ಚೀನಾ ಆಯೋಜಿಸುತ್ತಿರುವ 14ನೇ ಬ್ರಿಕ್ಸ್ ಶೃಂಗಸಭೆ ವರ್ಚುವಲ್ ಮೂಲಕ ನಡೆಯಲಿದೆ ಸಭೆ ಪ್ರಧಾನಿ ಮೋದಿಗೆ ಆಹ್ವಾನ ನೀಡಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್
ನವದೆಹಲಿ(ಜೂ.21): ಚೀನಾ ಆಯೋಜಿಸುತ್ತಿರುವ 15ನೇ ಬ್ರಿಕ್ಸ್ ಶೃಂಗಸಭೆ ಜೂನ್ 23 ಹಾಗೂ 24 ರಂದು ನಡೆಯಲಿದೆ. ವರ್ಚುವಲ್ ರೂಪದಲ್ಲಿ ನಡೆಯುತ್ತಿರುವ ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಚೀನಾ ಅಧ್ಯಕ್ಷ ಕ್ಸಿ ಜಿಂಗ್‌ಪಿಂಗ್ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ ನೀಡಿದ್ದಾರೆ. ಮೋದಿ ಆಹ್ವಾನದ ಮೇರೆಗೆ ಮೋದಿ, BRICS ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ಜೂನ್ 22 ರಂದು ಶೃಂಗಸಭೆಯ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. ಜೊತೆಗೆ ಜಾಗತಿಕ ಸವಾಲು, ಆರ್ಥಿಕ ಬೆಳವಣಿಗೆ, ಭಯೋತ್ಪಾದನೆ, ಭದ್ರತೆ ಸೇರಿದಂತೆ ಕೆಲ ಪ್ರಮುಖ ವಿಚಾರಗಳ ಕುರಿತು ಬೆಳಕು ಚೆಲ್ಲಲಿದ್ದಾರೆ.
ನೆರೆ ದೇಶಗಳಿಗೆ ಆಫ್ಘನ್ ಬೆದರಿಕೆ ಆಗಬಾರದು: ಉಗ್ರವಾದದ ವಿರುದ್ಧ ಬ್ರಿಕ್ಸ್ ಒಕ್ಕೊರಲ ನಿರ್ಣಯ!
ಜೂನ್ 24 ರಂದು ಆತಿಥಿ ರಾಷ್ಟ್ರಗಳ ಜೊತೆ ಜಾಗತಿಕ ಅಭಿವೃದ್ಧಿ ಕುರಿತು ಉನ್ನತ ಮಟ್ಟದ ಸಂವಾದ ನಡೆಯಲಿದೆ. ಅಭಿವೃದ್ಧಿಶೀಲ ರಾಷ್ಟ್ರಗಳು ಜಾಗತಿಕವಾಗಿ ಎದುರಾಗಿರುವ ಹಾಗೂ ಸಾಮಾನ್ಯ ಕಾಳಜಿ ವಿಷಯಗಳ ಕುರಿತು ಚರ್ಚಿಸಲಿದೆ. ಇದಕ್ಕೆ ಬ್ರಿಕ್ಸ್ ವೇದಿಕೆಯಾಗಲಿದೆ.
ಭಯೋತ್ಪಾದನೆ, ವ್ಯಾಪಾರ, ಆರೋಗ್ಯ, ಸಾಂಪ್ರದಾಯಿಕ ಔಷಧ, ಪರಿಸರ, ಕೃಷಿ, ತಾಂತ್ರಿಕ, ವೃತ್ತಿಪರ ಶಿಕ್ಷಣ, ತರಬೇತಿ ಸೇರಿದಂತೆ ಹಲವು ವಿಚಾರಗಳು ಚರ್ಚೆಯಾಗಲಿದೆ. ಕೋವಿಡ್ ನಿಂದ ಹಿಂಜರಿಕೆ ಕಂಡಿರುವ ಆರ್ಥಿಕತೆ, ಎದರಾಗಿರುವ ಜಾಗತಿಕ ಸವಾಲು ಹಾಗೂ ಅದಕ್ಕೆ ಪರಿಹಾರದ ಕುರಿತು ಈ ಶೃಂಗಸಭೆಯಲ್ಲಿ ಚರ್ಚೆಯಾಗಲಿದೆ.
ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಜಪಾನ್ ಪ್ರವಾಸ ಕೈಗೊಂಡಿದ್ದರು. ಈವೇಳೆ ಆಯೋಜಿಸಿದ್ದ ಕ್ವಾಡ್ ಶೃಂಗಸಭೆಯಲ್ಲಿ ಮೋದಿ ಪಾಲ್ಗೊಂಡಿದ್ದರು. ಭಾರತ ಹಾಗೂ ಅಮೆರಿಕಾ ದೇಶಗಳ ಭದ್ರತಾ ಸಂಸ್ಥೆಗಳ ನಡುವೆ ಮಹತ್ವದ ಮತ್ತು ಉದಯೋನ್ಮುಖ ತಂತ್ರಜ್ಞಾನದ ವಿಷಯದಲ್ಲಿ ಸಹಕಾರವನ್ನು ಹೆಚ್ಚಿಸಲು ಮಹತ್ವದ ಪಾಲುದಾರಿಕೆಗೆ ಭಾರತ ಮತ್ತು ಅಮೆರಿಕ ನಿರ್ಧರಿಸಿತ್ತು. ಜೊತೆಗೆ ‘ಸಂಯೋಜಿತ ಸೇನಾಪಡೆ-ಬಹ್ರೈನ್ ಒಕ್ಕೂಟ’ದಲ್ಲಿ ಭಾರತವನ್ನು ಸಹಯೋಗಿ ಸದಸ್ಯ ಎಂದೂ ಅಮೆರಿಕ ಘೋಷಣೆ ಮಾಡುವ ಮೂಲಕ ಭಾರತದೆಡೆಗಿನ ತನ್ನ ಸ್ನೇಹವನ್ನು ಇನ್ನಷ್ಟುಗಟ್ಟಿಗೊಳಿಸುವ ಸಂದೇಶ ರವಾನಿಸಿತ್ತು.
ವ್ಯಾಪಾರ, ಹೂಡಿಕೆ, ರಕ್ಷಣೆ, ತಂತ್ರಜ್ಞಾನ, ವೈದ್ಯಕೀಯ ಸಂಶೋಧನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರದಿಂದ ಸಾಗಲು ನಿರ್ಧರಿಸಲಾಗಿತ್ತು. ಕ್ವಾಡ್ ಶೃಂಗದ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಜೊತೆ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ಇಂಥ ಘೋಷಣೆ, ನಿರ್ಧಾರ ಹೊರಬಿದ್ದಿತ್ತು.
BRICS ಶೃಂಗಸಭೆ: ಭಯೋತ್ಪಾದನೆ ವಿರುದ್ಧ ಗುಡುಗಿದ ಮೋದಿ!
‘ಮೋದಿ-ಬೈಡೆನ್ ಮಾತುಕತೆ ಅನ್ವಯ ಉಭಯ ದೇಶಗಳು ಕ್ರಿಟಿಕಲ್ ಮತ್ತು ಎಮರ್ಜಿಂಗ್ ಟೆಕ್ನಾಲಜಿ ವಿಷಯದಲ್ಲಿ ಹೊಸ ಉಪಕ್ರಮವನ್ನು ಘೋಷಿಸಿವೆ. ಇದರನ್ವಯ ಕೃತಕ ಬುದ್ಧಿಮತ್ತೆ, ಕ್ವಾಂಟಪ್ ಕಂಪ್ಯೂಟಿಂಗ್, 5ಜಿ, 6ಜಿ, ಜೈವಿಕ ತಂತ್ರಜ್ಞಾನ ಮತ್ತು ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಸಹಕಾರಕ್ಕೆ ನಿರ್ಧರಿಸಿವೆ’ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿತ್ತು.
