ನವದೆಹಲಿ(ಜು.25): ಕೊರೋನಾ ವೈರಸ್ ಕುರಿತು ಭಾರತ ತೆಗೆದುಕೊಳ್ಳಬೇಕಾದ ಮುನ್ನಚ್ಚೆರಿಕೆ ಹಾಗೂ ಚೀನಾ ಆಕ್ರಮಣ ತಡೆಯುವಲ್ಲಿ ಕೇಂದ್ರ ಸರ್ಕಾರದ ವೈಫಲ್ಯ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪ್ರತಿ ಬಾರಿ ಕೇಂದ್ರ ಸರ್ಕಾರ ತನ್ನ ಎಚ್ಚರಿಕೆಯನ್ನು ಕಡೆಗಣಿಸುತ್ತಿದೆ. ಈಗ ಪರಿಸ್ಥಿತಿ ಏನಾಗಿದೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಯುವ ಪಡೆ ಕೈಕೊಟ್ಟರೆ ನಷ್ಟವಿಲ್ಲ: ಸಿಂಧಿಯಾ, ಪೈಲಟ್‌ಗೆ ರಾಹುಲ್‌ ಟಾಂಗ್‌!.

ಈ ಕುರಿತು ಟ್ವೀಟ್ ಮಾಡಿರುವ ಗಾಂಧಿ, ಕೊರೋನಾ ವೈರಸ್ ಹಾಗೂ ಚೀನಾ ಆಕ್ರಮಣದ ಕುರಿತು ನಾನು ನೀಡಿದ ಎಚ್ಚರಿಕೆಯನ್ನು ಕೇಂದ್ರ ಸರ್ಕಾರ ಕಡೆಗಣಿಸಿದೆ ಎಂದು ಟ್ವೀಟ್ ಮಾಡಿದ್ದಾರೆ. 

 

ಕೊರೋನಾ ವೈರಸ್ ಭಾರತಕ್ಕೆ ವಕ್ಕರಿಸಿದ ಸಂದರ್ಭದಲ್ಲಿ ವೈರಸ್ ಸೃಷ್ಟಿಸಲಿರುವ ಆತಂಕ ಹಾಗೂ ಭಾರತದ ಆರ್ಥಿಕತೆ ಕುರಿತು ಎಚ್ಚರಿಸಲಾಗಿತ್ತು. ಕೊರೋನಾ ವೈರಸ್ ತಡೆಯಲು ತ್ವರಿತಗತಿಯಲ್ಲಿ ಟೆಸ್ಟಿಂಗ್ ಅಗತ್ಯ ಎಂದು ಎಚ್ಚರಿಸಿದ್ದೆ. ಆದರೆ ಕೇಂದ್ರ ಸರ್ಕಾರ ತನ್ನ ಎಚ್ಚರಿಕೆಯನ್ನು ಗಣನೆಗೆ ತೆಗೆದುಕೊಂಡಿಲ್ಲ. ಸದ್ಯ ಕೊರೋನಾ ಪರಿಸ್ಥಿತಿ ಭಾರತದಲ್ಲಿ ಯಾವ ಮಟ್ಟಕ್ಕೆ ತಲುಪಿದೆ ಎಂದು ಪ್ರಶ್ನಿಸಿದ್ದಾರೆ.

ಚೀನಾ ಆಕ್ರಮಣದ ಕುರಿತು ಆರಂಭದಲ್ಲೇ ಎಚ್ಚರಿಸಿದ್ದರೂ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ಕೇಂದ್ರ ಸರ್ಕಾರದ ನಿರ್ಲಕ್ಷ್ಯ್ಕೆ ನಮ್ಮ 20 ಯೋಧರು ಹುತಾತ್ಮಾರಾಗಿದ್ದಾರೆ ಎಂದು ರಾಹುಲ್ ಗಾಂಧಿ ಗುಡುಗಿದ್ದಾರೆ.