Asianet Suvarna News Asianet Suvarna News

Mayors Conference: ಜನಸಂಘ ಕಾಲದ ಉಡುಪಿ ನಗರಸಭೆಯನ್ನು ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ!

ಗುಜರಾತಿನಲ್ಲಿ ನಡೆಯುತ್ತಿರುವ ಮೇಯರ್ ಮತ್ತು ಉಪಮೇಯರ್ ಸಮ್ಮೇಳನದಲ್ಲಿ ಮಾತನಾಡಿದ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ1960 ರ ದಶಕದಲ್ಲಿ ಕರ್ನಾಟಕದ  ಉಡುಪಿ ಪುರಸಭೆಯು ಜನಸಂಘ ಆಡಳಿತದಲ್ಲಿ ಗೆದ್ದು ಜನ ಮೆಚ್ಚುಗೆಯನ್ನು ಪಡೆದಿತ್ತು ಅದು ಈಗಲೂ ಬಿಜೆಪಿ ಆಡಳಿತದ ಮೂಲಕ ನಿರಂತರವಾಗಿ ಪ್ರಥಮ ಸ್ಥಾನ ಪಡೆದು ಜನ ಮೆಚ್ಚುಗೆಯನ್ನು ಗಳಿಸಿತ್ತಿದೆ  ಅದು ಈಗಲೂ ನಿರಂತರ ನಡೆದುಕೊಂಡು ಬರುತ್ತಿದೆ ಎಂದು ಹೊಗಳಿದ್ದಾರೆ.

PM Modi in National Mayors Conference People coming to cities for livelihood should get proper rented houses san
Author
First Published Sep 20, 2022, 12:30 PM IST

ಅಹಮದಾಬಾದ್ (ಸೆ.20): ಅಹಮದಾಬಾದ್‌: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ (ಸೆಪ್ಟೆಂಬರ್ 20) ಗುಜರಾತ್‌ನ ರಾಜಧಾನಿ ಗಾಂಧಿನಗರದಲ್ಲಿ ನಡೆದ ಎರಡು ದಿನಗಳ ರಾಷ್ಟ್ರೀಯ ಮೇಯರ್‌ಗಳ ಸಮ್ಮೇಳನವನ್ನು ವರ್ಚುವಲ್‌ ಆಗಿ ಉದ್ಘಾಟಿಸಿದರು. ದೇಶದಾದ್ಯಂತ ಬಿಜೆಪಿ ಆಡಳಿತವಿರುವ ನಗರ ಸ್ಥಳೀಯ ಸಂಸ್ಥೆಗಳ 121 ಮೇಯರ್‌ಗಳು ಮತ್ತು ಉಪಮೇಯರ್‌ಗಳು ಪಕ್ಷದ ಉತ್ತಮ ಆಡಳಿತ ಕೋಶ ಆಯೋಜಿಸಿರುವ ಎರಡು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಜನಸಂಘದ ಅವಧಿಯಲ್ಲಿದ್ದ ಉಡುಪಿ ಪುರಸಭೆಯನ್ನು ಕೊಂಡಾಡಿದ್ದಾರೆ. 1960 ರ ದಶಕದಲ್ಲಿ ಕರ್ನಾಟಕದ  ಉಡುಪಿ ಪುರಸಭೆಯು ಜನಸಂಘ ಆಡಳಿತದಲ್ಲಿ ಗೆದ್ದು ಜನ ಮೆಚ್ಚುಗೆಯನ್ನು ಪಡೆದಿತ್ತು. ಅದು ಈಗಲೂ ಬಿಜೆಪಿ ಆಡಳಿತದ ಮೂಲಕ ನಿರಂತರವಾಗಿ ಪ್ರಥಮ ಸ್ಥಾನ ಪಡೆದು ಜನ ಮೆಚ್ಚುಗೆಯನ್ನು ಗಳಿಸಿತ್ತಿದೆ  ಅದು ಈಗಲೂ ನಿರಂತರ ನಡೆದುಕೊಂಡು ಬರುತ್ತಿದೆ ಎಂದು ಮೆಚ್ಚುಗೆಯ ಮಾತನ್ನಾಡಿದ್ದಾರೆ.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಸ್ವಾತಂತ್ರ್ಯದ ಅಮೃತದ ಸಮಯದಲ್ಲಿ ಮುಂದಿನ 25 ವರ್ಷಗಳವರೆಗೆ ಭಾರತದ ನಗರಾಭಿವೃದ್ಧಿಯ ಮಾರ್ಗಸೂಚಿಯನ್ನು ಸಿದ್ಧಪಡಿಸುವಲ್ಲಿ ಈ ಸಮ್ಮೇಳನವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಾಮಾನ್ಯ ನಾಗರಿಕರ ಸಂಬಂಧವು ಸರ್ಕಾರ ಎಂಬ ಯಾವುದೇ ವ್ಯವಸ್ಥೆಯಿಂದ ಬಂದರೆ, ಅದು ಪಂಚಾಯಿತಿಯಿಂದ ಬರುತ್ತದೆ, ನಗರ ಪಂಚಾಯಿತಿಯಿಂದ ಬರುತ್ತದೆ, ಪುರಸಭೆಯಿಂದ ಬರುತ್ತದೆ, ಮಹಾನಗರ ಪಾಲಿಕೆಯಿಂದ ಬರುತ್ತದೆ. ಹಾಗಾಗಿ ಇಂತಹ ಚರ್ಚೆಗಳ ಮಹತ್ವ ಹೆಚ್ಚುತ್ತಿದೆ. ನಮ್ಮ ದೇಶದ ನಾಗರಿಕರು ಬಹಳ ಹಿಂದಿನಿಂದಲೂ ನಗರಗಳ ಅಭಿವೃದ್ಧಿಗಾಗಿ ಬಿಜೆಪಿ ಮೇಲೆ ನಂಬಿಕೆ ಇಟ್ಟಿದ್ದಾರೆ. ಅದನ್ನು ನಿರಂತರವಾಗಿ ಉಳಿಸಿಕೊಳ್ಳುವ, ಹೆಚ್ಚಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಎಲ್ಲರ ಸಹಕಾರ, ಎಲ್ಲರ ಅಭಿವೃದ್ಧಿ, ಪ್ರತಿಯೊಬ್ಬರ ನಂಬಿಕೆ ಮತ್ತು ಎಲ್ಲರ ಪ್ರಯತ್ನ. ಬಿಜೆಪಿ ಅಳವಡಿಸಿಕೊಂಡಿರುವ ಸೈದ್ಧಾಂತಿಕ ಮಾದರಿಯೇ ನಮ್ಮ ಮಾದರಿಯನ್ನು ಇತರರಿಂದ ಪ್ರತ್ಯೇಕಿಸುತ್ತದೆ ಎಂದಿದ್ದಾರೆ.

ಬಿಜೆಪಿಯ (BJP) ಮೇಯರ್ ಆಗಿ, ನಗರಗಳ ಮುಖ್ಯಸ್ಥರಾಗಿ, ರಿಯಲ್ ಎಸ್ಟೇಟ್ ಕ್ಷೇತ್ರವನ್ನು ಉತ್ತಮ ಮತ್ತು ಪಾರದರ್ಶಕಗೊಳಿಸುವ ಹೆಚ್ಚಿನ ಜವಾಬ್ದಾರಿ ನಿಮ್ಮ ಮೇಲಿದೆ. ಈ ಅಭಿಯಾನವನ್ನು ನಿಮ್ಮ ಆಯಾ ನಗರಗಳಲ್ಲಿ ವೇಗಗೊಳಿಸಲು ನಾನು ನಿಮ್ಮೆಲ್ಲರನ್ನು ಕೇಳಿಕೊಳ್ಳುತ್ತೇನೆ. ಕಾರ್ಯಗಳನ್ನು ತ್ವರಿತವಾಗಿ ಮಾಡಿ ಮತ್ತು ಗುಣಮಟ್ಟದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳಬೇಡಿ. ನಿಯಮಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಆದ್ಯತೆಯಾಗಿರಬೇಕು. 2014ರ ವರೆಗೆ ನಮ್ಮ ದೇಶದಲ್ಲಿ ಮೆಟ್ರೋ ನೆಟ್‌ವರ್ಕ್ 250 ಕಿಮೀಗಿಂತ ಕಡಿಮೆ ಇತ್ತು.ಇಂದು ದೇಶದಲ್ಲಿ ಮೆಟ್ರೋ ಜಾಲ 775 ಕಿ.ಮೀ. ಆಗಿದೆ.

ಜನರು ಜೀವನೋಪಾಯಕ್ಕಾಗಿ ತಾತ್ಕಾಲಿಕವಾಗಿ ನಗರಗಳಿಗೆ ಬರುತ್ತಾರೆ, ಅವರಿಗೆ ಉತ್ತಮವಾದ ಬಾಡಿಗೆ ಮನೆಗಳ ಸಿಗಬೇಕು. ಇದಕ್ಕಾಗಿ ದೊಡ್ಡ ಮಟ್ಟದಲ್ಲಿ ಕೆಲಸ ನಡೆಯುತ್ತಿದೆ.  ಚುನಾವಣೆ ಆಧಾರಿತ ಚಿಂತನೆಯಿಂದ ನಗರಕ್ಕೆ ಒಳ್ಳೆಯದನ್ನು ಮಾಡಲು ಸಾಧ್ಯವಿಲ್ಲ. ನನ್ನ ನಗರವು ಆರ್ಥಿಕವಾಗಿ ಸಮೃದ್ಧವಾಗಿರಲಿ. ನನ್ನ ನಗರವು ಕೆಲವು ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ನನ್ನ ನಗರ ಪ್ರವಾಸೋದ್ಯಮದ ಆಕರ್ಷಣೆಯ ಕೇಂದ್ರವಾಗಬೇಕು ಎನ್ನುವ ಚಿಂತನೆಯೊಂದಿಗೆ ಕೆಲಸ ಮಾಡಬೇಕು ಎಂದಿದ್ದಾರೆ.

ಈ ವೇಳೆ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ (PM Garib Kalyan Anna Yojana) ಜೆಪಿ ನಡ್ಡಾ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ (PM Narendra Modi) ಯೋಜನೆ ಆರಂಭಿಸುವ ಮೂಲಕ 80 ಕೋಟಿ ಜನರಿಗೆ ಐದು ಕಿಲೋ ಗೋಧಿ, ಐದು ಕಿಲೋ ಅಕ್ಕಿ ಮತ್ತು ಬೇಳೆಕಾಳುಗಳನ್ನು ನೀಡುವ ಮೂಲಕ ಬಡ ಜನರನ್ನು ಬಲಪಡಿಸಲು ಸರ್ಕಾರ ಕೆಲಸ ಮಾಡಿದ್ದೇವೆ. ಶತಮಾನದ ಹಿಂದೆ ದುರಂತ ಸಂಭವಿಸಿದಾಗ, ರೋಗಕ್ಕಿಂತ ಹೆಚ್ಚು ಜನರು ಹಸಿವಿನಿಂದ ಸತ್ತರು. ಕರೋನಾ (Corona) ಮಹಾಮಾರಿ ಈ ಶತಮಾನದ ದೊಡ್ಡ ದುರಂತ. ರೈತರ ಬಗ್ಗೆ ಯಾರೂ ಯೋಚಿಸಿಲ್ಲ, ಆದರೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ 11 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ ವಾರ್ಷಿಕ 6 ಸಾವಿರ ರೂಪಾಯಿಗಳನ್ನು ಕಳುಹಿಸುವ ಕೆಲಸವನ್ನು ಪ್ರಧಾನಿ ಮಾಡಿದ್ದಾರೆ. ನಾವು ರಾಜಕೀಯಕ್ಕೆ ಬಂದಿದ್ದೇವೆ, ಸಿಂಹಾಸನದಲ್ಲಿ ಕೂರಲು ಮಾತ್ರ ಬಂದಿಲ್ಲ, ಅಧಿಕಾರದಲ್ಲಿ ಕೂರಲು ಬಂದಿಲ್ಲ. ಅಧಿಕಾರವೇ ನಮಗೆ ಮಾಧ್ಯಮ, ಸೇವೆಯೇ ಗುರಿ. ಉತ್ತಮ ಆಡಳಿತದ ಮೂಲಕ ನಾವು ಜನರಿಗೆ ಹೇಗೆ ಸೇವೆ ಸಲ್ಲಿಸಬಹುದು ಎಂಬುದಕ್ಕಾಗಿ ನಾವು ಕೆಲಸ ಮಾಡುತ್ತೇವೆ ಎಂದರು.

ಪ್ರಧಾನಿ ಮೋದಿ ಜನ್ಮ ದಿನದ ಪ್ರಯುಕ್ತ ರಕ್ತದಾನ ಶಿಬಿರ: 2 ಸಾವಿರಕ್ಕೂ ಹೆಚ್ಚು ಯೂನಿಟ್‌ನಷ್ಟು ರಕ್ತ ಸಂಗ್ರಹ

ಜೆಪಿ ನಡ್ಡಾ (JP Nadda) ಅವರಲ್ಲದೆ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Maharashtra Deputy Chief Minister Devendra Fadnavis ) ಮತ್ತು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ(Union Housing and Urban Affairs Minister Hardeep Singh Puri) ಅವರು ಎರಡು ದಿನಗಳ ಕಾಲ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಫಡ್ನವೀಸ್ ಅವರು ನಗರಾಭಿವೃದ್ಧಿಗೆ ( urban development) ತಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳಲಿದ್ದಾರೆ. ಪುರಿ ಅವರು ನಗರ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.

PM Modi Turns 72: ಕಾಯಕಯೋಗಿ ಮೋದಿ: ಹೇಗಿತ್ತು ಪ್ರಧಾನಿ ಸ್ಪೆಷಲ್ ಡೇ?

ಒಟ್ಟಾರೆಯಾಗಿ, 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮೇಯರ್‌ಗಳು, ಉಪ ಮೇಯರ್‌ಗಳು ಮತ್ತು ಇತರ ಚುನಾಯಿತ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ತ್ಯಾಜ್ಯ ನಿರ್ವಹಣೆ, ಟ್ರಾಫಿಕ್ ನಿರ್ವಹಣೆ ಮತ್ತು ನೀರು ಜಲಾವೃತವಾಗುವ ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಸೂರತ್, ಇಂದೋರ್, ಕಾನ್ಪುರ ಮತ್ತು ಪಣಜಿಯ ಮೇಯರ್‌ಗಳು ತಮ್ಮ ತಮ್ಮ ನಗರಗಳಲ್ಲಿ ತ್ಯಾಜ್ಯ ನಿರ್ವಹಣೆ, ಸ್ವಚ್ಛತೆ ಮತ್ತು ಆದಾಯ ಉತ್ಪಾದನೆ ಸೇರಿದಂತೆ ಕ್ಷೇತ್ರಗಳಲ್ಲಿ ಮಾಡಿದ ಕೆಲಸಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.

Follow Us:
Download App:
  • android
  • ios