ನವದೆಹಲಿ(ಆ.27):  ಲಡಾಖ್ ಪ್ರಾಂತ್ಯದಲ್ಲಿ ಚೀನಾ ಗಡಿ ಖ್ಯಾತೆ, ಕಾಶ್ಮೀರ ಭಾಗದಲ್ಲಿ ಪಾಕಿಸ್ತಾನದ ತಕರಾರರು ಹೆಚ್ಚಾಗುತ್ತಿದೆ. ಅಪ್ರಚೋದಿತ ದಾಳಿಗಳಿಗೆ ಭಾರತೀಯ ಸೇನೆ ತಕ್ಕ ತಿರುಗೇಟು ನೀಡುತ್ತಿದೆ. ಗಡಿಯಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣವಾಗಿರುವ ಕಾರಣ ಭಾರತೀಯ ಸೇನೆಗಳಿಗೆ ಸನ್ನದ್ಧವಾಗಿರುವಂತೆ ಸೂಚಿಸಲಾಗಿದೆ. ಇತ್ತ ಕೇಂದ್ರ ಸರ್ಕಾರ ಭಾರತೀಯ ಸೇನೆಗೆ ಅತ್ಯಾಧುನಿಕ ಯುದ್ಧ ಸಲಕರಣೆಗಳನ್ನು ಪೂರೈಸಲು ಮುಂದಾಗಿದೆ. ಫ್ರಾನ್ಸ್ ನಿರ್ಮಿತ ರಾಫೆಲ್ ಯುದ್ಧ ವಿಮಾನ  ಈಗಾಗಲೇ ಭಾರತದ ಕೈಸೇರಿದೆ. ಇದರ ಬೆನ್ನಲ್ಲೇ ಇಸ್ರೇಲ್ ನಿರ್ಮಿತ ಎರ್‌ಬೋನ್ ವಾರ್ನಿಂಗ್ ಆ್ಯಂಡ್ ಕಂಟ್ರೋಲ್ ಸಿಸ್ಟಮ್ ಫಾಲ್ಕನ್ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ.

ಮಾಸಾಂತ್ಯಕ್ಕೆ ಮೋದಿ ಸಮ್ಮುಖ ವಾಯುಪಡೆಗೆ ರಫೇಲ್‌ ಸೇರ್ಪಡೆ?

ಮುಂದಿನ ವಾರದಲ್ಲಿ ಬರೋಬ್ಬರಿ 2 ಬಿಲಿಯನ್ ಅಮೆರಿಕನ್ ಡಾಲರ್(1,47,84,48,00,000 ರೂಪಾಯಿ) ಮೌಲ್ಯದ ಇಸ್ರೇಲ್ ಹಾಗೂ ಭಾರತ ನಡುವಿನ ಒಪ್ಪಂದಕ್ಕೆ ಅಂತಿಮ ಮುದ್ರ ಬೀಳಲಿದೆ. ಈ ಮೂಲಕ ಭಾರತ ವಾಯುಸೇನೆ ಅತ್ಯಾಧುನಿಕ ಸಲಕರಣೆಗಳನ್ನು ಹೊಂದಿಗೆ ಪಡೆಯಾಗಲಿದೆ.

ಹಿಮಾಚಲದ ಪರ್ವತಗಳಲ್ಲಿ ರಫೇಲ್‌ ರಾತ್ರಿ ಸಮರಾಭ್ಯಾಸ!.

ಭಾರತದ ಬಳಿ 360 ಡಿಗ್ರಿ ರೊಡೋಮ್ ಮೌಂಟೆಡ್ ಏರ್‌ಕ್ರಾಫ್ಟ್  ಫಾಲ್ಕನ್ AWACS ಮೂರಿವೆ. ಇನ್ನು ಎರಡು DRDO ನಿರ್ಮಿತ 240 ಡಿಗ್ರಿ ರೊಡೋಮ್ ಮೌಂಟೆಡ್ ಏರ್‌ಕ್ರಾಫ್ಟ್  AWACS ಗಳಿವೆ. ಭಾರತದ ಬಳಿ ಒಟ್ಟು 5 AWACS ಗಳಿವೆ. ಆದರೆ ಚೀನಾ ಬಳಿ 28 ಹಾಗೂ ಪಾಕಿಸ್ತಾನದ ಬಳಿ 7 ಫಾಲ್ಕನ್ AWACSಗಳಿವೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಈ ಮೊದಲು ಫಾಲ್ಕನ್ AWACS ಖರೀದಿಸುವ ಪ್ರಸ್ತಾವನೆಯನ್ನು ಕ್ಯಾಬಿನೆಟ್ ಕಮಿಟಿನ್ ಆನ್ ಸೆಕ್ಯೂರಿಟಿ(CCS) ಮುಂದಿಟ್ಟಿದ್ದದರು. ಆದರೆ ಕೆಲ ಹೆಚ್ಚುವರಿ ಮಾಹಿತಿ ನೀಡುವತೆ ಕೋರಿ ಪ್ರಸ್ತಾವನೆಯನ್ನು ಹಿಂದಕ್ಕೆ ಕಳುಹಿಸಲಾಗಿತ್ತು. ಇದೀಗ 2ನೇ ಬಾರಿ ಇದೇ ಪ್ರಸ್ತಾವನೇ ಮುಂದಿಟ್ಟ ತಕ್ಷಣವೇ ಅನುಮೋದನೆ ಸಿಕ್ಕಿದೆ.

ಭಾರತ ಹಾಗೂ ಚೀನಾ ಗಡಿ ಸಮಸ್ಯೆಯಿಂದ ಉದ್ವಿಘ್ನ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಭಾರತೀಯ ಸೇನೆಯನ್ನು ಬಲಪಡಿಸಲು ಅತ್ಯಾಧುನಿಕ ಸಲಕರಣೆ ಖರೀದಿಗೆ ಕ್ಯಾಬಿನೆಟ್ ಕಮಿಟಿ ಆನ್ ಸೆಕ್ಯೂರಿಟಿ ಹೆಚ್ಚಿನ ಮುತುವರ್ಜಿ ವಹಿಸಿದೆ. 2 ರಿಂದ 3 ವರ್ಷದಲ್ಲಿ ಇಸ್ರೇಲ್ ನಿರ್ಮಿತ ಫಾಲ್ಕನ್ ಭಾರತದ ಕೈಸೇರಲಿದೆ.

ಇದನ್ನೂ ನೋಡಿ | ಮೋದಿ ಕೈಲಿರುವ ಪ್ರಬಲ ಅಸ್ತ್ರ ಇದು!

"