Asianet Suvarna News Asianet Suvarna News

PM Modi Review Meeting ಗೋಧಿ ಪೂರೈಕೆ, ರಫ್ತು, ದಾಸ್ತಾನು ಪರಿಸ್ಥಿತಿ ಕುರಿತು ಪ್ರಧಾನಿ ಮೋದಿ ಪರಿಶೀಲನಾ ಸಭೆ!

  • ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಭೆ
  • ತಾಪಮಾನದಿಂದ ಬೆಳೆ ಉತ್ಪಾದನೆ ಮೇಲೆ ಪರಿಣಾಮ
  • ಮಹತ್ವದ ಸಭೆಯಲ್ಲಿ ಭಾರತದ ಕೃಷಿ ಉತ್ಪನ್ನ ಮಾಹಿತಿ
     
PM Narendra Modi chaired review  meeting situation of Wheat supply stocks and exports ckm
Author
Bengaluru, First Published May 5, 2022, 9:11 PM IST

ನವದೆಹಲಿ(ಮೇ.05): ವಿದೇಶಿ ಪ್ರವಾಸದಿಂದ ಭಾರತಕ್ಕೆ ಮರಳಿದ ಪ್ರಧಾನಿ ನರೇಂದ್ರ ಮೋದಿ ಸತತ ಸಭೆಗಳನ್ನು ನಡೆಸಿ ದೇಶದ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಬಿಸಿ ಗಾಳಿ ಹಾಗೂ ಮುಂಗಾರು ಸಿದ್ಧತೆ ಕುರಿತು ಸಭೆ ನಡೆಸಿದ ಮೋದಿ, ಬಳಿಕ ದೇಶದಲ್ಲಿನ ಗೂಧಿ ಪೂರೈಕೆ, ದಾಸ್ತಾನು ಹಾಗೂ ರಫ್ತಿನ ಪರಿಸ್ಥಿತಿ ಕುರಿತು ಮೋದಿ ಪರಿಶೀಲನಾ ಸಭೆ ನಡೆಸಿದ್ದಾರೆ. 

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಕೃಷಿ ಬೆಳೆ ಹಾಗೂ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಧಿಕಾರಿಗಳು ವಿವರಣೆ ನೀಡಿದ್ದಾರೆ. ಹೆಚ್ಚಾಗುತ್ತಿರುವ ತಾಪಮಾನ ಬೆಳೆಗಳ ಮೇಲೆ ಪರಿಣಾಮ ಬೀರಿದೆ. 2022ರ ಮಾರ್ಚ್ ಹಾಗೂ ಎಪ್ರಿಲ್ ತಿಂಗಳಲ್ಲಿ ಹೆಚ್ಚಿನ ತಾಪಮಾನದ ಪರಿಣಾಮ ಕೃಷಿ ಬೆಳೆ ಹಾಗೂ ಉತ್ಪನ್ನಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಅಧಿಕಾರಿಗಳು ಮೋದಿಗೆ ವಿವರಿಸಿದ್ದಾರೆ.

ಸಿಪ್ಪೆ ಸುಲಿದ ಹಲಸಿನ ಹಣ್ಣು ಕೇರಳದಿಂದ ಲಂಡನ್‌ಗೆ ರಫ್ತು

ಸದ್ಯ ಭಾರತದಲ್ಲಿನ ಗೋಧಿ ಉತ್ಪಾದನೆ, ದಾಸ್ತಾನು ಸಂಗ್ರಹ ಹಾಗೂ ರಫ್ತುಗಳ ಮಾಹಿತಿಯನ್ನು ಮೋದಿ ಪರಿಶೀಲಿಸಿದರು. ಇದೇ ವೇಳೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ  ಕೃಷಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ. ಭಾರತದ ಆಹಾರ ಧಾನ್ಯ ಮತ್ತು ಇತರ ಬೆಳೆಗಳ ಬೇಡಿಕೆ ಹೆಚ್ಚಾಗಿರುವ ಕಾರಣ, ಅಂತಾರಾಷ್ಟ್ರೀಯ ಮಾನದಂಡ ಹಾಗೂ ಗುಣಮಟ್ಟ ಕಾಯ್ದುಕೊಳ್ಳುವಂತೆ ಮೋದಿ ನಿರ್ದೇಶ ನೀಡಿದ್ದಾರೆ.

ಇದೇ ವೇಳೆ ರೈತರಿಗೆ ಗರಿಷ್ಠ ನೆರವು ನೀಡುವಂತೆ ಮೋದಿ ಸೂಚಿಸಿದ್ದಾರೆ. ಬೆಳೆಗಳ ಮಾಹಿತಿ, ಆರ್ಥಿಕ ಸವಾಲುಗಳ ಎದುರಿಸುವ ರೀತಿ, ಸರ್ಕಾರದ ಯೋಜನೆಗಳ, ಸೌಲಭ್ಯಗಳ ಪ್ರಯೋಜನ ಪಡೆದುಕೊಳ್ಳುವಂತೆ ರೈತರಿಗೆ ಸೂಚಿಸಲು ಮೋದಿ ನಿರ್ದೇಶಿಸಿದ್ದಾರೆ.   ಇದೇ ವೇಳೆ ಅಧಿಕಾರಿಗಳು ರೈತರಿಗೆ ಲಾಭದಾಯಕವಾಗಿರುವ ಚಾಲ್ತಿಯಲ್ಲಿರುವ ಮಾರುಕಟ್ಟೆ ದರಗಳ ಬಗ್ಗೆಯೂ ಮೋದಿಗೆ ವಿವರಿಸಲಾಯಿತು.

ನೀತಿ ಆಯೋಗದ ರಫ್ತು ಸನ್ನದ್ಧತೆ ಸೂಚ್ಯಂಕ ಬಿಡುಗಡೆ: ದೇಶಕ್ಕೇ ಕರ್ನಾಟಕ ನಂ.3

ಭಾರತದ ಗೋಧಿ ರಫ್ತಿನ ಪ್ರಮಾಣ ಹೆಚ್ಚಳ
ರಷ್ಯಾ-ಉಕ್ರೇನ್‌ ಬಿಕ್ಕಟ್ಟು ಆರಂಭವಾದ ಬಳಿಕ ಭಾರತದ ಗೋಧಿ ರಫ್ತಿನಲ್ಲಿ ಏರಿಕೆಯಾಗಿದೆ. ಜೊತೆಗೆ ಮಾರಾಟದಿಂದ ಲಾಭವೂ ಹೆಚ್ಚಾಗಿದೆ ಎಂದು ಕೇಂದ್ರ ಆಹಾರ ಕಾರ್ಯದರ್ಶಿ ಸುಧಾನ್ಷು ಪಾಂಡೆ ಹೇಳಿದ್ದಾರೆ. ವಿಶ್ವದಲ್ಲೇ ಗೋಧಿ ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿರುವ ಭಾರತದ ಗೋಧಿ ರಫ್ತುನಿಂದ ಬರುತ್ತಿದ್ದ ಲಾಭ ಹೆಚ್ಚಾಗಿದೆ. ಉಕ್ರೇನ್‌ ಮತ್ತು ರಷ್ಯಾ ನಡುವಿನ ಯುದ್ಧದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೋಧಿಯ ಬೇಡಿಕೆ ಹೆಚ್ಚಾಗಿರುವುದರಿಂದ ಬೆಲೆಯೂ ಏರಿಕೆ ಕಂಡಿದೆ. ದೇಶದ ಗೋಧಿ ರಫ್ತಿನ ಪ್ರಮಾಣ ಈಗಾಗಲೇ 66 ಲಕ್ಷ ಟನ್‌ ಮೀರಿದೆ ಎಂದು ಪಾಂಡೆ ಹೇಳಿದ್ದಾರೆ. ಮಾ.15ರ ನಂತರ ಭಾರತದಲ್ಲಿ ಗೋಧಿಯ ಹೊಸ ಬೆಳೆ ಬರಲಿದೆ. ಹಾಗಾಗಿ ಇದು ಭಾರತಕ್ಕೆ ಉತ್ತಮ ಅವಕಾಶವಾಗಿದೆ. ರಷ್ಯಾ ಮತ್ತು ಉಕ್ರೇನ್‌ ವಿಶ್ವದ ಗೋಧಿ ಬೇಡಿಕೆಯ ಶೇ.25ರಷ್ಟನ್ನು ಪೂರೈಕೆ ಮಾಡುತ್ತಿದ್ದವು. ಈಗ ಎರಡು ದೇಶಗಳ ನಡುವೆ ಯುದ್ಧ ಪ್ರಾರಂಭವಾಗಿರುವುದರಿಂದ ಭಾರತಕ್ಕೆ ಅವಕಾಶ ದೊರಕಿದೆ’ ಎಂದು ಅವರು ಹೇಳಿದರು.

Follow Us:
Download App:
  • android
  • ios