ದೊಡ್ಡ ಕನಸಿನೊಂದಿಗೆ ಹೆಜ್ಜೆ ಇಟ್ಟ ಸಣ್ಣ ಪಾರ್ಟಿ, ಹೊಸ ಕಚೇರಿ ಉದ್ಘಾಟಿಸಿ ಬಿಜೆಪಿ ಏಳುಬೀಳು ನೆನೆದ ಮೋದಿ!
ದೆಹಲಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಸುಸಜ್ಜಿತ ಕಟ್ಟಡ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಬಿಜೆಪಿ ಪಯಣವನ್ನು ಸ್ಮರಿಸಿದರು. ಇದೇ ವೇಳೆ ವಿಪಕ್ಷಗಳ ಮೇಲೆ ಹರಿಹಾಯ್ದಿದ್ದಾರೆ.
ನವದೆಹಲಿ(ಮಾ.28): ಸಣ್ಣ ಕಚೇರಿ, ಸಣ್ಣ ಪಕ್ಷ, ಆದರೆ ಕನಸು ದೊಡ್ಡದಾಗಿತ್ತು. ಒಂದೊಂದೆ ಹೆಜ್ಜೆ ಮೂಲಕ ಕನಸು ಸಾಕಾರಗೊಳಿಸಿದ್ದೇವೆ. ಇನ್ನೂ ದೂರ ಸಾಗಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ನೂತನ ಪ್ರಧಾನ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು. ದೆಹಲಿಯಲ್ಲಿ ಸುಸಜ್ಜಿತ ಕಟ್ಟದ ಉದ್ಘಾಟನೆ ಮಾಡಿದ ಮೋದಿ, ಬಿಜೆಪಿಯ ಪಯಣ ಸ್ಮರಿಸಿದರು. ಭಾರತೀಯ ಜನಸಂಘದ ಆರಂಭ ದೆಹಲಿಯ ಅಜ್ಮೇರಿ ಗೇಟ್ ಬಳಿಯ ಸಣ್ಣ ಕಚೇರಿಯಿಂದ ಆರಂಭಗೊಂಡಿತು. ಆ ಸಮಯದಲ್ಲಿ ಅತೀ ದೊಡ್ಡ ಕನಸು ಇಟ್ಟುಕೊಂಡ ಸಣ್ಣ ಪಕ್ಷವಾಗಿತ್ತು. ಬಿಜೆಪಿ ಜನ್ಮತಾಳಿದಾಗ ಸಣ್ಣ ಕಚೇರಿಯನ್ನು ತೆರೆಯಲಾಗಿತ್ತು. ನಮ್ಮ ಪಕ್ಷ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹೋರಾಡಿದ ಪಕ್ಷ ನಮ್ಮದು. ದೇಶ ಹಿತಕ್ಕಾಗಿ ಪಕ್ಷವನ್ನ ಅಂತ್ಯಗೊಳಿಸಲಾಗಿತ್ತು ಎಂದು ಮೋದಿ ಹೇಳಿದ್ದಾರ.
1984ರಲ್ಲಿ ನಡೆದ ಘಟನೆ ಯಾವತ್ತೂ ಪಕ್ಷ ಮರೆಯುವುದಿಲ್ಲ. ಇತ್ತ ಕಾಂಗ್ರೆಸ್ ಅದ್ಭುತ ಗೆಲುವು ದಾಖಲಿಸಿ ಅಧಿಕಾರಕ್ಕೇರಿತ್ತು. ಬಿಜೆಪಿ ಬಹುತೇಕ ನಿರ್ನಾಮಗೊಂಡಿತ್ತು. ಆದರೆ ಬಿಜೆಪಿ ಕಾರ್ಯಕರ್ತರು ನಿರಾಸೆಗೊಂಡಿಲ್ಲ. ಬಿಜೆಪಿ ನಾಯಕರು, ಕಾರ್ಯಕರ್ತರು ಆರೋಪ, ಪ್ರತ್ಯಾರೋಪ ಮಾಡಲು ಸಮಯ ವ್ಯರ್ಥ ಮಾಡಲಿಲ್ಲ. ನಾವು ಜನರ ನಡುವೆ ಹೋಗಿ ಸಂಘಟನೆ ಬಲಗೊಳಿಸಿದೇವು. ಇದರ ಪರಿಣಾಮ ಈಗ ನಾವು ಇಲ್ಲಿದ್ದೇವೆ.ಕೇವಲ 2 ಲೋಕಸಭಾ ಸ್ಥಾನದಿಂದ ಇದೀಗ 303 ಸ್ಥಾನ ಗೆದ್ದಿದ್ದೇವೆ. ಇಂದು ಉತ್ತರದಿಂದ ದಕ್ಷಿಣ, ಪಶ್ಚಿಮದಿಂದ ಪೂರ್ವ ವರೆಗೆ ಬಿಜೆಪಿ ಮಾತ್ರ ಪ್ಯಾನ್ ಇಂಡಿಯಾ ಪಾರ್ಟಿಯಾಗಿದೆ ಎಂದರು.
ಅಂಗಾಂಗ ದಾನ ಮಾಡಿ: 99ನೇ ಮನ್ ಕೀ ಬಾತ್ ಭಾಷಣದಲ್ಲಿ ಜನತೆಗೆ ಮೋದಿ ಕರೆ
ಬಿಜೆಪಿ ಯಾವುದೇ ಕುಟುಂಬದ ಹಿಡಿತದಲ್ಲಿರುವ ಪಕ್ಷವಲ್ಲ. ಇಲ್ಲಿ ಯುವಕರಿಗೆ ವಿಫುಲ ಅವಕಾಶಗಳಿವೆ. ಇಂದು ಮಹಿಳೆಯರು, ತಾಯಿಂದಿರು ಆಶೀರ್ವಾದ ಮಾಡಿದ ಪಕ್ಷ ಎಂದರೆ ಅದು ಬಿಜೆಪಿ. ಇಂದು ಬಿಜೆಪಿ ವಿಶ್ವದ ಅತೀ ದೊಡ್ಡ ಪಕ್ಷ ಮಾತ್ರವಲ್ಲ, ಉಜ್ವಲ ಭವಿಷ್ಯದ ಪಾರ್ಟಿ ಎಂದು ಮೋದಿ ಹೇಳಿದ್ದಾರೆ. ಉತ್ತಮ ಭವಿಷ್ಯಕ್ಕಾಗಿ ದುಡಿಯುವ ಪಕ್ಷ ಬಿಜೆಪಿ. ಆಧುನಿಕ ಆಲೋಚನೆ, ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡು ನಾವು ಮುನ್ನಡೆಯಬೇಕು ಎಂದು ಮೋದಿ ಹೇಳಿದ್ದಾರೆ.
ಪಂಡಿತ್ ದೀನದಯಾಳ್ ಸಂಘಟನೆ ಮಾತ್ರವಲ್ಲ, ಅಧ್ಯಯನ ಮಾಡುತ್ತಿದ್ದರು. ಬಿಜೆಪಿಯ ಹೊಸ ಕಟ್ಟಡ, ಪಕ್ಷದ ಕೇಂದ್ರವಾಗಿದೆ. ಇಲ್ಲಿ ಅಧ್ಯಯನಕ್ಕೆ ವ್ಯವಸ್ಥೆ ಇದೆ. ಅಧುನಿಕತೆಯೂ ಇದೆ. ಜೊತೆಗೆ ವಿಶ್ವದ ಅನುಭವ ಪಡೆಯಲು ಅವಕಾಶ ಹಾಗೂ ವೇದಿಕೆಯೂ ಇದೆ ಎಂದು ಮೋದಿ ಹೇಳಿದ್ದಾರೆ. ನಮ್ಮಸಂಸ್ಕೃತಿ, ಪರಂಪರೆ ಬಗ್ಗೆ ಹೆಮ್ಮೆಯಿಟ್ಟುಕೊಂಡಿರುವ ಪಕ್ಷದಲ್ಲಿ ನಮ್ಮ ಕಾರ್ಯಕರ್ತರು ಸೇವೆ ಸಲ್ಲಿಸುತ್ತಿದ್ದಾರೆ. ಬಿಜೆಪಿ ವಿಶ್ವದ ಪ್ರಮುಖ ಪಾರ್ಟಿಯಾಗಿ ಗುರುತಿಸಿಕೊಂಡಿದೆ.
ಮೋದಿ ದಾವಣಗೆರೆ ರೋಡ್ ಶೋ ವೇಳೆ ಭದ್ರತಾ ವೈಫಲ್ಯ, ಯುವಕನ ನಡೆಯಿಂದ ಆತಂಕಗೊಂಡ ಭದ್ರತಾ ಪಡೆ!
ಕಳೆದ 4 ಹಾಗೂ 5 ದಶಕಗಳಲ್ಲಿ ಕಾರ್ಯಕರ್ತರು ಮಾಡಿದ ತ್ಯಾಗ ಹಾಗೂ ಬಲಿದಾನದಿಂದ ಈಗ ಉತ್ತಮ ಸ್ಥಿತಿಯಲ್ಲಿ ನಾವಿದ್ದೇವೆ. ಸಶಕ್ತ ಭಾರತದ ಕನಸನ್ನು ಇಟ್ಟುಕೊಂಡು ಮುನ್ನಡೆಯುತ್ತಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್ ಮಂತ್ರದೊಂದಿಗೆ ನಾವು ಮುನ್ನಡೆಯುತ್ತಿದ್ದೇವೆ.