Asianet Suvarna News Asianet Suvarna News

'ಪುರಿ ಜಗನ್ನಾಥ ದೇವಸ್ಥಾನದ ರತ್ನ ಭಂಡಾರದ ಕೀ ಎಲ್ಲಿದೆ' ಒಡಿಶಾದಲ್ಲಿ ಬಿಜೆಡಿ ಸರ್ಕಾರಕ್ಕೆ ಪ್ರಶ್ನಿಸಿದ ಮೋದಿ!

ನವೀನ್ ಪಟ್ನಾಯಕ್ ಅವರ ಆಡಳಿತಾರೂಢ ಬಿಜೆಡಿ ವಿರುದ್ಧ ಬಿಜೆಪಿ ತನ್ನ ವಾಗ್ದಾಳಿಯನ್ನು ಹೆಚ್ಚಿಸುತ್ತಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಒಡಿಶಾದಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ಭರ್ಜರಿಯಾಗಿ ಆಯೋಜನೆ ಮಾಡಿದ್ದಾರೆ.

PM Modi raises missing keys of the Ratna Bhandar of Puri temple san
Author
First Published May 20, 2024, 3:59 PM IST

ನವದೆಹಲಿ (ಮೇ.20): ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಒಡಿಶಾದ ಪುರಿಯಲ್ಲಿರುವ ಪ್ರಸಿದ್ಧ ಜಗನ್ನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಕೆ ಮಾಡಿದರು. ಇದರ  ಬೆನ್ನಲ್ಲಿಯೇ ಒಡಿಶಾದ ಜಗತ್ಪ್ರಸಿದ್ಧ ಪುರಿ ಜಗನ್ನಾಥ ದೇವಸ್ಥಾನದ ರತ್ನ ಭಂಡಾರ್ ಕೀಲಿಗಳು ಕಾಣೆಯಾಗಿರುವ ಬಗ್ಗೆ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನವೀನ್ ಪಟ್ನಾಯಕ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಬಿಜೆಡಿ ಆಡಳಿತದಲ್ಲಿ 12ನೇ ಶತಮಾನದ ದೇವಾಲಯ ಸುರಕ್ಷಿತವಾಗಿಲ್ಲ ಎಂದು ಹೇಳಿದ್ದಾರೆ. ಅಂಗುಲ್‌ನಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪಿಎಂ ಮೋದಿ, "ಬಿಜೆಡಿ ಆಡಳಿತದಲ್ಲಿ ಪುರಿಯ ಜಗನ್ನಾಥ ದೇವಾಲಯ ಸುರಕ್ಷಿತವಲ್ಲ. ಕಳೆದ 6 ವರ್ಷಗಳಿಂದ 'ರತ್ನ ಭಂಡಾರ್'ದ ಕೀಲಿಗಳು ನಾಪತ್ತೆಯಾಗಿವೆ ಎಂದು ಹೇಳಿದ್ದಾರೆ. ಮೇ 25 ರಂದು ರಾಜ್ಯ ರಾಜಧಾನಿ ಭುವನೇಶ್ವರ ಸೇರಿದಂತೆ ಪುರಿ ಕ್ಷೇತ್ರಕ್ಕೂ ಚುನಾವಣೆ ನಡೆಯಲಿದೆ.

ಏನಿದು ವಿಚಾರ: ಪುರಿಯ ಜಗನ್ನಾಥ ದೇವಸ್ಥಾನದ ಇಡೀ ಒಡಿಶಾ ರಾಜ್ಯದ ಹಾಗೂ ದೇಶದ ಅತ್ಯಂತ ಪ್ರಖ್ಯಾತ ಹಾಗೂ ಶ್ರೀಮಂತ ದೇವಸ್ಥಾನಗಳಲ್ಲಿ ಒಂದು. ಈ ದೇವಸ್ಥಾನದ ರತ್ನ ಭಂಡಾರ ಹಾಗೂ ಇದರಲ್ಲಿರುವ ಪ್ರತಿ ಒಡವೆಗಳ ವಿಚಾರದಲ್ಲೂ ಒಂದೊಂದು ಕಥೆಗಳಿವೆ.  ಈ ರತ್ನ ಭಂಡಾರದಲ್ಲಿ ಭಗವಾನ್‌ ಜಗನ್ನಾಥ, ಭಗವಾನ್‌ ಭಲಭದ್ರ ಹಾಗೂ ಸುಭದ್ರಾ ಮಾತೆಯ ಅತ್ಯಂತ ಅಮೂಲ್ಯ ರತ್ನಖಚಿತ ಆಭರಣಗಳನ್ನು ಇದು ಹೊಂದಿದೆ. ಶತಮಾನಗಳಿಂದಲೂ ಭಕ್ತರು ಹಾಗೂ ರಾಜರು ನೀಡಿರುವ ಆಭರಣಗಳನ್ನು ಇಲ್ಲಿನ ರತ್ನ ಭಂಡಾರದಲ್ಲಿ ಇಡಲಾಗಿದೆ. 1985ರ ಜುಲೈ 14 ರಂದು ಕೊನೆಯಬಾರಿಗೆ ಈ ದೇವಸ್ಥಾನದ ರತ್ನ ಭಂಡಾರವನ್ನು ತೆಗೆದು ಆಭರಣಗಳ ಪರಿಶೀಲನೆ ಮಾಡಲಾಗಿತ್ತು. 2018 ರಲ್ಲಿ, ಒರಿಸ್ಸಾ ಹೈಕೋರ್ಟ್ ರತ್ನ ಭಂಡಾರವನ್ನು ತೆಗೆದು ಭೌತಿಕ ತಪಾಸಣೆ ಮಾಡುವಂತೆ ಸರ್ಕಾರಕ್ಕೆ ಸೂಚನೆ ನೀಡಿತ್ತು. ಆದರೆ, ಈ ವೇಳೆ ಒಡಿಶಾ ಸರ್ಕಾರ ಈ ಭಂಡಾರದ ಕೀಲಿಗಳು ನಾಪತ್ತೆಯಾಗಿವೆ ಎಂದು ಹೇಳಿದ್ದು, ರಾಜ್ಯಾದ್ಯಂತ ಅಕ್ರೋಶಕ್ಕೆ ಕಾರಣವಾಗಿತ್ತು. ಆದರೆ, ಈ ಹಂತದಲ್ಲಿ ಜನರ ಆಕ್ರೋಶವನ್ನು ಸರ್ಕಾರ ನಿಭಾಯಿಸುವಲ್ಲಿ ಯಶಸತವಿಯಾಗಿತ್ತು. ಈಗ ಪ್ರಧಾನಿ ನರೇಂದ್ರ ಮೋದಿ ಮತ್ತೆ ಈ ವಿಚಾರವನ್ನು ನೆನಪು ಮಾಡಿಸಿದ್ದಾರೆ.

"ಪುರಿಯಲ್ಲಿ ಮಹಾಪ್ರಭು ಜಗನ್ನಾಥನಿಗೆ ಪ್ರಾರ್ಥಿಸಿದೆ. ಅವರ ಆಶೀರ್ವಾದ ಯಾವಾಗಲೂ ನಮ್ಮ ಮೇಲೆ ಇರಲಿ ಮತ್ತು ಪ್ರಗತಿಯ ಹೊಸ ಎತ್ತರಕ್ಕೆ ನಮ್ಮನ್ನು ಮಾರ್ಗದರ್ಶಿಸಲಿ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ನಂತರ ಅವರು ಮಾರ್ಚಿಕೋಟೆ ಚೌಕ್‌ನಿಂದ ಪುರಿಯ ವೈದ್ಯಕೀಯ ಚೌಕದವರೆಗೆ ಎರಡು ಕಿಲೋಮೀಟರ್ ಬೃಹತ್ ರೋಡ್‌ಶೋ ನಡೆಸಿದರು ಮತ್ತು ಬಿಜೆಪಿಯ ಪುರಿ ಲೋಕಸಭಾ ಅಭ್ಯರ್ಥಿ ಸಂಬಿತ್ ಪಾತ್ರ ಮತ್ತು ರಾಜ್ಯಾಧ್ಯಕ್ಷ ಮನಮೋಹನ್ ಸಮಾಲ್ ಅವರೊಂದಿಗೆ ಇದ್ದರು.

ಕದ್ದುಮುಚ್ಚಿ 2ನೇ ಮದುವೆಗೆ ರೆಡಿಯಾಗ್ತಿದ್ದ ಮಗ, ದರದರನೆ ಎಳೆದು ಪೊಲೀಸರಿಗೆ ಒಪ್ಪಿಸಿದ ತಂದೆ!

ಇದು ಕಳೆದ 10 ದಿನಗಳಲ್ಲಿ ಒಡಿಶಾಗೆ ಪಿಎಂ ಮೋದಿಯವರ ಎರಡನೇ ಭೇಟಿ ಇದಾಗಿದೆ. ಇತ್ತೀಚಿನ ದಿನಗಳಲ್ಲಿ ಒಡಿಶಾದಲ್ಲಿ ಬಿಜೆಡಿಗೆ ಬಿಜೆಪಿಯೇ ಅತಿದೊಡ್ಡ ಎದುರಾಳಿಯಾಗಿದೆ.  ಒಡಿಶಾದಲ್ಲಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಮತ್ತು ಬಿಜೆಡಿ ವಿಫಲವಾದ ನಂತರ ಪಕ್ಷಗಳ ನಡುವಿನ ಜಟಾಪಟಿ ತೀವ್ರಗೊಂಡಿದೆ. 2009ರಲ್ಲಿ ಎನ್‌ಡಿಎ ಮೈತ್ರಿಕೂಟದಿಂದ ಬಿಜೆಡಿ ಹೊರಬೀಳುವ ಮುನ್ನ ಎಂಟು ವರ್ಷಗಳ ಕಾಲ ಬಿಜೆಪಿ ಹಾಗೂ ಬಿಜೆಪಿ ಒಡಿಶಾದಲ್ಲಿ ಜೊತೆಯಾಗಿದ್ದವು. ಈ ಹಿಂದೆ ಬಿಜೆಡಿ ಸರ್ಕಾರವನ್ನು ಟೀಕಿಸುವುದನ್ನು ತಪ್ಪಿಸುತ್ತಿದ್ದ ಪ್ರಧಾನಿ ಮೋದಿ, ಈಗ ತಮ್ಮ ರ್ಯಾಲಿಗಳಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಮೇಲೆ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಮೇ 11 ರ ರ್ಯಾಲಿಯಲ್ಲಿ, ಪಿಎಂ ಮೋದಿ ಅವರು ಜಗನ್ನಾಥ ದೇವಾಲಯದ ರತ್ನ ಭಂಡಾರದ (ನಿಧಿಯ ಸಂಗ್ರಹ) "ಸುರಕ್ಷತೆ" ಯನ್ನು ಸಹ ತರಾಟೆಗೆ ತೆಗೆದುಕೊಂಡರು.

ಮದುವೆಗೂ ಮುನ್ನ ದೇಶದ ಎರಡು ಪ್ರಮುಖ ದೇವಸ್ಥಾನಕ್ಕೆ 5 ಕೋಟಿ ದಾನ ನೀಡಿದ ಅನಂತ್‌ ಅಂಬಾನಿ!

Latest Videos
Follow Us:
Download App:
  • android
  • ios