Republic Day: ಭಯೋತ್ಪಾದಕರ ಗುಂಡಿಗೆ ಎದೆಕೊಟ್ಟಿದ್ದ ಸೇನಾ ಶ್ವಾನ ಫ್ಯಾಂಟಮ್‌ಗೆ ಮರಣೋತ್ತರ MiD ಪುರಸ್ಕಾರ!
ಭಯೋತ್ಪಾದಕರ ವಿರುದ್ಧ ಹೋರಾಡಿ ವೀರಮರಣವಪ್ಪಿದ ಸೇನಾ ಶ್ವಾನ ಫ್ಯಾಂಟಮ್‌ಗೆ ಮರಣೋತ್ತರ ಶೌರ್ಯ ಪ್ರಶಸ್ತಿ ಘೋಷಣೆ. 2022ರಲ್ಲಿ ಸೇವೆಗೆ ಸೇರಿದ್ದ ಫ್ಯಾಂಟಮ್, ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ನವದೆಹಲಿ (ಜ.25): ಕಳೆದ ವರ್ಷದ ಅಕ್ಟೋಬರ್ 29ರ ಮಂಗಳವಾರ ಜಮ್ಮು ಕಾಶ್ಮೀರದ ಅಕ್ನೂರ್ ಸೆಕ್ಟರ್‌ನ ಕಾಡುಗಳಲ್ಲಿ ಇಬ್ಬರು ಭಯೋತ್ಪಾದಕರ ಹಣೆಗೆ ಗುಂಡಿಟ್ಟು ಭಾರತೀಯ ಸೇನೆ ಮಹಾ ವಿಜಯ ಸಾಧಿಸಿತ್ತು. ಅದರೊಂದಿಗೆ ಸತತ 27 ಗಂಟೆಗಳ ಕಾಲ ನಡೆದ ಗನ್‌ಫೈಟ್ ಕೊನೆಯಾಗಿತ್ತು. ಆದರೆ, ಈ ವಿಜಯ ಸಂಭ್ರಮಿಸುವ ಖುಷಿ ಸೇನೆಯಲ್ಲಿ ಇದ್ದರಿಲಿಲ್ಲ. ಯಾಕೆಂದರೆ, ಈ ಭಯೋತ್ಪಾದಕ ಮಟ್ಟ ಹಾಕಲು ಮೂಲ ಕಾರಣವಾಗಿದ್ದ ಜಮ್ಮು ಕಾಶ್ಮೀರದ ಮೂಲದ ನೈಟ್ ಕಾರ್ಪ್ಸ್‌ನ ಸೇನಾ ಶ್ವಾನ ಫ್ಯಾಂಟಮ್ ತನ್ನ ಜೀವ ಬಿಟ್ಟಿದ್ದ. ಭಯೋತ್ಪಾದಕರು ಅಡಗಿಕೊಂಡಿದ್ದ ಸ್ಥಳಗಳನ್ನು ಹುಡುಕಲು ಕಾರಣವಾಗಿದ್ದ ಫ್ಯಾಂಟಮ್ ಮೇಲೆ ಉಗ್ರಗಾಮಿಗಳು ಗುಂಡು ಹಾಕಿದ್ದರು. 2022ರಲ್ಲಿ ಭಾರತದ ಸೇನಾ ಸೇವೆಗೆ ಸೇರಿಕೊಂಡಿದ್ದ ನಾಲ್ಕು ವರ್ಷದ ಫ್ಯಾಂಟಮ್ ತನ್ನ ಉಸಿರು ಚೆಲ್ಲಿದ್ದ.
ಫ್ಯಾಂಟಮ್‌ನ ಸೇವೆಯನ್ನು ಗುರುತಿಸಿರುವ ಕೇಂದ್ರ ಸರ್ಕಾರ, ಈ ವರ್ಷದ ಗಣರಾಜ್ಯೋತ್ಸವದಂದು 9 ಪ್ಯಾರಾ ವಿಶೇಷ ಪಡೆಗಳೊಂದಿಗೆ ನಿಯೋಜಿಸಲಾದ ಭಾರತೀಯ ಸೇನೆಯ ಶ್ವಾನ ಫ್ಯಾಂಟಮ್‌ಗೆ ಮರಣೋತ್ತರವಾಗಿ ಮೆನ್ಷನ್ ಇನ್ ಡಿಸ್ಪ್ಯಾಚ್ ಶೌರ್ಯ ಪ್ರಶಸ್ತಿಯನ್ನು ಘೋಷಣೆ ಮಾಡಿದೆ.
2020ರ ಮೇ ಅಲ್ಲಿ ಜನಿಸಿದ್ದ ಗಂಡು ಜಾತಿಯ ಬೆಲ್ಜಿಯಂ ಮಲಿನಿಯೋಸ್ ತಳಿಯ ಸ್ನೈಫೆರ್ ಶ್ವಾನ, 2022ರ ಆಗಸ್ಟ್‌ನಿಂದ ಸೇನಾ ಸೇವೆಗೆ ನಿಯೋಜನೆಯಾಗಿತ್ತು. 2024ರ ಅಕ್ಟೋಬರ್‌ನಲ್ಲಿ ವೀರ ಮರಣವನ್ನುಪ್ಪುವ ಮುನ್ನ ಅತ್ಯಂತ ಪ್ರಮುಖವಾದ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯ ಭಾಗವಾಗಿತ್ತು. ಈ ಶ್ವಾನವನ್ನು ಮೀರತ್‌ನಲ್ಲಿರುವ ಭಾರತೀಯ ಸೇನೆಯ ರೀಮೌಂಟ್ ವೆಟರ್ನರಿ ಕಾರ್ಪ್ಸ್ ಸೆಂಟರ್‌ನಲ್ಲಿ ತರಬೇತಿ ನೀಡಲಾಗಿತ್ತು.
ಮೆನ್ಷನ್-ಇನ್-ಡೆಸ್ಪ್ಯಾಚ್ಸ್ ಎಂಬುದು ಯುದ್ಧಕಾಲದ ಕಾರ್ಯಾಚರಣೆ/ದಂಗೆ ನಿಗ್ರಹ ಕಾರ್ಯಾಚರಣೆಗಳು/ಮಿಲಿಟರಿ ಕಾರ್ಯಾಚರಣೆಗಳು ಮತ್ತು ಕರ್ತವ್ಯದ ಕರೆಯನ್ನು ಮೀರಿ ಸೇವೆ ಸಲ್ಲಿಸಿದ್ದಕ್ಕಾಗಿ ನೀಡಲಾಗುವ ಶೌರ್ಯ ಪ್ರಶಸ್ತಿಯಾಗಿದೆ.
Padma Awards 2025: ರಾಜ್ಯದ ವೆಂಕಪ್ಪ ಅಂಬಾಜಿ, ಭೀಮವ್ವ, ವಿಜಯಲಕ್ಷ್ಮಿ ದೇಶಮಾನೆಗೆ ಪದ್ಮಶ್ರೀ ಗೌರವ
ಇಲ್ಲಿಯವರೆಗೆ, ದೇಶದಲ್ಲಿನ ಕಾರ್ಯಾಚರಣೆಗಳಲ್ಲಿ ಶೌರ್ಯಶಾಲಿ ಕಾರ್ಯಗಳಿಗಾಗಿ ಮಿಲಿಟರಿ ಶ್ವಾನಗಳಿಗೆ ನೀಡಲಾಗುವ ಅತ್ಯುನ್ನತ ಶೌರ್ಯ ಪ್ರಶಸ್ತಿ ಇದಾಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ, ಮಿಲಿಟರಿ ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟ ಭಾರತೀಯ ಸೇನೆಯ ಮತ್ತೊಂದು ಬೆಲ್ಜಿಯಂ ಮಾಲಿನೋಯಿಸ್ 'ಆಕ್ಸಲ್' ಗೆ ಮೆನ್ಷನ್-ಇನ್-ಡೆಸ್ಪ್ಯಾಚ್‌ಗಳು (ಮರಣೋತ್ತರ) ನೀಡಲಾಯಿತು. ಅದಕ್ಕೂ ಮೊದಲು, ಸೇನೆಯ ಮಹಿಳಾ ಲ್ಯಾಬ್ರಡಾರ್ ಮಾನಸಿಗೆ 2016 ರಲ್ಲಿ ಉತ್ತರ ಕಾಶ್ಮೀರದಲ್ಲಿ ನಡೆದ ಮಿಲಿಟರಿ ಕಾರ್ಯಾಚರಣೆಯಲ್ಲಿನ ಶೌರ್ಯಶಾಲಿ ಪಾತ್ರಕ್ಕಾಗಿ ಮೆನ್ಷನ್-ಇನ್-ಡೆಸ್ಪ್ಯಾಚ್‌ಗಳು (ಮರಣೋತ್ತರ) ನೀಡಲಾಗಿತ್ತು.
Padma Awards 2024: ವೆಂಕಯ್ಯನಾಯ್ಡು, ನಟ ಮಿಥುನ್ ಚಕ್ರವರ್ತಿ, ಗಾಯಕಿ ಉಷಾ ಸೇರಿ ಹಲವರಿಗೆ ಪದ್ಮ ಪ್ರಶಸ್ತಿ ಗೌರವ