- ವಿಶ್ರಾಂತಿ ಪಡೆಯದೆ ರಾತ್ರಿವರೆಗೂ ಮೀಟಿಂಗ್- ಮುಂಗಾರು ಪೂರ್ವ ಸಿದ್ಧತೆಗಳ ಬಗ್ಗೆ ಪರಿಶೀಲನೆ- ಮೂರು ದಿನಗಳ ಯುರೋಪ್ ಪ್ರವಾಸ ಮುಗಿಸಿ ನೇರವಾಗಿ ಕಚೇರಿಗೆ
ನವದೆಹಲಿ (ಮೇ.6): 3 ದಿನಗಳ ಎಡೆಬಿಡದ ವಿದೇಶ ಪ್ರವಾಸದಿಂದ (foreign trip) ಹಿಂದಿರುಗಿದ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ವಿಶ್ರಾಂತಿ ಕೂಡ ಪಡೆಯದೆ ಬಿರು ಬೇಸಿಗೆ (Heatwave), ಬಿಸಿಗಾಳಿ ನಿರ್ವಹಣೆ, ಮುಂಗಾರು ಪೂರ್ವ ಸಿದ್ಧತೆಗಳನ್ನು(monsoon preparedness) ಪರಿಶೀಲಿಸಲು ಹಾಗೂ ಕೃಷಿ ಉತ್ಪನ್ನಗಳ ಗುಣಮಟ್ಟಕಾಯ್ದುಕೊಳ್ಳಲು 7 ಉನ್ನತ ಮಟ್ಟದ ಸತತ ಸಭೆಗಳನ್ನು ನಡೆಸಿದ್ದಾರೆ. ಬಿಸಿಗಾಳಿ ಮತ್ತು ಬೆಂಕಿ ಅವಘಡಗಳಿಂದಾಗುವ ಪ್ರಾಣಾಪಾಯವನ್ನು ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳುವ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ.
ಮೋದಿ ಅವರು ಗುರುವಾರ ಮಧ್ಯಾಹ್ನ ಫ್ರಾನ್ಸ್‌ನಿಂದ (France) ಮರಳಿದರು. ಕೂಡಲೇ ನೇರವಾಗಿ ತಮ್ಮ ಕಚೇರಿಗೆ (PMO) ತೆರಳಿದ ಅವರು ಉನ್ನತ ಮಟ್ಟದ ಸಭೆಗಳನ್ನು ರಾತ್ರಿಯವರೆಗೆ ನಡೆಸಿದರು. ಸಭೆಯಲ್ಲಿ ಭಾರತೀಯ ಹವಾಮಾನ ಇಲಾಖೆ (India Meteorological Department) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ದೇಶಾದ್ಯಂತ 2022ರ ಮಾರ್ಚ್ ನಿಂದ ಮೇವರೆಗೆ ಉಂಟಾಗಿರುವ ತಾಪಮಾನ ಹೆಚ್ಚಳದ ಬಗ್ಗೆ ವಿವರಣೆ ನೀಡಿದರು.
ಇದಕ್ಕೆ ಉತ್ತರಿಸಿದ ಮೋದಿ, ‘ಹೆಚ್ಚುತ್ತಿರುವ ತಾಪಮಾನದ ದೃಷ್ಟಿಯಿಂದ ಆಸ್ಪತ್ರೆಗಳಲ್ಲಿ ನಿಯಮಿತವಾಗಿ ಬೆಂಕಿ ಸುರಕ್ಷತಾ ಕ್ರಮಗಳನ್ನು ಕುರಿತು ಪರಿಶೀಲನೆ ನಡೆಸಬೇಕು. ಅರಣ್ಯಗಳನ್ನು ರಕ್ಷಿಸಲು, ಅರಣ್ಯಗಳ ದುರ್ಬಲತೆಯನ್ನು ಕಡಿಮೆ ಮಾಡಲು, ಅರಣ್ಯದ ಬೆಂಕಿಗಳನ್ನು ಸರಿಯಾದ ಸಮಯಕ್ಕೆ ಪತ್ತೆಹಚ್ಚಲು ಮತ್ತು ಈ ಬೆಂಕಿಯ ವಿರುದ್ಧ ಹೋರಾಡಲು ಅರಣ್ಯ ಸಿಬ್ಬಂದಿ ಮತ್ತು ಸಂಸ್ಥೆಗಳ ಸಾಮರ್ಥ್ಯವನ್ನು ಹೆಚ್ಚಿಸಬೇಕು’ ಎಂದು ಸೂಚಿಸಿದರು. ಪ್ರವಾಹ ಪೀಡಿತ ರಾಜ್ಯಗಳಲ್ಲಿ ಹೆಚ್ಚಿನ ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲು ಕೂಡ ಅವರು ಆದೇಶಿಸಿದರು.
ಮಾನ್ಸೂನ್ ಸಿದ್ಧತೆ ನಡೆಸಿ: ಮುಂದಿನ ದಿನಗಳಲ್ಲಿ ಆಗಮಿಸಲಿರುವ ಮಾನ್ಸೂನ್ ಮಾರುತಗಳನ್ನು ಗಮನದಲ್ಲಿಟ್ಟುಕೊಂಡು, ನೀರು ಕಲುಷಿತವಾಗುವುದನ್ನು ತಪ್ಪಿಸಲು ಮತ್ತು ನೀರಿನಿಂದ ಹರಡುವ ರೋಗಗಳನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಪ್ರವಾಹಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಧಾನಮಂತ್ರಿಗಳು ತಾಕೀತು ಮಾಡಿದರು.
ಗೋಧಿ ಬೆಳೆ ಉತ್ಪಾದನೆ, ರಫ್ತು ಬಗ್ಗೆ ಚರ್ಚೆ: ಇದೇ ಸಮಯದಲ್ಲಿ ಭಾರತದಲ್ಲಿ ಗೋಧಿ ಉತ್ಪಾದನೆ (Wheat production), ಪೂರೈಕೆ, ದಾಸ್ತಾನು ಮತ್ತು ರಫ್ತು ಸಂಬಂಧಿಸಿದಂತೆಯೂ ಚರ್ಚೆ ನಡೆಸಿದರು. ದೇಶದಲ್ಲಿನ ಬೆಳೆಗಳು ಹಾಗೂ ಧಾನ್ಯದ ಗುಣಮಟ್ಟಕಾಯ್ದುಕೊಳ್ಳಬೇಕು. ರೈತರಿಗೆ ಅಧಿಕಾರಿಗಳು ಸಹಾಯ ಮಾಡಬೇಕು ಎಂದು ಪ್ರಧಾನಿ ಸೂಚಿಸಿದರು. ಸಭೆಯಲ್ಲಿ ಪ್ರಧಾನ ಮಂತ್ರಿಗಳ ಸಲಹೆಗಾರರು, ಸಚಿವಾಲಯಗಳ ಕಾರ್ಯದರ್ಶಿಗಳು, ಎಲ್ಲಾ ಸಚಿವಾಲಯಗಳ ಮಂತ್ರಿಗಳು, ಐಎಂಡಿ ಮತ್ತು ಎನ್‌ಡಿಎಂಎಗಳ ಸದಸ್ಯರು ಭಾಗಿಯಾಗಿದ್ದರು.
PM Modi Review Meeting ಗೋಧಿ ಪೂರೈಕೆ, ರಫ್ತು, ದಾಸ್ತಾನು ಪರಿಸ್ಥಿತಿ ಕುರಿತು ಪ್ರಧಾನಿ ಮೋದಿ ಪರಿಶೀಲನಾ ಸಭೆ!
ಪ್ರಧಾನಿ ನರೇಂದ್ರ ಮೋದಿ ಅವರು ಮೇ 2 ರಿಂದ 4 ರವರೆಗೆ ಜರ್ಮನಿ, ಡೆನ್ಮಾರ್ಕ್ ಮತ್ತು ಫ್ರಾನ್ಸ್ ಪ್ರವಾಸದಲ್ಲಿದ್ದರು. ಈ ವೇಳೆ ಅವರು 65 ಗಂಟೆಗಳಲ್ಲಿ ಏಳು ದೇಶಗಳ ಎಂಟು ಜಾಗತಿಕ ನಾಯಕರೊಂದಿಗೆ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಭೆಗಳನ್ನು ನಡೆಸಿದರು. ಪ್ರಧಾನಿ ತಮ್ಮ ವಿದೇಶ ಪ್ರವಾಸದ ವೇಳೆ ಸುಮಾರು 25 ಸಭೆಗಳನ್ನು ನಡೆಸಿದ್ದಾರೆ. ಇದಲ್ಲದೆ, ಪ್ರಧಾನಿ ಮೋದಿ ಅವರು 50 ಜಾಗತಿಕ ಉದ್ಯಮಿಗಳ ಜೊತೆ ಮಾತುಕತೆ ನಡೆಸಿದರು.
ಮುಂಬೈನಲ್ಲಿ 130 ಕೇಸು: 3 ತಿಂಗಳ ಗರಿಷ್ಠ
ಮುಂಬೈ/ದಿಲ್ಲಿ: ದೇಶದಲ್ಲಿ 4ನೇ ಅಲೆ ಭೀತಿ ನಡುವೆಯೇ 130 ಕೋವಿಡ್ ಕೇಸುಗಳು ಮುಂಬೈನಲ್ಲಿ ಗುರುವಾರ ದಾಖಲಾಗಿವೆ. ಇದು ಫೆಬ್ರವರಿ ನಂತರದ ಗರಿಷ್ಠ ಪ್ರಕರಣಗಳ ಸಂಖ್ಯೆಯಾಘಿದೆ. ಆದರೆ ಯಾವುದೇ ಸಾವು ಸಂಭವಿಸಿಲ್ಲ. ಬುಧವಾರ 117 ಪ್ರಕರಣ ದಾಖಲಾಗಿದ್ದವು. ಗುರುವಾರ ಸೋಂಕಿನ ಪ್ರಮಾಣ ಇನ್ನಷ್ಟುಏರಿದೆ. ನಗರದಲ್ಲಿ 682 ಸಕ್ರಿಯ ಕೇಸು ಇವೆ.
ಅದೃಷ್ಟ ಪರೀಕ್ಷೆಗೆ ಉಳಿದಿರೋದು ಎರಡೇ ವರ್ಷ: ಮತ್ತೆ ಘಟಿಸುತ್ತಾ 2019ರ ಮ್ಯಾಜಿಕ್?
ದಿಲ್ಲಿಯಲ್ಲಿ ಶೇ.6.35 ಪಾಸಿಟಿವಿಟಿ: ದಿಲ್ಲಿಯಲ್ಲಿ 1,365 ಪ್ರಕರಣ ವರದಿಯಾಗಿದ್ದು, ಯಾವುದೇ ಸಾವು ಸಂಭವಿಸಿಲ್ಲ. ಆದರೆ ಪಾಸಿಟಿವಿಟಿ ದರ ಆತಂಕಕಾರಿ ಎನ್ನಬಹುದಾದ ಶೇ.6.35ರಷ್ಟಿದೆ. ಬುಧವಾರ ಶೇ.7.34 ಇತ್ತು.
