ದೇಶಾದ್ಯಂತ ಗಣರಾಜ್ಯೋತ್ಸವದ ಸಂಭ್ರಮ. ಪ್ರಧಾನಿ ಮೋದಿ ದೇಶದ ಜನತೆಗೆ ಗಣತಂತ್ರ ದಿವಸದ ಶುಭಾಶಯ ತಿಳಿಸಿದ್ದಾರೆ. ಈ ಬಾರಿ ಗಣರಾಜ್ಯೋತ್ಸವ ಕೆಲ ವಿಶೇಷತೆಗಳಿಂದ ಕೂಡಿದೆ. ಇದೇ ಮೊದಲ ಬಾರಿಗೆ ಗಣತಂತ್ರ ದಿನ ಹೊಸ ಅಧ್ಯಾಯ ಬರೆಯಲಿದೆ.
ನವದೆಹಲಿ(ಜ.26) ಭಾರತ ಗಣರಾಜ್ಯೋತ್ಸವದ ಸಂಭ್ರಮದಲ್ಲಿದೆ. ದೆಹಲಿಯಲ್ಲಿ ಕೆಲವೇ ಕ್ಷಣಗಳಲ್ಲಿ ಗಣರಾಜ್ಯೋತ್ಸ ಸಂಭ್ರಮದ ಪಥ ಸಂಚಲನ, ಸೇನಾ ಶಕ್ತಿ ಪ್ರದರ್ಶನಗಳು ಆರಂಭಗೊಳ್ಳಲಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಗಣತಂತ್ರ ದಿನದ ಶುಭಾಶಯ ತಿಳಿಸಿದ್ದಾರೆ.ಇದೇ ವೇಳೆ ಸಂವಿಧಾನ ರಚಿಸಿದ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನವನ್ನು ಮತ್ತಷ್ಟು ಬಲಪಡಿಸಿದೆ ಮಹಾನ್ ಮಹಿಳೆಯರು ಹಾಗೂ ಪುರುಷರಿಗೆ ಮೋದಿ ಗೌರವ ಸಲ್ಲಿಸಿದ್ದಾರೆ.
ಗಣರಾಜ್ಯೋತ್ಸವದ ದಿನದ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ. ಇಂದು ದೇಶ 75ನೇ ಗಣರಾಜ್ಯೋತ್ಸ ಸಂಭ್ರಮ ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ನಾನು ಸಂವಿಧಾನ ರಚಿಸಿದ ಹಾಗೂ ಪ್ರಜಾಪ್ರಭುತ್ವ ಪ್ರಯಾಣದಲ್ಲಿ ಸಂವಿಧಾನ ಬಲಪಡಿಸಿದ ಎಲ್ಲಾ ಮಹಿಳೆಯರು ಹಾಗೂ ಪುರುಷರಿಗೆ ತಲೆಬಾಗುತ್ತೇನೆ. ಈ ಸಂದರ್ಭದಲ್ಲಿ ನಮ್ಮ ಸಂವಿಧಾನದ ಆದರ್ಶಗಳನ್ನು ಉಳಿಸಿ ಮುಂದುವರಿಸಲು, ಹಾಗೂ ಮತ್ತಷ್ಟು ಬಸಪಡಿಸಲು ಜೊತೆಗೆ ಭವ್ಯ ಭಾರತ ನಿರ್ಮಾಣಕ್ಕೆ ಪ್ರಯತ್ನಿಸೋಣ ಎಂದು ಮೋದಿ ಟ್ವೀಟ್ ಮಾಡಿದ್ದಾರೆ
Republic Day: ಭಯೋತ್ಪಾದಕರ ಗುಂಡಿಗೆ ಎದೆಕೊಟ್ಟಿದ್ದ ಸೇನಾ ಶ್ವಾನ ಫ್ಯಾಂಟಮ್‌ಗೆ ಮರಣೋತ್ತರ MiD ಪುರಸ್ಕಾರ!
ಈ ಬಾರಿಯ ಅತಿಥಿ ಯಾರು?
ಪ್ರತಿ ಗಣರಾಜ್ಯೋತ್ಸವ ದಿನಾಚರಣೆಗೆ ಭಾರತ ಅಂತಾರಾಷ್ಟ್ರೀಯ ಅತಿಥಿಯನ್ನು ಬರ ಮಾಡಿಕೊಳ್ಳುತ್ತದೆ. ಈ ಬಾರಿ ಗಣರಾಜ್ಯೋತ್ಸವ ದಿನಾಚರಣೆಗೆ ಇಂಡೋನೇಷಿಯಾ ಅಧ್ಯಕ್ಷ ಪರ್ಪೊವೊ ಸುಬಿಯಾಂಟೋ. ಭಾರತದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಳ್ಳುತ್ತಿರುವ ನಾಲ್ಕನೇ ಇಂಡೋನೇಷಿಯಾ ಅಧ್ಯಕ್ಷ ಅನ್ನೋ ಹೆಗ್ಗಳಿಕಕೆಗೆ ಸುಬಿಯಾಂಟೋ ಪಾತ್ರರಾಗಿದ್ದಾರೆ.
ಈ ಗಣರಾಜ್ಯೋತ್ಸವದ ವಿಶೇಷತೆ ಏನು?
ಗಣರಾಜ್ಯೋತ್ಸವ ದಿನಾಚರಣೆಗೆ ಆಕರ್ಷಕ ಪಥಸಂಚಲನ, ಸೇನಾ ಶಕ್ತಿ ಪ್ರದರ್ಶನ, ಸ್ಥಬ್ಧ ಚಿತ್ರ ಪ್ರದರ್ಶನ, ಕಲಾ ತಂಡಗಳ ಪ್ರದರ್ಶನಗಳು ಇರಲಿದೆ. ಇದರ ಜೊತೆಗೆ ಈ ಬಾರಿಯ ವಿಶೇಷ ಅಂದರೆ ಬರೋಬ್ಬರಿ 600 ಪಂಚಾಯಿತಿ ನಾಯಕರನ್ನು ಗಣರಾಜ್ಯೋತ್ಸವ ಪರೇಡ್‌ಗೆ ಆಹ್ವಾನಿಸಲಾಗಿದೆ. ಪಂಚಾಯತ್ ರಾಜ್ ಸಚಿವಾಲಯ ಈ ನಾಯಕರಿಗೆ ಆಹ್ವಾನ ನೀಡಿದೆ. ಯೋಜನೆಗಳ ಅನುಷ್ಠಾನ, ಸಮಪರ್ಕವಾಗಿ ಅರ್ಹಿಗೆ ತಲುಪಿಸಿದ ಆಧಾರದಲ್ಲಿ ಪಂಚಾಯಿತಿ ಮಟ್ಟದಲ್ಲಿ ನಾಯಕರನ್ನು ಆರಿಸಲಾಗಿದೆ.
