ಡ್ರೋನ್ ದಾಳಿ ಬೆನ್ನಲ್ಲೇ ಪ್ರಧಾನಿ ಮೋದಿ ಮಹತ್ವದ ಸಭೆ; ಅಮಿತ್ ಶಾ, ರಾಜನಾಥ್, ದೋವಲ್ ಭಾಗಿ!
- ಡ್ರೋನ್ ದಾಳಿ, ಕಣಿವೆ ರಾಜ್ಯದಲ್ಲಿನ ಉಗ್ರರ ದಾಳಿ ಬೆನ್ನಲ್ಲೇ ಸಭೆ
- ಮಹತ್ವದ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ
- ಅಮಿತ್ ಶಾ, ರಾಜನಾಥ್ ಸಿಂಗ್, ಅಜಿತ್ ದೋವಲ್ ಭಾಗಿ
ನವದೆಹಲಿ(ಜೂ.29): ಜಮ್ಮು ಮತ್ತು ಕಾಶ್ಮೀರದ ಏರ್‌ಬೇಸ್ ಮೇಲೆ ಡ್ರೋಣ್ ಬಾಂಬ್ ದಾಳಿ ಭಾರತಕ್ಕೆ ಅಪಾಯದ ಎಚ್ಚರಿಕೆ ನೀಡಿದೆ. ಇಷ್ಟುದಿನ ಗಡಿ ತೀರದಲ್ಲಿ ಹಾಗೂ ಭಾರದೊಳಕ್ಕೆ ಡ್ರೋನ್ ಪತ್ತೆಯಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಡ್ರೋನ್ ಮೂಲಕ, ಅತ್ಯಂತ ಸುರಕ್ಷತಿ ಏರ್‌ಬೇಸ್ ಮೇಲೆ ದಾಳಿ ನಡೆದಿದೆ. ಇದರ ಬೆನಲ್ಲೇ ಕಣಿವೆ ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ವರದಿಯಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ದಿಢೀರ್ ಮಹತ್ವದ ಸಭೆ ನಡೆಸಿದ್ದಾರೆ.
ಜಮ್ಮುವಿನಲ್ಲಿ ಮತ್ತೆ ಡ್ರೋನ್: ದಾಳಿಯ ತನಿಖೆ NIA ವಹಿಸಿದ ಗೃಹ ಸಚಿವಾಲಯ!.
ಪ್ರಧಾನಿ ಮೋದಿ ನಡೆಸಿದ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹಗಾರ ಅಜಿತ್ ದೋವಲ್ ಪಾಲ್ಗೊಂಡಿದ್ದಾರೆ. ಈ ಸಭೆಯಲ್ಲಿ ಹಲವು ವಿಚಾರಗಳು ಚರ್ಚೆಯಾಗಿವೆ. ಪ್ರಮುಖವಾಗಿ ಡ್ರೋನ್ ದಾಳಿ ಹಾಗೂ ರಾಜನಾಥ್ ಸಿಂಗ್ ಲಡಾಖ್ ಭೇಟಿ ವಿಷಯವನ್ನು ಚರ್ಚಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಗಡಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕಳೆದೊಂದು ವರ್ಷದ ಸಂಘರ್ಷಕ್ಕೆ ಚೀನಾ ಅಂತ್ಯ ಹಾಡವು ಮಾತು ಹೇಳಿತ್ತು. ಆದರೆ ಹಾಗೆ ನಡೆದುಕೊಂಡಿಲ್ಲ. ಹೀಗಾಗಿ ಗಡಿಯಲ್ಲಿ ಸಂಘರ್ಷದ ವಾತಾವರಣವಿದೆ. ಹೀಗಾಗಿ ರಾಜನಾಥ್ ಸಿಂಗ್ ಲಡಾಖ್‌ಗೆ ಭೇಟಿ ನೀಡಿದ್ದರು. ಎರಡು ದಿನಗಳ ಭೇಟಿಯಲ್ಲಿ ರಾಜನಾಥ್ ಸಿಂಗ್, ಚೀನಾಗೆ ಖಡಕ್ ಸಂದೇಶ ರವಾನಿಸಿದ್ದರು.
ಲಡಾಖ್ನಲ್ಲೇ ನಿಂತು ಚೀನಾಕ್ಕೆ ರಾಜನಾಥ್ ನೇರ ಎಚ್ಚರಿಕೆ!...
ಚೀನಾ ಗಡಿ ಸಂಘರ್ಷ, ಜಮ್ಮು ಕಾಶ್ಮೀರದಲ್ಲಿನ ಡ್ರೋನ್ ದಾಳಿ ಸೇರಿದಂತೆ ಭವಿಷ್ಯದ ರಕ್ಷಣಾ ವ್ಯವಸ್ಥೇ ಮೇಲಿನ ಸವಾಲುಗಳ ಕುರಿತು ಮೋದಿ ಚರ್ಚಿಸಿದ್ದಾರೆ. ಭಾರತದ ರಕ್ಷಣಾ ವ್ಯವಸ್ಥೆಯಲ್ಲಿ ಕೆಲ ಬದಲಾವಣೆ ತರುವ ಪ್ರಸ್ತಾಪವನ್ನು ಅಜಿತ್ ದೋವಲ್ ನೀಡಿದ್ದಾರೆ.