Asianet Suvarna News Asianet Suvarna News

ಪ್ರಧಾನಿ ಮೋದಿ ಬಳಿ ವಿಭಿನ್ನ ದಕ್ಷಿಣೆ ಕೇಳಿದ ಕಾಶೀ ಪಂಡಿತರು, ಬದಲಾಗುತ್ತಾ ಕಾಶ್ಮೀರ?

* ದೇಶಾದ್ಯಂತ ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗೆ ಮೆಚ್ಚುಗೆ 

* ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ಕಾಶ್ಮೀರಿ ಪಂಡಿತರ ಪರ ಜನರ ಕೂಗು

* ಪ್ರಧಾನಿ ಮೋದಿ ಬಳಿ ವಿಭಿನ್ನ ದಕ್ಷಿಣೆ ಕೇಳಿದ ಕಾಶೀ ಪಂಡಿತರು, ಬದಲಾಗುತ್ತಾ ಕಾಶ್ಮೀರ?

Kashmir Issue Kashi pandit Ashok Dwivedi unique demand to Modi pod
Author
Bangalore, First Published Mar 17, 2022, 4:10 PM IST | Last Updated Mar 17, 2022, 4:17 PM IST

ಕಾಶಿ(ಮಾ.17): ಕಾಶಿಯ ಪಂಡಿತರು ತಮ್ಮ ಸಂಸದ ಹಾಗೂ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಂದ ವಿಶಿಷ್ಟವಾದ ದಕ್ಷಿಣೆಯನ್ನು ಕೋರಿದ್ದಾರೆ. ಈ ಬೇಡಿಕೆಯ ಇಟ್ಟು ಅವರು ಕಾಶ್ಮೀರದಲ್ಲಿ ಮತ್ತೊಮ್ಮೆ ವೇದ ಮಂತ್ರಗಳ ಪ್ರತಿಧ್ವನಿ ಮೊಳಗಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಈ ಬೇಡಿಕೆಯನ್ನು ಈಡೇರಿಸುವಂತೆ ಪ್ರಧಾನಿ ಮೋದಿಯವರಿಗೆ ಪತ್ರವನ್ನೂ ಬರೆದಿದ್ದಾರೆ. ಈ ನಿಟ್ಟಿನಲ್ಲಿ ವಾರಣಾಸಿಯಲ್ಲಿ ಕಾಶಿ ವಿದ್ವತ್ ಧಾರ್ಮಿಕ ಮಂಡಳಿಯನ್ನು ರಚಿಸಲಾಗಿದೆ.

ಈ ರಚನೆಯಲ್ಲಿ, ಮೊದಲನೆಯದಾಗಿ ಕಾಶ್ಮೀರದಲ್ಲಿ ಮುಚ್ಚಿದ ದೇವಾಲಯಗಳ ವಿಷಯವನ್ನು ಎತ್ತಲಾಯಿತು, ಇದರಲ್ಲಿ ಕಾಶ್ಮೀರದ ಮುಚ್ಚಿದ ದೇವಾಲಯಗಳಲ್ಲಿ ಮತ್ತೆ ಪೂಜೆ ಮತ್ತು ವೇದ ಮಂತ್ರಗಳನ್ನು ಪ್ರಾರಂಭಿಸಲು ಬೇಡಿಕೆ ಇಡಲಾಗಿದೆ. ಇದಕ್ಕಾಗಿ ಪರಿಷತ್ತಿನ ಅಧ್ಯಕ್ಷ ಹಾಗೂ ಕಾಶಿ ವಿಶ್ವನಾಥ ದೇವಸ್ಥಾನದ ಮಾಜಿ ಟ್ರಸ್ಟ್ ಅಧ್ಯಕ್ಷ ಪಂಡಿತ್ ಅಶೋಕ್ ದ್ವಿವೇದಿ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

The Kashmir Files; ನಾನು ಮದುವೆಯಾಗಿದ್ದು ಕಾಶ್ಮೀರಿ ಪಂಡಿತನನ್ನು, ಅವರ ನೋವು ನನಗೆ ಗೊತ್ತು- ಯಾಮಿ ಗೌತಮ್

ಕಾಶ್ಮೀರದಲ್ಲಿ ನೂರಾರು ದೇವಸ್ಥಾನಗಳಿವೆ ಎಂದು ಉಲ್ಲೇಖಿಸಿದ ಅಶೋಕ್ ದ್ವಿವೇದಿ, ಇಲ್ಲಿ 40 ಮುಖ್ಯ ದೇವಾಲಯಗಳಿದ್ದು, ಮುಚ್ಚಲಾಗಿದೆ. ಮತ್ತೊಮ್ಮೆ ಕಾಶಿಯ ಪಂಡಿತರು ಆ ದೇವಾಲಯಗಳಿಗೆ ಪೂಜೆ ಸಲ್ಲಿಸಿಲು ಬರಲು ಬಯಸುತ್ತಾರೆ. ಸನಾತನ ಸಂಸ್ಕೃತಿಯನ್ನು ಮತ್ತೆ ಪುನರುಜ್ಜೀವನಗೊಳಿಸಲು ಬಯಸುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ, ದಕ್ಷಿಣದ ರೂಪದಲ್ಲಿ ನಮಗೆ ಅವಕಾಶ ನೀಡಬೇಕು ಎಂದು ನಾವು ಪ್ರಧಾನಿಯವರಲ್ಲಿ ಒತ್ತಾಯಿಸುತ್ತೇವೆ ಎಂದಿದ್ದಾರೆ.

ಅಶೋಕ್ ದ್ವಿವೇದಿ ಅವರು ಕಾಶಿಯ ಮುಖ್ಯ ಅರ್ಚಕರಲ್ಲಿ ಒಬ್ಬರು ಎಂಬುವುದು ಉಲ್ಲೇಖನೀಯ ವಿಚಾರ, ಅವರು ವಿಶ್ವನಾಥ ದೇವಾಲಯದಲ್ಲಿ ಪ್ರಧಾನಿ ಮೋದಿಯಿಂದ ಐದು ಬಾರಿ ಪೂಜೆ ಮಾಡಿಸಿದ್ದಾರೆ. ಇಂತಹ ಸಂದರ್ಭದಲ್ಲಿ ದಕ್ಷಿಣದ ಬಗ್ಗೆ ಮಾತನಾಡುತ್ತಾ ಕಾಶಿಯ ಪಂಡಿತರು ತಮ್ಮ ಸಂಸದರ ಜೊತೆಗಿದ್ದೇವೆ ಎಂದು ಹೇಳಿದ್ದಾರೆ.

The Kashmir Files ಕಾಶ್ಮೀರ ಫೈಲ್ಸ್ ಚಿತ್ರದ ಪರ ನಿಂತ ಸಿಎಂ ಭೂಪೇಶ್ ಬಾಘೆಲ್, ಇಕ್ಕಟ್ಟಿನಲ್ಲಿ ಕಾಂಗ್ರೆಸ್!

ಕಾಶ್ಮೀರ ಪಂಡಿತರ ನರಮೇಧ ಆಧಾರಿತ ದಿ ಕಾಶ್ಮೀರ ಫೈಲ್ಸ್ ಬಾಲಿವುಡ್ ಚಿತ್ರ ಇಡೀದ ದೇಶದಲ್ಲಿ ಸಂಚಲನ ಸೃಷ್ಟಿಸಿದೆ. 32 ವರ್ಷಗಳ ಹಿಂದೆ ನಡೆದ ಹತ್ಯಾಕಾಂಡವನ್ನು ಈ ಚಿತ್ರದಲ್ಲಿ ಎಳೆಎಳೆಯಾಗಿ ಬಿಚ್ಚಿಡಲಾಗಿದೆ. ಈ ಚಿತ್ರಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಕಾಂಗ್ರೆಸ್‌ ಸ್ಪಷ್ಟ ನಿಲುವು ತೆಗೆದುಕೊಳ್ಳಲು ಸಾಧ್ಯವಾಗದೆ ಇಕಟ್ಟಿಗೆ ಸಿಲುಕಿಗೆ. ಕಾರಣ ಕೇರಳ ಕಾಂಗ್ರೆಸ್ ಚಿತ್ರ ವಿರೋಧಿ ಸರಣಿ ಟ್ವೀಟ್ ಮಾಡಿದ್ದರೆ, ಇದೀಗ ಚತ್ತೀಸಘಡ ಕಾಂಗ್ರೆಸ್ ಸಿಎಂ ಭೂಪೇಶ್ ಬಾಘೆಲ್ ಚಿತ್ರದ ಪರ ಬ್ಯಾಟ್ ಬೀಸಿದ್ದಾರೆ.

ಕಾಶ್ಮೀರ ಫೈಲ್ಸ್ ಚಿತ್ರಕ್ಕೆ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ನೀಡಲಾಗಿದೆ. ಇದೇ ಮೊದಲ ಬಾರಿಗೆ ಕಾಂಗ್ರೆಸ್ ಆಡಳಿತ ತೆರಿಗೆ ವಿನಾಯತಿ ನೀಡಲು ಮನವಿ ಮಾಡಿದೆ. ಇಷ್ಟೇ ಅಲ್ಲ ಎಲ್ಲರೂ ಕಾಶ್ಮೀರ ಫೈಲ್ಸ್ ಚಿತ್ರ ವೀಕ್ಷೆಗೆ ಮನವಿ ಮಾಡಲಾಗಿದೆ. ಚತ್ತೀಸಗಢದ ಸಿಎಂ ಭೂಪೇಶ್ ಬಾಘೆಲ್, ಚಿತ್ರಕ್ಕೆ ದೇಶಾದ್ಯಂತ ತೆರಿಗೆ ವಿನಾಯಿತಿ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕಾಶ್ಮೀರ್ ಫೈಲ್ಸ್‌ಗೆ ಕರ್ನಾಟಕದಲ್ಲಿಯೂ ತೆರಿಗೆ ವಿನಾಯಿತಿ

ಕಾಂಗ್ರೆಸ್ ಸರ್ಕಾರದ ಸಚಿವರು, ಶಾಸಕರು ಹಾಗೂ ಎಲ್ಲಾ ಪಕ್ಷದ ಶಾಸಕರು ದಿ ಕಾಶ್ಮೀರ ಫೈಲ್ಸ್ ಚಿತ್ರ ವೀಕ್ಷಿಸಬೇಕು ಎಂದು ಭೂಪೇಶ್ ಬಾಘೆಲ್ ಮನವಿ ಮಾಡಿದ್ದಾರೆ. ಬಾಘೆಲ್ ಮಾತು ಇದೀಗ ಕಾಂಗ್ರೆಸ್‌ಗೆ ತೀವ್ರ ಮುಜುಗರ ತಂದಿದೆ. ಕಾರಣ ಕಾಂಗ್ರೆಸ್ ಪಕ್ಷದಲ್ಲಿ ದಿ ಕಾಶ್ಮೀರ ಫೈಲ್ಸ್ ಚಿತ್ರಕ್ಕೆ ಪರ ವಿರೋಧ ವ್ಯಕ್ತವಾಗಿದೆ.

ಕೇರಳ ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ಸತ್ಯ ಮರೆ ಮಾಚುವ ಯತ್ನ ಮಾಡಿತ್ತು. ಇಷ್ಟೇ ಅಲ್ಲ ಕಾಶ್ಮೀರ ಪಂಡಿತರ ಹತ್ಯೆಗೆ ಬಿಜೆಪಿ ಕಾರಣ ಎಂದಿತ್ತು. ಇದು ಬಿಜೆಪಿ ರಾಜಕೀಯ ಎಂದಿತ್ತು. ಇದೀಗ ಬಾಘೆಲ್ ಚಿತ್ರದ ಮೇಲೆ ಕೇಂದ್ರದ ಜಿಎಸ್‌ಟಿ ತೆರಿಗೆಯನ್ನು ಮುಕ್ತಗೊಳಿಸಬೇಕು ಎಂದಿದ್ದಾರೆ. ರಾಜ್ಯ ಕಾಂಗ್ರೆಸ್ ಪಕ್ಷಗಳು ಒಂದೊಂದು ನಿಲುವ ವ್ಯಕ್ತಪಡಿಸುತ್ತಿರುವುದು ಇದೀಗ ಕೇಂದ್ರದ ಕಾಂಗ್ರೆಸ್‌ಗೆ ಇನ್ನಿಲ್ಲದ ಸಂಕಷ್ಟ ತಂದಿದೆ.

ಜೀವಂತವಿರುಗಾಲೇ ಪಂಡಿತ್ ಸಹೋದರಿಯನ್ನು ಕತ್ತರಿಸಿ ಕೊಂದರು, ಕರಾಳ ಸತ್ಯ ಬಿಚ್ಚಿಟ್ಟ ಪಿಡಿಪಿ ನಾಯಕ!

ಪರಿಷತ್‌ನಲ್ಲಿ ಬಿಜೆಪಿ - ಕಾಂಗ್ರೆಸ್‌ ಕಾಶ್ಮೀರ್‌ ಫೈಲ್ಸ್‌ ಜಟಾಪಟಿ

ಹಿಂದಿ ಚಲನಚಿತ್ರ ‘ಕಾಶ್ಮೀರ್‌ ಫೈಲ್ಸ್‌’ ಚಿತ್ರ ವೀಕ್ಷಣೆಗೆ ಪರಿಷತ್‌ ಸದಸ್ಯರಿಗೆ ಆಹ್ವಾನಿಸುವ ಸರ್ಕಾರದ ಪ್ರಕಟಣೆಯನ್ನು ಸದನದಲ್ಲಿ ಉಲ್ಲೇಖಿಸಿದ ಸಭಾಪತಿ ಬಸವರಾಜ ಹೊರಟ್ಟಿಅವರ ಕ್ರಮಕ್ಕೆ ಪ್ರತಿಪಕ್ಷ ಕಾಂಗ್ರೆಸ್‌ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೇ,ಸರ್ಕಾರದ ವಿರುದ್ಧ ಹರಿಹಾಯ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು ತೀವ್ರ ವಾಗ್ವಾದ ನಡೆಸಿದ ಘಟನೆ ನಡೆಯಿತು.

Latest Videos
Follow Us:
Download App:
  • android
  • ios