24ರ ಹರೆಯದ ಮಣಿಪುರದ ಹುಡುಗ ನಿರಂಜೋಯ್ ಸಿಂಗ್ 1 ನಿಮಿಷದಲ್ಲಿ 109 ಪುಶ್ಅಪ್ ಮೂಲಕ ದಾಖಲೆ ಬರೆದ ಯುವಕ ಯುವಕನ ಫಿಟ್ನೆಸ್‌ಗೆ ಪ್ರಧಾನಿ ಮೋದಿ ಅಭಿನಂದನೆ

ನವದೆಹಲಿ(ಜ.30): ಒಂದು ನಿಮಿಷದಲ್ಲಿ ಬರೋಬ್ಬರಿ 109 ಪುಶ್ಅಪ್(Push-Ups0 ಮೂಲಕ ಮಣಿಪುರದ 24ರ ಹರೆಯದ ಯುವಕ ನಿರಂಯೋಜ್ ಸಿಂಗ್ ಗಿನ್ನಿಸ್ ವಿಶ್ವ ದಾಖಲೆ ಬರೆದಿದ್ದಾರೆ. ಯುವಕನ ಫಿಟ್ನೆಸ್(Yout Fitness) ದಾಖಲೆಯನ್ನು ಪ್ರಧಾನಿ ನರೇಂದ್ರ ಮೋದಿ(PM Narendra Modi) ಕೊಂಡಾಡಿದ್ದಾರೆ. ಇಷ್ಟೇ ಅಲ್ಲ ಯುವ ಸಮುದಾಯ ನಿರಂಜೋಯ್‌ನಿಂದ(Thounaojam Niranjoy Singh) ಸ್ಪೂರ್ತಿ ಪಡೆದು ಫಿಟ್ನೆಸ್ ಹಾಗೂ ಆರೋಗ್ಯ ಕುರಿತು ಹೆಚ್ಚಿನ ಗಮನಹರಿಸಬೇಕು ಎಂದು ಮೋದಿ ಹೇಳಿದ್ದಾರೆ.

ಮಣಿಪುರದ ನಿರಂಜೋಯ್ ಸಿಂಗ್ ಈಗಾಗಲೇ ಕೆಲ ಬಾರಿ ಗಿನ್ನಿಸ್ ದಾಖಲೆ ಬರೆದಿದ್ದಾರೆ. ಈ ಹಿಂದೆ ನಿರಂಜೋಯ್ ಒಂದು ನಿಮಿಷದಲ್ಲಿ 105 ಪುಶ್‌ಅಪ್ ಮಾಡುವ ಮೂಲಕ ಗಿನ್ನಿಸ್ ದಾಖಲೆ(Guinness World Record) ಬರೆದಿದ್ದರು. ಇದೀಗ ನಿರಂಜೋಯ್ ತಮ್ಮದೇ ದಾಖಲೆ ಅಳಿಸಿ ಹಾಕಿ ಹೊಸ ದಾಖಲೆ ಬರೆದಿದ್ದಾರೆ. ಈ ಬಾರಿ ಒಂದು ನಿಮಿಷದಲ್ಲಿ 109 ಪುಶ್ಅಪ್ ಮಾಡಿ ಮುಗಿಸಿದ್ದಾರೆ. ಬೆರಳತುದಿಗೆ ಶಕ್ತಿ ನೀಡಿ ಈ ಪುಶ್ಅಪ್ ದಾಖಲೆ ಬರೆದಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್‌ಕಿ ಬಾತ್(mann ki baat) ಭಾಷಣದಲ್ಲಿ ನಿರಂಜೋಯ್ ಸಾಧನೆಯನ್ನು ಕೊಂಡಾಡಿದ್ದಾರೆ. ಈ ದೇಶದ ಯುವ ಸಮೂಹದಲ್ಲಿ ನನ್ನ ಪ್ರಶ್ನೆ ಒಂದು ನಿಮಿಷದಲ್ಲಿ ಎಷ್ಟು ಪುಶ್ಅಪ್ ಮಾಡಲು ಸಾಧ್ಯ ಎಂದು ಮೋದಿ ತಮ್ಮ ಮನ್‌ಕಿ ಬಾತ್‌ನಲ್ಲಿ ಕೇಳಿದ್ದಾರೆ. ಬಳಿಕ ಮಾತು ಮುಂದುವರಿಸಿದ ಮೋದಿ, ನಾನು ಈಗ ಹೇಳಲು ಹೊರಟಿರುವ ವಿಚಾರ ನಿಮಗೆ ಅಚ್ಚರಿಯಾಗಬಹುದು. ಮಣಿಪುರುದ(Manipur) 24 ವರ್ಷದ ಥೌನೌಜಾಮ್ ನಿರಂಜೋಯ್ ಸಿಂಗ್ ಒಂದು ನಿಮಿಷದಲ್ಲಿ 109 ಪುಶ್ಅಪ್ ಮಾಡಿ ಗಿನ್ನಿಸ್ ವಿಶ್ವದಾಖಲೆ ನಿರ್ಮಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ನಿರಂಜೋಯ್ ಕುರಿತ ಮೋದಿ ಮಾತು ಇಷ್ಟಕ್ಕೆ ಅಂತ್ಯಗೊಳ್ಳಲಿಲ್ಲ. ನಿರಂಜೋಯ್‌ಗೆ ದಾಖಲೆ ಮುರಿಯುವುದು ಹೊಸದೇನಲ್ಲ. ಈಗಾಗಲೇ ಹಲವು ಬಾರಿ ಹೊಸ ಹೊಸ ದಾಖಲೆ ಬರೆದಿದ್ದಾರೆ. ಈ ದೇಶದ ಯುವ ಜನತೆ ನಿರಂಜೋಯ್ ದೈಹಿಕ ಫಿಟ್ನೆಸ್‌ನಿಂದ ಪ್ರೇರಣೆ ಪಡೆಯಬೇಕು. ದಾಖಲೆಗಾಗಿ ಅಲ್ಲ, ತಮ್ಮ ತಮ್ಮ ಫಿಸಿಕಲ್ ಫಿಟ್ನೆಸ್‌ಗಾಗಿ ಅರೋಗ್ಯ ಕಾಪಾಡಿಕೊಳ್ಳಬೇಕು ಎಂದು ಮೋದಿ ಮನ್‌ಕಿ ಬಾತ್‌ನಲ್ಲಿ ಹೇಳಿದ್ದಾರೆ.

ನಿರಂಜೋಯ್ ಸಿಂಗ್ ದಾಖಲೆ ಸಂತಸವನ್ನು, ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ ರೀತಿಯನ್ನು ಕೇಂದ್ರ ಸಚಿವ ಕಿರಣ್ ರಿಜಿಜು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. 

Scroll to load tweet…

ನಿರಂಜೋಯ್ ಸಿಂಗ್ ಮಣಿಪುರದಲ್ಲಿ ಫಿಟ್ನೆಸ್ ಬಾಯ್ ಎಂದೇ ಜನಪ್ರಿಯರಾಗಿದ್ದಾರೆ. ತಮ್ಮ ಫಿಸಿಕಲ್ ಫಿಟ್ನೆಸ್ ಮೂಲಕವೇ ಇದೀಗ ದೇಶದ ಗಮನಸೆಳೆದಿದ್ದಾರೆ. ಮಣಿಪುರುದ ಇಂಪಾಲ್‌ನಲ್ಲಿರುವ ಅಝ್‌ಟೆಕ್ ಸ್ಪೋರ್ಟ್ಸ್ ನಡೆಸಿದ ಗಿನ್ನಿಸ್ ದಾಖಲೆ ಪ್ರಯತ್ನದಲ್ಲಿ ನಿರಂಯೋಜ್ ಪಾಲ್ಗೊಂಡು ಈ ದಾಖಲೆ ನಿರ್ಮಿಸಿದ್ದಾರೆ.

ಒಂದು ನಿಮಿಷದಲ್ಲಿ ಯಾವುದೇ ಆಯಾಸವಿಲ್ಲದೆ, ನಿರಂತರ 109 ಪುಶ್ಅಪ್ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಫಿಸಿಕಲ್ ಫಿಟ್ನೆಸ್ ಹೊಂದಿರುವ ನಿರಂಜೋಯ್ ಸುಲಭವಾಗಿ ಗಿನ್ನಿಸ್ ದಾಖಲೆ ಬರೆದಿದಿದ್ದಾರೆ. ಮಣಿಪುರದಲ್ಲಿ ಸತತ 1 ಗಂಟೆಗಳ ಕಾಲ ಪುಶ್ಅಪ್ ಮಾಡಿಯೂ ನಿರಂಜೋಯ್ ಗಮನಸೆಳೆದಿದ್ದಾರೆ. ದಾಖಲೆ ನಿರ್ಮಾಣಕ್ಕಾಗಿ ಒಂದು ನಿಮಿಷದಲ್ಲಿ ಗರಿಷ್ಠ ಪುಶ್ಅಪ್ ಮಾಡಿ ಹೊಸ ದಾಖಲೆ ನಿರ್ಮಿಸಿದ್ದಾರೆ.