Asianet Suvarna News Asianet Suvarna News

ಮನ್‌ ಕಿ ಬಾತ್‌ನಿಂದ 31 ಕೋಟಿ ಆದಾಯ!

* 2014ರಲ್ಲಿ ಪ್ರಾರಂಭಿಸಲಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಾಸಿಕ ‘ಮನ್‌ ಕಿ ಬಾತ್‌’ ಕಾರ್ಯಕ್ರಮ 

* ಮನ್‌ ಕಿ ಬಾತ್‌ನಿಂದ 31 ಕೋಟಿ ಆದಾಯ

* ರವಿವಾರ 11 ಗಂಟೆಗೆ ಆಲ್‌ ಇಂಡಿಯಾ ರೇಡಿಯೋದ ಎಲ್ಲಾ ಚಾನೆಲ್‌ಗಳು, ದೂರದರ್ಶನ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ

Mann Ki Baat radio programme generated Rs 31 cr revenue since 2014 Govt pod
Author
Bangalore, First Published Jul 20, 2021, 9:57 AM IST

ಹೊಸದಿಲ್ಲಿ(ಜು.20): 2014ರಲ್ಲಿ ಪ್ರಾರಂಭಿಸಲಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಾಸಿಕ ‘ಮನ್‌ ಕಿ ಬಾತ್‌’ ಕಾರ್ಯಕ್ರಮ ಇದುವರೆಗೆ 30.80 ಕೋಟಿ ರೂ. ಗೂ ಅಧಿಕ ಆದಾಯ ಗಳಿಸಿದೆ. 2017-18ರಲ್ಲಿ ಈ ಕಾರ್ಯಕ್ರಮದ ಮೂಲಕ ಅತೀ ಹೆಚ್ಚು (10.64 ಕೋಟಿ) ಆದಾಯ ಬಂದಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್‌ ಠಾಕೂರ್‌ ಅವರು ರಾಜ್ಯಸಭೆಗೆ ತಿಳಿಸಿದ್ದಾರೆ.

‘ಮನ್‌ ಕಿ ಬಾತ್‌’ ಕಾರ್ಯಕ್ರಮ ಪ್ರತೀ ತಿಂಗಳ ಕೊನೆಯ ರವಿವಾರ 11 ಗಂಟೆಗೆ ಆಲ್‌ ಇಂಡಿಯಾ ರೇಡಿಯೋದ ಎಲ್ಲಾ ಚಾನೆಲ್‌ಗಳು, ದೂರದರ್ಶನ ಹಾಗೂ ಸಾಮಾಜಿಕ ಜಾಲತಾಣಗಳÜಲ್ಲಿ ಪ್ರಸಾರವಾಗುತ್ತದೆ. ‘ಇದುವರೆಗೆ ಒಟ್ಟು 78 ಎಪಿಸೋಡ್‌ಗಳು ಪ್ರಸಾರವಾಗಿದೆ. ಈ ಕಾರ್ಯಕ್ರಮ 91 ಖಾಸಗಿ ಸ್ಯಾಟಲೈಟ್‌ ಟಿವಿ ಚಾನೆಲ್‌ಗಳಲ್ಲಿಯೂ ಪ್ರಸಾರ ಮಾಡಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

2014-15ರಲ್ಲಿ 1.16 ಕೋಟಿ, 2015-16ರಲ್ಲಿ 2.81 ಕೋಟಿ, 2016-17ರಲ್ಲಿ 5.14 ಕೋಟಿ, 2017-18ರಲ್ಲಿ 10.64 ಕೋಟಿ ರೂ., 2018-19ರಲ್ಲಿ 7.47 ಕೋಟಿ, 20190-20ರಲ್ಲಿ 2.56 ಕೋಟಿ ಹಾಗೂ 2020-21ರಲ್ಲಿ 1.02 ಕೋಟಿ ರೂ. ಆದಾಯ ಗಳಿಸಿದೆ ಎಂದು ತಿಳಿಸಿದ್ದಾರೆ.

‘ರೇಡಿಯೋ ಮೂಲಕ ದೇಶದ ಎಲ್ಲಾ ಪ್ರಜೆಗಳನ್ನೂ ತಲುಪುವುದು ಮನ್‌ ಕಿ ಬಾತ್‌ ಕಾರ್ಯಕ್ರಮದ ಪ್ರಮುಖ ಉದ್ದೇಶ. ಈ ಕಾರ್ಯಕ್ರಮ ಸರಕಾರದ ಜೊತೆ ಪ್ರಜೆಗಳಿಗೆ ಸಂಪರ್ಕ ಸಾಧಿಸಲು ಹಾಗೂ ಅವರಿಗೆ ಸಲಹೆ ನೀಡುವುದಕ್ಕೂ ಅವಕಾಶ ನೀಡಿದೆ’ ಎಂದು ಸಚಿವರು ತಿಳಿಸಿದ್ದಾರೆ.

Follow Us:
Download App:
  • android
  • ios