ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬೀಳ್ಕೂಡುಗೆ ಸಮಾರಂಭದಲ್ಲಿನ ವಿಡಿಯೋವೊಂದನ್ನು ಆಪ್ ಸಾಮಾಜಿಕ ಜಾಲತಾಣಲದಲ್ಲಿ ಹಾಕಿ ಪ್ರಧಾನಿ ಮೋದಿ ಹಾಗೂ ಬಿಜೆಪಿಯನ್ನು ಟೀಕಿಸಿದೆ. ಮೋದಿ, ರಾಷ್ಟ್ರಪತಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಆಪ್ ಆರೋಪದ ಬೆನ್ನಲ್ಲೇ ಬಿಜೆಪಿ ಅಸಲಿ ವಿಡಿಯೋ ಬಹಿರಂಗ ಪಡಿಸಿದೆ. ಈ ವಿಡಿಯೋದಲ್ಲಿ ಆಪ್ ಅಸಲಿಯತ್ತು ಬಹಿರಂಗವಾಗಿದೆ. 

ನವದೆಹಲಿ(ಜು.24): ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ಗೆ ಬೀಳ್ಕೂಡುಗೆ ಸಮಾರಂಭದಲ್ಲಿನ ಒಂದು ವಿಡಿಯೋ ಭಾರಿ ಚರ್ಚೆಗೆ ಕಾರಣವಾಗಿದೆ. ಬೀಳ್ಕೊಡುಗೆ ಭಾಷಣ ಮಾಡಲು ಸಂಸತ್ ಹಾಲ್‌ನೊಳಗೆ ಪ್ರವೇಶಿಸಿದ ರಾಮನಾಥ್ ಕೋವಿಂದ್‌ಗೆ ಪ್ರಧಾನಿ ನರೇಂದ್ರ ಮೋದಿ ಅವಮಾನ ಮಾಡಿದ್ದಾರೆ ಅನ್ನೋ ವಿಡಿಯೋವನ್ನು ಆಮ್ ಆದ್ಮಿ ಪಾರ್ಟಿ ನಾಯಕ ಸಂಜಯ್ ಸಿಂಗ್ ಪೋಸ್ಟ್ ಮಾಡಿದ್ದಾರೆ. ಆಪ್ ಆರೋಪ, ಟೀಕೆ ಬೆನ್ನಲ್ಲೇ ಬಿಜೆಪಿ ಅಸಲಿ ವಿಡಿಯೋ ಬಹಿರಂಗ ಮಾಡಿದೆ. ಇಷ್ಟೇ ಅಲ್ಲ ಸಿಎಂ ಅರವಿಂದ್ ಕೇಜ್ರಿವಾಲ್, ಮನೀಶ್ ಸೋಸಿಡಿಯಾ ರೀತಿ ಸಂಜಯ್ ಸಿಂಗ್ ಕೂಡ ಸುಳ್ಳನ್ನೇ ಒತ್ತಿ ಒತ್ತಿ ಹೇಳುತ್ತಿದ್ದಾರೆ. ಅಸಲಿ ವಿಡಿಯೋ ಇಲ್ಲಿದೆ. ಈ ವಿಡಿಯೋ ನೋಡಿ ಎಂದು ಬಿಜೆಪಿ ನಾಯಕ ಅಮಿತ್ ಮಾಳವಿಯಾ ತಿರುಗೇಟು ನೀಡಿದ್ದಾರೆ. ಬಿಜೆಪಿ ಪ್ರತಿಕ್ರಿಯೆಯಿಂದ ಆಪ್ ಅಸಲಿ ಮುಖ ಬಟಾ ಬಯಲಾಗಿದೆ. ಇಷ್ಟೇ ಅಲ್ಲ ತೀವ್ರ ಮುಖಭಂಗ ಅನುಭವಿಸಿದೆ. 

ಬೀಳ್ಕೂಡುಗೆ ಸಮಾರಂಭಕ್ಕೆ ಸಂಸತ್ ಭವನಕ್ಕೆ ಬಂದ ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಎಲ್ಲರಿಗೂ ನಮಸ್ಕಾರ ಮಾಡುತ್ತಾ ಬಂದಿದ್ದಾರೆ. ಈ ವೇಳೆ ಮೋದಿಗೆ ನಮಸ್ಕಾರ ಮಾಡಿದರೂ ಮೋದಿ ಮಾತ್ರ ರಾಮ್‌ನಾಥ್ ಕೋವಿಂದ್‌ರತ್ತ ನೋಡದೆ ನಿರ್ಲಕ್ಷಿಸುತ್ತಿರುವ ದೃಶ್ಯವನ್ನು ಆಮ್ ಆದ್ಮಿ ಪಾರ್ಟಿ ಪೋಸ್ಟ್ ಮಾಡಿದೆ. ಇಷ್ಟೇ ಅಲ್ಲ ಇದರ ಜೊತೆಗೆ ಇಂತಹ ಅವಮಾನ ಸಲ್ಲದು, ಕ್ಷಮಿಸಿ ಸರ್, ಈ ವ್ಯಕ್ತಿಗಳು ಹೀಗೆ. ನಿಮ್ಮ ಅವಧಿ ಮುಗಿದಿದೆ. ಇನ್ನು ನಿಮ್ಮ ಮುಖ ನೋಡುವುದಿಲ್ಲ ಎಂದು ಸಂಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ.

Scroll to load tweet…

ಸೇವೆ ಸಲ್ಲಿಸಲು ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದ, ಬೀಳ್ಗೊಡುಗೆ ಸಮಾರಂಭದಲ್ಲಿ ಕೋವಿಂದ್ ಭಾಷಣ!

ಈ ವಿಡಿಯೋಗೆ ಆಮ್ ಆದ್ಮಿ ಸೇರಿದಂತೆ ಹಲವು ವಿಪಕ್ಷಗಳ ನಾಯಕರು ಕಮೆಂಟ್ ಮಾಡಿದ್ದಾರೆ. ಇಷ್ಟೇ ಅಲ್ಲ ಹಲವರು ಈ ವಿಡಿಯೋವನ್ನು ಹಂಚಿಕೊಂಡು, ಪ್ರಧಾನಿ ಮೋದಿ ನಡೆ ಕುರಿತು ಪ್ರಶ್ನಿಸಿದ್ದಾರೆ. ಆದರೆ ಬಿಜೆಪಿ ನಾಯಕ ಅಮಿತ್ ಮಾಳವಿಯಾ ಆಮ್ ಆದ್ಮಿ ಪಾರ್ಟಿ ಅಸಲಿಯತ್ತನ್ನು ಬಹಿರಂಗ ಪಡಿಸಿದೆ. ಎಡಿಟ್ ವಿಡಿಯೋ ಬದಲು ಪೂರ್ಣ ವಿಡಿಯೋವನ್ನು ಹಾಕಿ, ಇಲ್ಲಿದೆ ಸತ್ಯ ಎಂದಿದೆ. 

ಅಮಿತ್ ಮಾಳವಿಯಾ ಹಾಕಿರುವ ವಿಡಿಯೋದಲ್ಲಿ ರಾಮನಾಥ್ ಕೋವಿಂದ್ ಎಲ್ಲರಿಗೂ ನಮಸ್ಕಾರ ಮಾಡುತ್ತಾ ಬರುವ ವಿಡಿಯೋವಿದೆ. ಈ ವೇಳೆ ಮೋದಿಗೂ ಕೋವಿಂದ್ ನಮಸ್ಕಾರ ಮಾಡಿದ್ದಾರೆ. ಇತ್ತ ಮೋದಿ ಕೂಡ ನಮಸ್ಕಾರ ಮಾಡಿ ಗೌರವ ಸಲ್ಲಿಸಿದ್ದಾರೆ. ಮೋದಿ ಬಳಿಕ ಕೋವಿಂದ್, ಪಿಯೂಷ್ ಗೊಯೆಲ್ ಹಾಗೂ ಮೋದಿ ಹಿಂಬಾಗದಲ್ಲಿದ್ದ ಮಹಿಳಾ ಸಂಸದರಿಗೆ ನಮಸ್ಕಾರ ಮಾಡಿದ್ದಾರೆ. ಇಲ್ಲಿ ಯಾರೂ ಕೂಡ ಕೋವಿಂದ್‌ಗೆ ಅವಮಾನ ಮಾಡಿಲ್ಲ. ಅದರಲ್ಲೂ ಆಮ್ ಆದ್ಮಿ ವಿಡಿಯೋ ತುಣುಕು ಹಾಕಿ ಆರೋಪ ಮಾಡಿ ಇದೀಗ ಪೇಚಿಗೆ ಸಿಲುಕಿದೆ.

Scroll to load tweet…

ಸೊಸೆ, ಮಗ, ಮಗಳು ಏರ್‌ಲೈನ್ಸ್‌ನಲ್ಲಿ: 7 ಮಕ್ಕಳಿದ್ದ ಕುಟುಂಬದಲ್ಲಿ ಅತ್ಯಂತ ಕಿರಿಯರು ಕೋವಿಂದ್!

ಆಮ್ ಆದ್ಮಿ ಪಾರ್ಟಿ ಈ ವಿಡಿಯೋ ಹಾಕಿದ ಬೆನ್ನಲ್ಲೇ ಹಲವರು ಮೋದಿ ಕ್ಯಾಮರಾ ನೋಡುತ್ತಿದ್ದಾರೆ. ಕ್ಯಾಮಾರದಲ್ಲಿ ನಾನು ಸರಿಯಾಗಿ ಕಾಣಿಸಿಕೊಳ್ಳಬೇಕು ಅನ್ನೋದನ್ನು ಪರೀಶಿಲಿಸುತ್ತಿದ್ದಾರೆ. ಇವರು ನಮ್ಮ ಪ್ರಧಾನಿ, ನಿರ್ಗಮಿತ ರಾಷ್ಟ್ರಪತಿಗೆ ಗೌರವ ಕೊಡದವರು ಎಂದೆಲ್ಲಾ ಟೀಕಿಸಿದ್ದಾರೆ. ಆದರೆ ಆಸಲಿ ವಿಡಿಯೋ ಬಹಿರಂಗವಾದ ಬಳಿಕ ಎಲ್ಲರೂ ನಾಪತ್ತೆಯಾಗಿದ್ದಾರೆ.