Asianet Suvarna News Asianet Suvarna News

ಮೋದಿ ಪತ್ರಕ್ಕೆ ಮಾಜಿ ರಾಷ್ಟ್ರಪತಿ ಕೋವಿಂದ್ ಭಾವುಕ, ನೆನಪಿನ ಬುತ್ತಿ ಬಿಚ್ಚಿಟ್ಟ ಪ್ರಧಾನಿ!

ಭಾರತದ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ 5 ವರ್ಷಗಳ ಅತ್ಯುತ್ತಮ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಹೇಳಿದ್ದಾರೆ. ಪತ್ರದ ಮೂಲಕ ಮೋದಿ ಕೋವಿಂದ್ ಜೊತೆಗಿನ ಹಲವು ನೆನಪುಗಳನ್ನು ಮೋದಿ ಬಿಚ್ಚಿಟ್ಟಿದ್ದಾರೆ. ಮೋದಿ ಪತ್ರಕ್ಕೆ ಕೋವಿಂದ್ ಪ್ರತಿಕ್ರಿಯಿಸಿದ್ದಾರೆ.

PM Modi letter deeply touched me Former president Ram Nath Kovind thanks for heartfelt words ckm
Author
Bengaluru, First Published Jul 27, 2022, 5:16 PM IST

ನವದೆಹಲಿ(ಜು.27):  5 ವರ್ಷಗಳ ಕಾಲ ಭಾರತದ ರಾಷ್ಟ್ರಪತಿಯಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ ರಾಮನಾಥ್ ಕೋವಿಂದ್‌ಗೆ ಪ್ರಧಾನಿ ಮೋದಿ ಪತ್ರದ ಮೂಲಕ ಧನ್ಯವಾದ ಹೇಳಿದ್ದಾರೆ. ಇದೇ ವೇಳೆ ಹಲವು ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಮೋದಿ ಪತ್ರಕ್ಕೆ ಕೋವಿಂದ್ ಭಾವುಕರಾಗಿದ್ದಾರೆ.  ಸಾಮಾಜಿಕ ಜಾಲತಾಣದಲ್ಲಿ ಮೋದಿ ಈ ಪತ್ರವನ್ನು ಹಂಚಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ರಾಮನಾಥ್ ಕೋವಿಂದ್ ಧನ್ಯವಾದ ಸಲ್ಲಿಸಿದ್ದಾರೆ.  ರಾಷ್ಟ್ರಪತಿಯಾಗಿ ಅತ್ಯುತ್ತಮ ಸೇವೆ,  ಸುದೀರ್ಘ ಮತ್ತು ವಿಶಿಷ್ಟ ವೃತ್ತಿಜೀವನಕ್ಕಾಗಿ  ಇಡೀ ರಾಷ್ಟ್ರದ ಪರವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ ಎಂದು ಮೋದಿ ಪತ್ರದಲ್ಲಿ ಹೇಳಿದ್ದಾರೆ.  ಕಾರ್ಯಕ್ಷಮತೆ ಮತ್ತು ಸೇವೆಯ ಅತ್ಯುನ್ನತ ಮಾನದಂಡಗಳನ್ನು ಹೊಂದಿರುವ ಕೋವಿಂದ್‌ರನ್ನು ಮೋದಿ ಮುಕ್ತಕಂಠದಿಂದ ಹೊಗಳಿದ್ದರು. ಇಡೀ ದೇಶ ಹಾಗೂ ವಿದೇಶಗಳಲ್ಲಿ ಮೋದಿಗೆ ಅಪಾರ ಗೌರವ, ಮನ್ನಣೆ ನೀಡುತ್ತಾರೆ. ಮೋದಿ ಪ್ರತಿಯೊಬ್ಬರನ್ನು ಅಷ್ಟೇ ಗೌರವದಿಂದ ನೋಡಿಕೊಂಡಿದ್ದಾರೆ. ಅವರ ಆಡಳಿತದ ರೀತಿ, ಯೋಜನೆಗಳ ಅನುಷ್ಠಾನ ಸೇರಿದಂತೆ ಭಾರತವನ್ನು ಸಮರ್ಥವಾಗಿ ಮುನ್ನಡೆಸುವ ರೀತಿಗೆ ಕೋವಿಂದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೋದಿ ತಮ್ಮ ಪತ್ರದಲ್ಲಿ ಕೋವಿಂದ್ ಜೊತೆಗೆನ ಹಲವು ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಕೋವಿಂದ್ ಹುಟ್ಟಿ ಬೆಳೆದ ಪರೌಂಖ ಗ್ರಾಮಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದನ್ನು ಮೋದಿ ನೆನೆಪಿಸಿಕೊಂಡಿದ್ದಾರೆ. 2019ರಲ್ಲಿ ಕೋವಿಂದ್ ಗುಜರಾತ್ ಭೇಟಿ ಸಂದರ್ಭದಲ್ಲಿ ಮೋದಿ ತಾಯಿ ಹೀರಾಬೆ್ ನಿವಾಸಕ್ಕೆ ಭೇಟಿ ನೀಡಿ ತಾಯಿ ಜೊತೆಗೆ ನಡೆಸಿದ ಮಾತುಕತೆ, ಕೋವಿಂದ್ ಅವರ ಕಾಳಜಿ ಕುರಿತು ಮೋದಿ ಪತ್ರದಲ್ಲಿ ಬರೆದುಕೊಂಡಿದ್ದಾರೆ.

 

ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ಗೆ ಏನೆಲ್ಲ ಸೌಲಭ್ಯಗಳು ಸಿಗುತ್ತೆ ನೋಡಿ..!

ಮೋದಿ ಪತ್ರ ನನ್ನ ಹೃದಯ ಸ್ಪರ್ಶಿಸಿದೆ. ಮೋದಿ ಮಾತುಗಳು, ನಾಗರೀಕರ ನನ್ನ ಮೇಲಿಟ್ಟಿರುವ ಪ್ರೀತಿ ಹಾಗೂ ಗೌರವದ ಪ್ರತಿಬಿಂಬವಾಗಿ ತೆಗೆದುಕೊಳ್ಳುತ್ತೇನೆ. ಎಲ್ಲರಿಗೂ ಕೃತಜ್ಞನಾಗಿದ್ದೇನೆ ಎಂದು ಕೋವಿಂದ್ ಟ್ವೀಟ್ ಮೂಲಕ ಹೇಳಿದ್ದಾರೆ. 

12 ಜನಪಥದ ನೂತನ ಮನೆಗೆ ಕೋವಿಂದ್‌ ವರ್ಗ
ಅಧಿಕಾರವಧಿ ಮುಗಿದ ಹಿನ್ನೆಲೆ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು 12 ಜನಪಥದಲ್ಲಿರುವ ನೂತನ ಮನೆಗೆ ತಮ್ಮ ನಿವಾಸವನ್ನು ಬದಲಾಯಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಈ ಮನೆಯಲ್ಲಿ ಮಾಜಿ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ಅವರು ವಾಸಿಸುತ್ತಿದ್ದರು. ಪಾಸ್ವಾನ್‌ ಅವರು ಸುಮಾರು 3 ದಶಕಗಳ ಕಾಲ ಈ ಮನೆಯಲ್ಲಿ ವಾಸಿಸುತ್ತಿದ್ದರು. ಅವರ ಮರಣಾನಂತರ ಈ ಮನೆಯನ್ನು ಕೋವಿಂದ್‌ ಅವರ ನಿವೃತ್ತಿಯ ನಂತರ ನಿವಾಸ ಎಂದು ಘೋಷಿಸಲಾಗಿತ್ತು. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ 10 ಜನಪಥದಲ್ಲಿ ವಾಸಮಾಡಲಿದ್ದಾರೆ.

 

ರಾಷ್ಟ್ರಪತಿ ಕೋವಿಂದ್‌ಗೆ ಅವಮಾನ ಮಾಡಿದ್ರಾ ಮೋದಿ? AAP ಆರೋಪಕ್ಕೆ ಅಸಲಿ ವಿಡಿಯೋ ಬಹಿರಂಗ ಪಡಿಸಿದ ಬಿಜೆಪಿ!

ಭಾರತದ 14ನೇ ರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ರಾಮನಾಥ ಕೋವಿಂದ್‌ ಅವರು ನಿವೃತ್ತಿಯ ನಂತರ 2.5 ಲಕ್ಷ ರು. ಪಿಂಚಣಿ, ಲ್ಯುಟಿಯನ್ಸ್‌ ದೆಹಲಿಯಲ್ಲಿ ಸುಸಜ್ಜಿತ ಬಂಗಲೆಯ ಸೌಲಭ್ಯವನ್ನು ಪಡೆದುಕೊಳ್ಳಲಿದ್ದಾರೆ. ಅಲ್ಲದೇ ಓರ್ವ ಖಾಸಗಿ ಕಾರ್ಯದರ್ಶಿ ಹಾಗೂ ಓರ್ವ ಹೆಚ್ಚುವರಿ ಖಾಸಗಿ ಕಾರ್ಯದರ್ಶಿ, ಓರ್ವ ಪಿ.ಎ., ಇಬ್ಬರು ಸೇವಕರು ಮತ್ತು ವಾರ್ಷಿಕವಾಗಿ 1 ಲಕ್ಷ ರು. ಕಚೇರಿ ನಿರ್ವಹಣಾ ವೆಚ್ಚವನ್ನು ಪಡೆದುಕೊಳ್ಳಲಿದ್ದಾರೆ. 
 

Follow Us:
Download App:
  • android
  • ios