Asianet Suvarna News Asianet Suvarna News

ಅಹಮ್ಮದಾಬಾದ್ ಆಸ್ಪತ್ರೆಗೆ ಭೇಟಿ ನೀಡಿ ತಾಯಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ!

ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್ ಮೋದಿ ಆರೋಗ್ಯ ಏರಪೇರಾದ ಕಾರಣ ಆಸ್ಪತ್ರೆ ದಾಖಲಾಗಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ದೆಹಲಿಯಿಂದ ತುರ್ತಾಗಿ ಆಹಮ್ಮದಾಬಾದ್ ಆಸ್ಪತ್ರೆಗೆ ತೆರಳಿ ತಾಯಿ ಆರೋಗ್ಯ ವಿಚಾರಿಸಿದ್ದಾರೆ.
 

PM Modi meet ailing mother heeraben at un mehta hospital Ahmedabad Gujarat ckm
Author
First Published Dec 28, 2022, 4:38 PM IST

ನವದೆಹಲಿ(ಡಿ.28): ವಯೋಸಹಜ ಖಾಯಿಲೆಯಿಂದ ಬಳಲುತ್ತಿರುವ ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್ ಮೋದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ರಾತ್ರಿ ತೀವ್ರ ಅಸ್ವಸ್ಥಗೊಂಡ ಕಾರಣ ಆಸ್ಪತ್ರೆ ದಾಖಲಾಗಿದ್ದರು. ಇತ್ತ ಪ್ರಧಾನಿ ನರೇಂದ್ರ ಮೋದಿ ದೆಹಲಿಯಿಂದ ತುರ್ತಾಗಿ ಅಹಮ್ಮದಾಬಾದ್‌ನ ಮೆಹ್ತಾ ಆಸ್ಪತ್ರೆಗೆ ಭೇಟಿ ನೀಡಿ ತಾಯಿ ಆರೋಗ್ಯ ವಿಚಾರಿಸಿದ್ದಾರೆ.  ಹೀರಾಬೆನ್ ತಾಯಿ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡದ ಜೊತೆಗೂ ಮೋದಿ ಮಾತುಕತೆ ನಡೆಸಿದ್ದಾರೆ. ತಾಯಿ ಆರೋಗ್ಯ ಕುರಿತ ಮಾಹಿತಿ ಪಡೆದಿದ್ದಾರೆ. ಮೋದಿಗೆ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಹಾಗೂ ಆರೋಗ್ಯ ಸಚಿವರು ಸಾಥ್ ನೀಡಿದ್ದಾರೆ.

ಯುನ್ ಮೆಹ್ತಾ ಆಸ್ಪತ್ರೆಯಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಮೋದಿ ಕಳೆದರು. ಈ ವೇಳೆ ತಾಯಿ ಆರೋಗ್ಯ, ಚಿಕಿತ್ಸೆ ಕುರಿತ ಮಾಹಿತಿಯನ್ನು ಮೋದಿ ಪಡೆದಿದ್ದಾರೆ. ಜೂನ್ ತಿಂಗಳಲ್ಲಿ ಹೀರಾಬೆನ್ ಮೋದಿ 99ನೇ ವರ್ಷದ ಹುಟ್ಟು ಹಬ್ಬ ಆಚರಿಸಿದ್ದರು. ಇಷ್ಟೇ ಅಲ್ಲ ಇತ್ತೀಚೆಗೆ ನಡೆದ ಗುಜರಾತ್ ವಿದಾನಸಬಾ ಚುನಾವಣೆಯಲ್ಲೂ ಹೀರಾಬೆನ್ ಮೋದಿ ಪಾಲ್ಗೊಂಡುು ಮತದಾನ ನಡೆಸಿದ್ದರು.  ಗುಜರಾತ್ ಚುನಾವಣೆ ವೇಳೆ ಮನೆಗೆ ಆಗಮಿಸಿದ್ದ ಮೋದಿ, ತಾಯಿ ಜೊತೆ ಸಮಯ ಕಳೆದಿದ್ದರು. 

ಪ್ರಧಾನಿ ಮೋದಿ ತಾಯಿ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ಯುಎನ್ ಮೆಹ್ತಾ ಆಸ್ಪತ್ರೆ ಹೀರಾಬೆನ್ ಮೋದಿ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದಾರೆ. ವಯೋಸಹಜ ಖಾಯಿಲೆಯಿಂದ ಹೀರಾಬೆನ್ ಮೋದಿ ಬಳಲುತ್ತಿದ್ದಾರೆ. ಸದ್ಯ ತೀವ್ರ ನಿಘ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೀರಾಬೆನ್ ಮೋದಿ ಆರೋಗ್ಯ ಸ್ಥಿರವಾಗಿದೆ ಎಂದು ಬುಲೆಟಿನ್‌ನಲ್ಲಿ ತಿಳಿಸಲಾಗಿದೆ. 

ಯುಎನ್ ಮೆಹ್ತಾ ಆಸ್ಪತ್ರೆ ಸುತ್ತ ಮುತ್ತ ಭದ್ರತೆ ಹೆಚ್ಚಿಸಲಾಗಿದೆ. ಗುಜರಾತ್ ಸರ್ಕಾರದ ಹಲವು ಸಚಿವರು ಆಸ್ಪತ್ರೆಗೆ ದೌಡಾಯಿಸುತ್ತಿದ್ದಾರೆ. ಇತ್ತ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿರುವ ಮೋದಿ ಕಿರಿಯ ಸಹೋದರ ಪ್ರಹ್ಲಾದ್ ಮೋದಿ, ತಾಯಿ ಶೀಘ್ರ ಚೇತರಿಕೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಿನ್ನೆ ಪ್ರಹ್ಲಾದ್ ಮೋದಿ ಕಾರು ಅಪಘಾತವಾಗಿತ್ತು. ಇಂದು ಪ್ರಧಾನಿ ಮೋದಿ ಮೋದಿ ತಾಯಿ ಆರೋಗ್ಯದಲ್ಲಿ ಏರುಪೇರಾಗಿದೆ. 

ಮೈಸೂರು ಸಮೀಪ ಪ್ರಧಾನಿ ನರೇಂದ್ರ ಮೋದಿ ಸಹೋದರನ ಕಾರು ಅಪಘಾತ!

ಮೈಸೂರು ತಾಲೂಕಿನ ಕಡಕೊಳ ಬಳಿ ಮಂಗಳವಾರ ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿಯವರ ಸಹೋದರ, ಪ್ರಹ್ಲಾದ್‌ ಮೋದಿ ಮತ್ತು ಕುಟುಂಬದವರು ಪ್ರಯಾಣಿಸುತ್ತಿದ್ದ ಬೆಂಜ್‌ ಕಾರು ಅಪಘಾತಕ್ಕೀಡಾಗಿದ್ದು, ಮೋದಿ ಸಹೋದರ ಪ್ರಹ್ಲಾದ್‌ ಮೋದಿ ಸೇರಿ ಐವರು ಗಾಯಗೊಂಡಿದ್ದರು. ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್‌ ದಾಮೋದರ್‌ ಮೋದಿ (70), ಅವರ ಪುತ್ರ ಮೆಹೂಲ್‌ ಪ್ರಹ್ಲಾದ್‌ ಮೋದಿ (40), ಸೊಸೆ ಜಿನಾಲ್‌ ಮೋದಿ (35), ಮೊಮ್ಮಗ ಮೆಹತ್‌ ಮೆಹೋಲ್‌ ಮೋದಿ (6) ಹಾಗೂ ಕಾರು ಚಾಲಕ ಸತ್ಯನಾರಾಯಣ (46) ಗಾಯಗೊಂಡವರು.

ಪ್ರಹ್ಲಾದ್‌ ಮೋದಿಯವರು ಕುಟುಂಬ ಸಮೇತ ಬೆಂಗಳೂರಿನಿಂದ ಬಂಡೀಪುರಕ್ಕೆ ಬೆಂಜ್‌ ಕಾರಿನಲ್ಲಿ ತೆರಳುತ್ತಿದ್ದರು. ಕಡಕೊಳ ಬಳಿ ಮಧ್ಯಾಹ್ನ 1.30ಕ್ಕೆ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್‌ಗೆ ಡಿಕ್ಕಿಯಾಗಿ, ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಪ್ರಹ್ಲಾದ್‌ ಮೋದಿ, ಪುತ್ರ, ಸೊಸೆ, ಮೊಮ್ಮಗ ಮತ್ತು ಕಾರು ಚಾಲಕನಿಗೆ ಸಣ್ಣ ಪುಟ್ಟಗಾಯಗಳಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

Follow Us:
Download App:
  • android
  • ios