ನೇರವಾಗಿ ಮುಂಬೈಗೆ ಬಂದಿಳಿದ ಪ್ರಧಾನಿ ಮೋದಿ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಕಾಶ್ಮೀರದಲ್ಲಿ ಪಂಚಾಯತ್ ರಾಜ್ ದಿನ ಅಂಗವಾಗಿ 20,000 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
ರೇಡಿಯೋ ಕಾರ್ಯಕ್ರಮದಲ್ಲಿ ದೇಶದ ಜನತೆಗೆ ಮೋದಿಯಿಂದ ಸಪ್ತ ಪ್ರಶ್ನೆ, ನಿಮಗೆ ಉತ್ತರ ಗೊತ್ತಾ?
29ರಿಂದ ಬೆಂಗಳೂರಲ್ಲಿ ಸೆಮಿಕಾನ್ ಇಂಡಿಯಾ: ಮೋದಿ ಉದ್ಘಾಟನೆ
ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಭವಿಷ್ಯದಲ್ಲಿ ಭಾರತ ವಿಶ್ವ ನಾಯಕನ ಪಟ್ಟಅಲಂಕರಿಸಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಎರಡು ದಶಕಗಳನ್ನು ದೂರದೃಷ್ಟಿಯಲ್ಲಿ ಇಟ್ಟುಕೊಂಡು ಸೆಮಿ ಕಂಡಕ್ಟರ್ ಉತ್ಪಾದನೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ. ದೇಶದಲ್ಲಿ ಮತ್ತೊಂದು ‘ವೈಟುಕೆ’ ಆರಂಭವಾಗಲಿದೆ ಅಂತಲೇ ಹೇಳಬಹುದು. ಸೆಮಿಕಂಡಕ್ಟರ್ ಉತ್ಪಾದನೆ, ಸಂಶೋಧನೆ ಹಾಗೂ ಅಭಿವೃದ್ಧಿ (ಆರ್ ಅಂಡ್ ಡಿ) ದೇಶದಲ್ಲೇ ಆಗುವುದರಿಂದ ಭವಿಷ್ಯದ ಭಾರತ ಬದಲಾಗಲು ಸಹಾಯಕವಾಗಲಿದೆ ಎಂದರು.
ಮತ್ತೆ ಇಬ್ಬರು ಜೈಷ್ ಉಗ್ರರ ಹತ್ಯೆ
ಕಾಶ್ಮೀರದಲ್ಲಿ ಮತ್ತೆ ಪಾಕಿಸ್ತಾನ ಮೂಲದ ಜೈಷ್-ಇ- ಮೊಹಮ್ಮದ್ ಸಂಘಟನೆಗೆ ಸೇರಿದ ಇಬ್ಬರು ಉಗ್ರರು ಶನಿವಾರ ಭದ್ರತಾ ಪಡೆಗಳ ಗುಂಡೇಟಿಗೆ ಬಲಿಯಾಗಿದ್ದಾರೆ. ಈ ಮೊದಲು ಗುರುವಾರ 3 ಉಗ್ರರು ಹಾಗೂ ಶುಕ್ರವಾರ ಇಬ್ಬರು ಆತ್ಮಾಹುತಿ ದಾಳಿಕೋರರು ಸೇನೆಯ ಗುಂಡೇಟಿಗೆ ಬಲಿಯಾಗಿದ್ದರು. ಭಾನುವಾರ ಜಮ್ಮುವಿಗೆ ಪ್ರಧಾನಿ ಮೋದಿ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ದಕ್ಷಿಣ ಕಾಶ್ಮೀರದ ಕುಲಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಉಗ್ರರ ಹುಡುಕಾಟಕ್ಕಾಗಿ ಕಾರ್ಯಾಚರಣೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸೇನಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮತ್ತೆ ಇಬ್ಬರು ಉಗ್ರರು ಬಲಿಯಾಗಿದ್ದಾರೆ.
