ಶೀಘ್ರದಲ್ಲೇ ಡಿಜಿಟಲ್ ಲ್ಯಾಬ್, ಸೆಮಿಕಂಡಕ್ಟರ್ ಕೇಂದ್ರ, ಮೋದಿ ಸರ್ಕಾರದ ವಿಷನ್ ಬಿಚ್ಚಿಟ್ಟ ರಾಜೀವ್ ಚಂದ್ರಶೇಖರ್!

ಡಿಜಿಟಲ್ ಇಂಡಿಯಾ ಫ್ಯೂಚರ್ ಲ್ಯಾಬ್, ಸೆಮಿಕಂಡಕ್ಟರ್ ಸಂಶೋಧನಾ ಕೇಂದ್ರ ಸೇರಿದಂತೆ ಎಲೆಕ್ಟ್ರಾನಿಕ್ ಉತ್ಪಾದನಾ ಪರಿಸರ ವ್ಯವಸ್ಥೆಯಲ್ಲಿ ಮೋದಿ ಸರ್ಕಾರದ ವಿಷನ್ ಕುರಿತು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

PM Modi govt launch Digital India future LABS Semiconductor Centre soon says Union Minister Rajeev Chandrasekhar ckm

ನವದೆಹಲಿ(ಜ.25) ಡಿಜಿಟಲ್ ಇಂಡಿಯಾ ಮೂಲಕ ಕ್ರಾಂತಿ ಮಾಡಿರುವ ಭಾರತ ಇದೀಗ ಹೊಸ ಅಧ್ಯಾಯ ಬರೆಯಲು ಸಜ್ಜಾಗಿದೆ. ಸ್ಟಾರ್ಟ್‌ಅಪ್, ಉದ್ಯಮಗಳ ಪಾಲುದಾರಿಕೆಯಲ್ಲಿ ಭಾರತ ಡಿಜಿಟಲ್ ಇಂಡಿಯಾ ಫ್ಯೂಚರ್ ಲ್ಯಾಬ್, ಭಾರತೀಯ ಸೆಮಿಕಂಡಕ್ಟರ್ ಸಂಶೋಧನಾ ಕೇಂದ್ರಗಳನ್ನು ಭಾರತ ಶೀಘ್ರದಲ್ಲೇ ಆರಂಭಿಸಲಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. IESA Vision Summit 2024( ಐಇಎಸ್‌ಎ ವಿಷನ್ ಶೃಂಗಸಭೆ)ರಲ್ಲಿ ಮಾತನಾಡಿದ ರಾಜೀವ್ ಚಂದ್ರಶೇಖರ್, ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೃಷ್ಠಿಕೋನದ ಕುರಿತು ಬೆಳಕು ಚೆಲ್ಲಿದರು.

ಸದ್ಯ ಸೆಮಿಕಂಡಕ್ಟರ್ ಎಲ್ಲಾ ಕ್ಷೇತ್ರಗಳನ್ನು ವ್ಯಾಪಿಸಿದೆ. ಇದರ ಮಹತ್ವವನ್ನು ಜಗತ್ತೆ ಮನಗಂಡಿದೆ. ಭಾರತ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಸೆಮಿಕಂಡಕ್ಟರ್ ಸಂಶೋಧನಾ ಕೇಂದ್ರ ಆರಂಭಿಸುತ್ತಿದೆ. ಈ ಕೇಂದ್ರ ಸೆಮಿಕಂಡಕ್ಟರ್ ಆವಿಷ್ಕಾರದ ಭಾಗವಾಗಿ ಕಾರ್ಯನಿರ್ವಹಿಸಲಿದೆ. ಸ್ಟಾರ್ಟ್‌ಅಪ್, ಉದ್ಯಮಗಳ ಪಾಲುದಾರಿಕೆ ಮೂಲಕ ಕೇಂದ್ರ ಸರ್ಕಾರ ಫ್ಯೂಚರ್ ಲ್ಯಾಬ್ ಆರಂಭಿಸುತ್ತಿದೆ. ಭವಿಷ್ಯದ ಹೊಸ ವ್ಯವಸ್ಥೆಗಳಿಗೆ ಹೊಂದಿಕೊಳ್ಳುವ ಹಾಗೂ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಹೊಸ ಕೇಂದ್ರಗಳು ಕಾರ್ಯನಿರ್ವಹಿಸಲಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಮಸ್ಕ್,ಆಲ್ಟ್‌ಮ್ಯಾನ್ ಜೊತಗೆ ಸ್ಪರ್ಧೆಗಲ್ಲ, ದಿನನಿತ್ಯ ಜೀವನಕ್ಕೆ AI ಬಳಕೆ, ರಾಜೀವ್ ಚಂದ್ರಶೇಖರ್!

ಭಾರತದ ಎಲೆಕ್ಟ್ರಾನಿಕ್ಸ್ ಹಾಗೂ ಐಟಿ ವಲಯವನ್ನು ಉತ್ತೇಜಿಸುವ ಗುರಿ ಇಟ್ಟುಕೊಂಡು ಭಾರತದ ಡಿಜಿಟಲ್ ಇಂಡಿಯಾ ಫ್ಯೂಚರ್ ಲ್ಯಾಬ್ ಸ್ಕೀಮ್ ಆರಂಭಿಸಲಾಗಿದೆ. ಸಂಶೋಧನೆ, ಹೊಸತನ, ಐಪಿ ಸೇರಿದಂತೆ ಹಲವು ನಾವೀನ್ಯತೆಯ ಪರಿಸರ ವ್ಯವಸ್ಥೆ ಬಲಪಡಿಸುವ ಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಈ ಯೋಜನೆಗಳು ಭಾರತದ ಸುಸ್ಥಿರ ಬೆಳವಣಿಗೆ, ತಾಂತ್ರಿಕ ಪ್ರಗತಿಯನ್ನು ಖಾತ್ರಿಪಡಿಸಲಿದೆ. ಭವಿಷ್ಯದ ಲ್ಯಾಬ್ಸ್, ಜೊತೆಗೆ C-DAC ನೋಡಲ್ ಏಜೆನ್ಸಿಯಾಗಿ, ಆಟೋಮೋಟಿವ್, ಮೊಬಿಲಿಟಿ, ಕಂಪ್ಯೂಟ್ ಸೇರಿದಂತೆ ಹಲವ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಲಿದೆ.  ಸಂವಹನ, ಸ್ಟ್ರಾಟೆಜಿಕ್ ಎಲೆಕ್ಟ್ರಾನಿಕ್ಸ್ ಮತ್ತು ಕೈಗಾರಿಕಾ IoT ನಡುವಿನ ಸಹಯೋಗವನ್ನು ಸುಲಭಗೊಳಿಸುತ್ತದೆ. 

ಡಿಜಿಟಲ್ ಫ್ಯೂಚರ್ ಲ್ಯಾಬ್ ಹಾಗೂ ಸೆಮಿಕಂಡಕ್ಟರ್ ಸಂಶೋಧನಾ ಕೇಂದ್ರಗಳ ಸ್ಥಾಪನೆ ಮೂಲಕ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ನರೇಂದ್ರ ಮೋದಿ ಸರ್ಕಾರದ ದೂರದಷ್ಠಿ ಕುರಿತು ಮಾಹಿತಿ ಬಿಚ್ಚಿಟ್ಟ ರಾಜೀವ್ ಚಂದ್ರಶೇಖರ್, ಭಾರತದ ಪ್ರಗತಿ ವೇಗ ಕುರಿತು ಚರ್ಚಿಸಿದ್ದಾರೆ.  ಸ್ಟಾರ್ಟ್‌ಅಪ್‌ಗಳು ಮತ್ತು ದೊಡ್ಡ ಉದ್ಯಮಗಳನ್ನು ವೇಗವರ್ಧಿಸುವ ಅಭಿವೃದ್ಧಿ ಸ್ಛಾಪಿಸುವುದು ಪ್ರಮುಖ ಉದ್ದೇಶ ಎಂದಿದ್ದಾರೆ.

ಕೃತಕ ಬುದ್ಧಿಮತ್ತೆ ದುರ್ಬಳಕೆ ತಡೆಗೆ ಬದ್ಧ: ರಾಜೀವ್‌ ಚಂದ್ರಶೇಖರ್‌

ಭಾರತದ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಆಗಿರುವ ಮಹತ್ತರ ಬದಲಾವಣೆಯಿಂದ ದೇಶದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಸ್ಟಾರ್ಟ್‌ಅಪ್, ಯುನಿಕಾರ್ನ್‌ಗಳು ತಲೆ ಎತ್ತಿದೆ. ಇದರಿಂದ ವಿಫುಲ ಅವಕಾಶಗಳು ಸೃಷ್ಟಿಯಾಗಿದೆ. ಅತ್ಯಧಿಕ ಹೂಡಿಕೆಗಳು ನಡೆಯುತ್ತಿದೆ. ಉದ್ಯಮಗಳು, ಗ್ರಾಹಕರು ಡಿಜಿಟಲೀಕರಣದ ಮೇಲೆ ಅವಲಂಬಿತರಾಗಿದ್ದಾರೆ. ಇದಕ್ಕೆ ಪೂರಕ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿಕೊಡಲಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.  

Latest Videos
Follow Us:
Download App:
  • android
  • ios