ತಮಿಳುನಾಡಿನಲ್ಲಿ ಶೂನ್ಯ ಸಂಪಾದನೆಗೆ ಮೋದಿ ಕಣ್ಣೀರು: ಮುರಸೋಳಿ ವರದಿ
ತಮಿಳುನಾಡಿನಲ್ಲಿ ಬಿಜೆಪಿ ಒಂದೇ ಒಂದು ಸೀಟಲು ಗೆಲ್ಲಲು ವಿಫಲವಾಗಿದ್ದಕ್ಕೆ ಸಂಸದರ ಸಭೆಯಲ್ಲಿ ಪ್ರಧಾನಿ ಮೋದಿ ಕಣ್ಣೀರು ಹಾಕಿದ್ದಾರೆ ಎಂದು ಡಿಎಂಕೆ ಮುಖವಾಣಿ ಮುರಸೋಳಿ ವರದಿ ಮಾಡಿದೆ.
ಚೆನ್ನೈ (ಜೂ.18): ‘ದ್ರಾವಿಡ ನೆಲ ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರೆಯಬೇಕು ಎನ್ನುವ ಆಸೆಯಿಂದ ಇನ್ನಿಲ್ಲದ ಕಸರತ್ತು ಮಾಡಿತ್ತು. ಆದರೆ ಇದು ಕೈಗೂಡಿರಲ್ಲಿಲ್ಲ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಬೇಸರ ಮಾಡಿಕೊಂಡಿದ್ದು, ಇತ್ತೀಚಿಗೆ ನಡೆದ ಎನ್‌ಡಿಎ ಕೂಟದ ಸಂಸದರ ಸಭೆಯಲ್ಲಿ ಕಣ್ಣೀರು ಹಾಕಿದರು’ ಎಂದು ಡಿಎಂಕೆ ಮುಖವಾಣಿ ‘ಮುರಸೋಳಿ’ ಸೋಮವಾರ ವರದಿ ಮಾಡಿದೆ. ‘ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಒಂದೇ ಒಂದು ಕ್ಷೇತ್ರವನ್ನೂ ಗೆಲ್ಲುವುದಕ್ಕೆ ಸಾಧ್ಯವಾಗಲಿಲ್ಲ ಎಂದು ಮೋದಿ ಕಣ್ಣೀರು ಹಾಕಿದರು ಆದರೆ ತಾವು ಏಕೆ ಜಯಗಳಿಸಲಿಲ್ಲ ಎಂಬ ಬಗ್ಗೆ ಹೇಳಿಕೊಂಡಿಲ್ಲ. ಅದಕ್ಕೆ ಕಾರಣ ಏನು ಎನ್ನುವುದನ್ನು ಕೂಡ ಅವರು ಅರಿತುಕೊಂಡಂತೆ ಕಾಣುತ್ತಿಲ್ಲ. ಒಂದು ವೇಳೆ ಸೋಲಿಗೆ ನಿಜವಾದ ಕಾರಣದ ಸತ್ಯದ ಅರಿವಾಗಿದ್ದರೂ ಕೂಡ ಅವರು ಅದನ್ನು ಬಹಿರಂಗಪಡಿಸುವುದಕ್ಕೆ ಸಾಧ್ಯವಾಗಲಿಲ್ಲ’ ಎಂದು ಮುರಸೋಳಿ ತನ್ನ ಸಂಪಾದಕೀಯದಲ್ಲಿ ಜೂನ್ 17 ರಂದು ಪ್ರಕಟಿಸಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಕೂಟ ಎಲ್ಲ 39 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಎನ್‌ಡಿಎ ಕನಸು ಛಿದ್ರ ಮಾಡಿದೆ.
4 ಚುನಾವಣಾ ರಾಜ್ಯಗಳಿಗೆ ಬಿಜೆಪಿ ಉಸ್ತುವಾರಿ ನೇಮಕ: ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಈ ವರ್ಷಾಂತ್ಯದ ಒಳಗೆ ನಡೆಯಲಿರುವ ವಿಧಾನಸಭೆ ಚುನಾವಣೆಗಳತ್ತ ಬಿಜೆಪಿ ಕಣ್ಣಿಟ್ಟಿದೆ. ಜಾರ್ಖಂಡ್, ಹರಿಯಾಣ,ಮಹಾರಾಷ್ಟ್ರ ಮತ್ತು ಜಮ್ಮು-ಕಾಶ್ಮೀರಕ್ಕೆ ಚುನಾವಣಾ ಉಸ್ತುವಾರಿಗಳನ್ನು ನೇಮಿಸಿದೆ. ಬಿಜೆಪಿ ಪಾಲಿಗೆ ಪ್ರಮುಖ ರಾಜ್ಯವಾಗಿರುವ ಮಹಾರಾಷ್ಟ್ರದಲ್ಲಿ ಕೇಂದ್ರ ಸಚಿವ ಭೂಪೇಂದ್ರ ಯಾದವ್‌ರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಿದ್ದು, ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್ ಅವರನ್ನು ಸಹ ಉಸ್ತುವಾರಿಯನ್ನಾಗಿ ನೇಮಿಸಿದೆ. ಹರ್ಯಾಣಕ್ಕೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಸಹ ಉಸ್ತುವಾರಿಯನ್ನಾಗಿ ತ್ರಿಪುರ ಮಾಜಿ ಸಿಎಂ ಬಿಪ್ಲಬ್ ಕುಮಾರ್ ದೇಬ್ ಅವರಿಗೆ ಹೊಣೆಗಾರಿಕೆ ನೀಡಲಾಗಿದೆ.
ಪಿಎಂ ಮೋದಿ ಜೊತೆ ಸಂವಾದಕ್ಕೆ ಕರ್ನಾಟಕದ ಇಬ್ಬರು ಕೃಷಿ ಸಖಿ ಆಯ್ಕೆ
ಜಾರ್ಖಂಡ್‌ಗೆ ಮಧ್ಯಪ್ರದೇಶ ಮಾಜಿ ಸಿಎಂ, ಹಾಲಿ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಚುನಾವಣಾ ಉಸ್ತುವಾರಿಯಾಗಿದ್ದು, ಅಸ್ಸಾಂ ಸಿಎಂ ಹೇಮಂತ್ ಬಿಸ್ವ ಶರ್ಮಾ ಸಹ ಉಸ್ತುವಾರಿಯಾಗಿ ಸಾಥ್ ನೀಡಲಿದ್ದಾರೆ. ಜಮ್ಮು ಕಾಶ್ಮೀರದ ಚುನಾವಣಾ ಉಸ್ತುವಾರಿ ಜವಾಬ್ದಾರಿಯನ್ನು ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ನಿರ್ವಹಿಸಲಿದ್ದಾರೆ.
2009ರಲ್ಲಿ ಪ್ರಕಟವಾದ ಪಾಕೆಟ್ ಸಂವಿಧಾನಕ್ಕೆ ಈಗ ಭಾರಿ ಡಿಮ್ಯಾಂಡ್: ರಾಹುಲ್ ಎಫೆಕ್ಟ್ ಎಂದ ಪ್ರಕಾಶಕ