ನವದೆಹಲಿ(ಜು.19): ಪಕ್ಷದಲ್ಲಿರುವ ಯುವ ನಾಯಕರ ಪಡೆ ಪಕ್ಷ ತೊರೆಯುವುದರಿಂದ ಪಕ್ಷಕ್ಕೆ ಯಾವುದೇ ಹಾನಿಯಾಗಲ್ಲ. ಇಂಥ ಬೆಳವಣಿಗೆಗಳು ಹೊಸ ನಾಯಕರ ಉದಯಕ್ಕೆ ಪೂರಕವಾಗಲಿದೆ ಎಂದು ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

ಸಚಿನ್‌ ಪೈಲಟ್‌ ಬಣ ಶಾಸಕರು ಬೆಂಗಳೂರಿಗೆ ಶಿಫ್ಟ್‌?

ಈ ಮೂಲಕ ಈಗಾಗಲೇ ಪಕ್ಷದಿಂದ ಒಂದು ಕಾಲು ಆಚೆ ತೆಗೆದಿರಿಸಿದ ರಾಜಸ್ಥಾನ ಪದಚ್ಯುತ ಡಿಸಿಎಂ ಸಚಿನ್‌ ಪೈಲಟ್‌ ಹಾಗೂ ಮಧ್ಯಪ್ರದೇಶ ಕಾಂಗ್ರೆಸ್‌ ಸರ್ಕಾರ ಕೆಡವಿ ಬಿಜೆಪಿ ಗೂಡು ಸೇರಿಕೊಂಡ ಜ್ಯೋತಿರಾಧಿತ್ಯ ಸಿಂಧಿಯಾ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.

ಇತ್ತೀಚೆಗೆ ಕೆಲವರು ಪಕ್ಷ ತೊರೆಯುತ್ತಿದ್ದಾರೆ. ಇದರಿಂದ ವ್ಯಾಕುಲತೆ ಒಳಗಾಗಬೇಡಿ. ನಿಮ್ಮ ನಾಯಕತ್ವದ ಬೆಳವಣಿಗೆಗೆ ಇದು ಅನುವಾಗಲಿದೆ ಎಂದು ಕಾಂಗ್ರೆಸ್‌ ವಿದ್ಯಾರ್ಥಿ ಘಟಕಕ್ಕೆ ತಿಳಿಸಿದ್ದಾರೆ.