ಮಾರ್ನಿಂಗ್ ಕನ್ಸಲ್ಟೆನ್ಸಿ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೆ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಶೇಕಡಾ 77 ರಷ್ಟು ಅಪ್ರೋವಲ್ ರೇಟಿಂಗ್ ಮೂಲಕ ಮೋದಿ ಜನ ಹಾಗೂ ಜಗಮೆಚ್ಚಿದ ನಾಯಕರಾಗಿದ್ದಾರೆ. ಮಾರ್ನಿಂಗ್ ಕನ್ಸಲ್ಟೆನ್ಸಿ ನಡೆಸಿದ ಸರ್ವೆ ವರದಿ ಇಲ್ಲಿದೆ.
ನವದೆಹಲಿ(ಜೂ.11): ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಭಾರತದ ಚರಿಷ್ಮಾ ಬದಲಾಗಿದೆ. ವಿಶ್ವದ ಇತರ ದೇಶಗಳಲ್ಲಿ ಭಾರತಕ್ಕಿರುವ ಗೌರವ ಹೆಚ್ಚಾಗಿದೆ. ಜಾಗತಿಕ ಮಟ್ಟದಲ್ಲಿ ಭಾರತ ಪ್ರಬಲ ಹಾಗೂ ಪ್ರಮುಖ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಹೀಗಾಗಿ ವಿಶ್ವನಾಯಕರ ಸಾಲಿನಲ್ಲಿ ಮೋದಿಗೆ ಮೊದಲ ಸ್ಥಾನ. ಪ್ರಧಾನಿ ಮೋದಿ ಹಿರಿಮೆಗೆ ಮತ್ತೊಂದು ಗರಿ ಸೇರಿಕೊಂಡಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಮತ್ತೆ ವಿಶ್ವದ ಅತ್ಯಂತ ಜನಪ್ರಿಯ ನಾಯಕ. ಅಮೆರಿಕ ಖ್ಯಾತ ಸರ್ವೇ ಕಂಪನಿ ಮಾರ್ನಿಂಗ್ ಕನ್ಸಲ್ಟೆನ್ಸಿ ನಡೆಸಿದ ಸಮೀಕ್ಷೆಯಲ್ಲಿ ಶೇಕಡಾ 77 ರಷ್ಟು ಅಪ್ರೋವಲ್ ರೇಟಿಂಗ್ ಪಡೆಯುವ ಮೂಲಕ ಪ್ರಧಾನಿ ಮೋದಿ ನಂಬರ್ 1 ನಾಯಕರಾಗಿ ಹೊರಹೊಮ್ಮಿದ್ದಾರೆ.
ಗ್ಲೋಬಲ್ ಲೀಡರ್ ಅಪ್ರೋವಲ್ ರೇಟಿಂಗ್ ಸಮೀಕ್ಷೆ
ನರೇಂದ್ರ ಮೋದಿ: 77%
ಲೋಪೆಜ್ ಒಬ್ರಡಾರ್: 61%
ಅಲ್ಬಾನೀಸ್: 52%
ಲುಲು ಡಾ ಸಿಲ್ವಾ: 50%
ಮೆಲೋನಿ: 49%
ಜಸ್ಟಿನ್ ಟ್ರುಡೆವು: 41%
ಜೋ ಬೈಡೆನ್: 40%
ಸ್ಯಾನ್‌ಶೆಜ್: 39%
ರಿಷಿ ಸುನಕ್: 33%
ಸ್ಕೂಲ್ಜ್: 30%
ಮ್ಯಾಕ್ರೋನ್: 24%
ಪ್ರಧಾನಿ ಮೋದಿ ಭೇಟಿಗೂ ಮುನ್ನ 'ನ್ಯಾಟೋ' ಆಫರ್ ನೀಡಿದ ಅಮೆರಿಕ, ತಿರಸ್ಕರಿಸಿದ ಭಾರತ!
ಗ್ಲೋಬಲ್ ಅಪ್ರೋವಲ್ ರೇಟಿಂಗ್‌ನಲ್ಲಿ ಮೋದಿ ಮೊದಲ ಸ್ಥಾನದಲ್ಲಿದ್ದರೆ, ಮೆಕ್ಸಿಕೋ ಅಧ್ಯಕ್ಷ ಲೋಪೆಜ್ ಒಬ್ರಡಾರ್ ಎರಡನೇ ಸ್ಥಾನ ಅಲಂಕರಿಸಿದ್ದಾರೆ.ಲೊಪೆಜ್ ಶೇಕಡಾ 61 ರಷ್ಟು ಅಪ್ರೋವಲ್ ರೇಟಿಂಗ್ ಪಡೆದಿದ್ದಾರೆ. ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟೋನಿ ಆಲ್ಬನೀಸ್ ಶೇಕಡಾ 52 ರಷ್ಟು ಅಪ್ರೋವಲ್ ರೇಟಿಂಗ್ ಪಡೆಯುವ ಮೂಲಕ ಮೂರನೇ ಸ್ಥಾನ ಅಲಂಕರಿಸಿದ್ದಾರೆ. ಇನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಶೇಕಡಾ 40 ರಷ್ಟು ಅಪ್ರೋವಲ್ ರೇಟಿಂಗ್ ಪಡೆಯುವ ಮೂಲಕ 7ನೇ ಸ್ಥಾನದಲ್ಲಿದ್ದರೆ, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಶೇಕಡಾ 33 ರಷ್ಟು ಅಪ್ರೋವಲ್ ರೇಟಿಂಗ್ ಪಡೆದು 9ನೇ ಸ್ಥಾನ ಅಲಂಕರಿಸಿದ್ದರೆ.
ಪ್ರಮುಖ 22 ರಾಷ್ಟ್ರಗಳ ನಾಯಕರ ಕುರಿತು ಸರ್ವೆ ಮಾಡಲಾಗಿದೆ. ಮೇ 30 ರಿಂದ ಜೂನ್ 6ರ, 2023ರ ವರೆಗೆ ಈ ಬಾರಿ ಸಮೀಕ್ಷ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಆಸ್ಟ್ರೇಲಿಯಾ, ಆಸ್ಟ್ರಿಯಾ, ಬೆಲ್ಜಿಯಂ, ಬ್ರೆಜಿಲ್, ಕೆನಡಾ, ಜೆಕ್ ರಿಪಬ್ಲಿಕ್, ಫ್ರಾನ್ಸ್, ಜರ್ಮನಿ, ಭಾರತ, ಐರ್ಲೆಂಡ್, ಇಟಲಿ, ಜಪಾನ್, ಮೆಕ್ಸಿಕೋ, ನೆದರ್ಲ್ಯಾಂಡ್ಸ್, ನಾರ್ವೆ, ಪೋಲೆಂಡ್, ದಕ್ಷಿಣ ಕೊರಿಯಾ, ಸ್ಪೇನ್, ಸ್ವೀಡನ್, ಸ್ವಿಟ್ಜರ್ಲೆಂಡ್, ಯುಕೆ ಮತ್ತು ಅಮೆರಿಕದಲ್ಲಿ ಸರ್ವೆ ಮಾಲಾಗಿದೆ.
ವಿಶ್ವ ಡಿಜಿಟಲ್ ಪೇಮೆಂಟ್‌ನಲ್ಲಿ ಭಾರತಕ್ಕೆ ಮೊದಲ ಸ್ಥಾನ, 2022ರಲ್ಲಿ 89.5 ಮಿಲಿಯನ್ ಟ್ರಾನ್ಸಾಕ್ಷನ್!
ಮಾರ್ನಿಂಗ್ ಕನ್ಸಲ್ಟೆನ್ಸಿ 2019ರಿಂದ ಗ್ಲೋಬಲ್ ಲೀಟರ್ ಅಪ್ರೋವಲ್ ರೇಟಿಂಗ್ ಸರ್ವೆ ನಡೆಸುತ್ತಿದೆ. 2019 ರಿಂದ ಪ್ರಧಾನಿ ಮೋದಿ ನಂಬರ್ 1 ಸ್ಥಾನದಲ್ಲಿ ಮುಂದುವರಿದಿದ್ದಾರೆ. ಇಷ್ಟೇ ಅಲ್ಲ ಅಪ್ರೋವಲ್ ರೇಟಿಂಗ್ ಪ್ರತಿ ವರ್ಷ ಹೆಚ್ಚಾಗುತ್ತಲೇ ಹೋಗಿದೆ. ಈ ಮೂಲಕ ಮೋದಿ ಜನಪ್ರಿಯತೆ ವಿಶ್ವದಲ್ಲಿ ಹೆಚ್ಚಾಗುತ್ತಲೇ ಹೋಗಿದೆ. 2022ರಲ್ಲಿ ಮೋದಿ ಅಪ್ರೋವಲ್ ರೇಟಿಂಗ್ ಶೇಕಡಾ 75.
