Asianet Suvarna News Asianet Suvarna News

ಮನ್ ಕಿ ಬಾತ್‌ಗೆ ಸಾರ್ವಜನಿಕರಿಂದ ಅನಿಸಿಕೆ ಅಹ್ವಾನಿಸಿದ ಪ್ರಧಾನಿ ಮೋದಿ!

  • ಅಕ್ಟೋಬರ್ 24ರ ಮನ್ ಕಿ ಬಾತ್ ಕಾರ್ಯಕ್ರಮ
  • ಸಾರ್ವಜನಿಕರಿಂದ ಅನಿಸಿಕೆ ಆಹ್ವಾನಿಸಿದ ಮೋದಿ
  • 82ನೇ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಅಭಿಪ್ರಾಯ ಆಹ್ವಾನ
     
PM Modi invites citizens to share their ideas for Mann ki Baat on 24th October 2021 ckm
Author
Bengaluru, First Published Oct 16, 2021, 8:11 PM IST

ನವದೆಹಲಿ(ಅ.16): ಪ್ರಧಾನಿ ನರೇಂದ್ರ ಮೋದಿ ನಡೆಸಿಕೊಡುವ ಅತ್ಯಂತ ಜನಪ್ರಿಯ ಕಾರ್ಯಕ್ರಮ ಮನ್ ಕಿ ಬಾತ್(Mann ki Baat) ಇದೀಗ 82ನೇ ಆವೃತ್ತಿಗೆ ಸಜ್ಜಾಗಿದೆ. ಅಕ್ಟೋಬರ್ 24 ರಂದು ಪ್ರಸಾರವಾಗಲಿರುವ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ(Narendra Modi) ಸಾರ್ವಜನಿಕರಿಂದ ಅನಿಸಿಕೆ ಅಹ್ವಾನಿಸಿದ್ದಾರೆ. 

ಮನ್ ಕೀ ಬಾತ್‌ ನಲ್ಲಿ ಅಲೋವೇರಾ ಕೃಷಿ ಮಾತು... ಹಳ್ಳಿಯ ಚಿತ್ರಣವೇ  ಬದಲು!

ಈ ಕುರಿತು ಪ್ರಧಾನಿ ಮೋದಿ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಇದೇ 24ರಂದು ಮನ್ ಕಿ ಬಾತ್ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಮಾಸಿಕ ಆವೃತ್ತಿಗೆ ನಿಮ್ಮ ಅಭಿಪ್ರಾಯಗಳನ್ನು ನಾನು ಆಹ್ವಾನಿಸುತ್ತಿದ್ದೇನೆ. ನೀವು ನಮೋ ಆಪ್ ಅಥವಾ @mygovindia ಅಥವಾ  1800-11-7800 ಗೆ ಕರೆ ಮಾಡಿ ದಾಖಲಿಸಬಹುದು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

 

ಮನ್‌ ಕಿ ಬಾತ್: ನದಿಗಳ ಮಹತ್ವ ತಿಳಿಸಿದ ಮೋದಿ, ಖಾದಿ ಬಳಕೆಗೂ ಕರೆ!

 82ನೇ ಆವೃತಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಅನಿಸಿಕೆಗಳನ್ನು ಹಂಚಿಕೊಳ್ಳಲು ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಕೋರಿದ್ದಾರೆ.ಮನ್ ಕಿ ಬಾತ್ ಅಭಿಪ್ರಾಯಗಳನ್ನು ನಮೋ ಆಪ್ ಅಥವಾ ಮೈ ಗೌ ಓಪನ್ ಫೋರಂ ಮೂಲಕ ಹಂಚಿಕೊಳ್ಳಬಹುದು . 

ಮನ್‌ ಕೀ ಬಾತ್: ಕರ್ನಾಟಕದ ‘ಬಾಕಾಹು’ಗೆ ಮೋದಿ ಮನ್ನಣೆ!

ಈ ಬಾರಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಲಸಿಕಾ ಅಭಿಯಾನ 100 ಕೋಟಿ ದಾಖಲೆ ಕುರಿತು ಮಾತನಾಡುವ ಸಾಧ್ಯತೆ ಇದೆ. ಈ ವೇಳೆ ಆರೋಗ್ಯ ಕಾರ್ಯಕರ್ತರು, ಫ್ರಂಟ್ ಲೈನ್ ವರ್ಕಸ್ ಸೇರಿದಂತೆ ಭಾರತೀಯರಿಗೆ ವಿಶೇಷ ಧನ್ಯವಾದ ಅರ್ಪಿಸಲಿದ್ದಾರೆ.

ಮನ್‌ ಕಿ ಬಾತ್‌ನಿಂದ 31 ಕೋಟಿ ಆದಾಯ!

ಸದ್ಯ ಲಸಿಕಾ ಅಭಿಯಾನದಲ್ಲಿ 97 ಕೋಟಿ ಅಧಿಕ ಡೋಸ್ ನೀಡಲಾಗಿದೆ. 100 ಕೋಟಿ ಡೋಸ್ ವೇಳೆ ವಿಶೇಷ ಸಂಭ್ರಮ ಆಚರಿಸಲು ಕೇಂದ್ರ ಸರ್ಕಾರ ತಯಾರಿ ಮಾಡಿಕೊಂಡಿದೆ. ಇತರ ಯಾವ ದೇಶ ಮಾಡದ ಸಾಧನೆಯನ್ನು ಭಾರತ ಮಾಡಿದೆ. ಈ ಮೂಲಕ ಕೊರೋನಾವೈರಸ್ ವಿರುದ್ಧ ಭಾರತ ಶಕ್ತವಾಗಿ ಹೋರಾಡುತ್ತಿದೆ. ಈ ವಿಚಾರ ಮನ್ ಕಿ ಬಾತ್‍‌ನಲ್ಲಿ ಉಲ್ಲೇಖವಾಗುವ ಸಾಧ್ಯತೆ ಇದೆ.

ಕಣಿವೆ ರಾಜ್ಯದಲ್ಲಿ ಮತ್ತೆ ಉಗ್ರರ ಉಪಟಳ ಹೆಚ್ಚಾಗಿದ್ದು, ಭಾರತೀಯ ಸೇನಾ ಕಾರ್ಯಚರಣೆ ನಿರಂತವಾಗಿದೆ. ಭಯೋತ್ಪಾದನೆ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮೋದಿ ದಿಟ್ಟವಾಗಿ ಮಾತನಾಡಿದ್ದಾರೆ. ಇದೀಗ 82ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲೂ ಭಯೋತ್ಪಾದನ ವಿರುದ್ಧ ಮೋದಿ ಗುಡುಗುವ ಸಾಧ್ಯತೆ ಇದೆ.

Follow Us:
Download App:
  • android
  • ios