Asianet Suvarna News Asianet Suvarna News

ಮೋದಿಗೆ ದೇವರು ಒಳ್ಳೆ ಬುದ್ಧಿ ನೀಡಲಿ, ವಿವಾದಾತ್ಮಕ ಟ್ವೀಟ್ ಬಳಿಕ ದಿಗ್ವಿಜಯ್ ಸಿಂಗ್ ಉಪದೇಶ!

ಆರ್‌ಎಸ್‌ಎಸ್ ಮಾಜಿ ಮುಖ್ಯಸ್ಥ ಎಂಎಸ್ ಗೋಲ್ವಾಲ್ಕರ್ ಹೇಳಿದ್ದಾರೆ ಎನ್ನಲಾದ ನಕಲಿ ಪೋಸ್ಟ್ ಹಾಕಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಇದೀಗ ಪೇಚಿಗೆ ಸಿಲುಕಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ದೂರು ದಾಖಲಾಗಿದೆ. ಇದರ ಬೆನ್ನಲ್ಲೇ ಬಿದ್ದರೂ ಮೀಸ ಮಣ್ಣಾಗಲಿಲ್ಲ ಅನ್ನೋ ರೀತಿ ದಿಗ್ವಿಜಯ್ ಸಿಂಗ್ ಮೋದಿ, ಅಮಿತ್ ಶಾಗೆ ದೇವರು ಒಳ್ಳೆ ಬುದ್ದಿ ನೀಡಲಿ ಎಂದು ಉಪದೇಶ ಮಾಡಿದ್ದಾರೆ.

PM Modi God may give you good sense says Digvijaya Singh after FIR filed over controversial tweet against RSS Golwalkar ckm
Author
First Published Jul 9, 2023, 8:28 PM IST

ಭೋಪಾಲ್(ಜು.09) ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಾರೆ. ಮಾತನಾಡಿದರೂ ವಿವಾದ, ಟ್ವೀಟ್ ಮಾಡಿದರೂ ವಿವಾದ. ಇದೀಗ ಆರ್‌ಎಸ್‌ಎಸ್ ಮಾಜಿ ಮುಖ್ಯಸ್ಥ ಎಂಎಸ್ ಗೋಲ್ವಾಲ್ಕರ್ ಹೇಳಿದ್ದಾರೆ ಅನ್ನೋ ನಕಲಿ ಮಾತುಗಳ ಪೋಸ್ಟನ್ನು ದಿಗ್ವಿಜಯ್ ಸಿಂಗ್ ಹಾಕಿದ್ದಾರೆ. ಇದು  ಹಲವರ ಆಕ್ರೋಶಕ್ಕೆ ಕಾರಣಾಗಿದೆ. ಪರಿಣಾಮ ದಿಗ್ವಿಜಯ್ ಸಿಂಗ್ ವಿರುದ್ಧ ದೂರು ದಾಖಲಾಗಿದೆ.  ಈ ವಿವಾದ, ಟೀಕೆ, ಆಕ್ರೋಶ ಹೆಚ್ಚಾಗುತ್ತಿದ್ದಂತೆ ದಿಗ್ವಿಜಯ್ ಸಿಂಗ್ ಮತ್ತೆರೆಡು ಟ್ವೀಟ್ ಮಾಡಿ ಉಪದೇಶ ಮಾಡಿದ್ದಾರೆ. ಮೋದಿ ಹಾಗೂ ಅಮಿತ್ ಶಾಗೆ ದೇವರು ಒಳ್ಳೆಯ ಬುದ್ದಿ ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.  ಈ ಟ್ವೀಟ್ ಬೆನ್ನಲ್ಲೇ ದಿಗ್ಗಿ ವಿರುದ್ಧದ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ.

ದಲಿತರು, ಮುಸ್ಲಿಮರು, ಹಿಂದುಳಿದ ವರ್ಗಗಳಿಗೆ ಸಮಾನತೆ ನೀಡುವುದಾದರೆ ನಾನು ಬ್ರಿಟಿಷ್ ಆಡಳಿತದಲ್ಲೇ ಇರುತ್ತೇನೆ ಎಂದು ಆರ್‌ಎಸ್‌ಎಸ್ ಮಾಜಿ ಮುಖ್ಯಸ್ಥ ಎಂಎಸ್ ಗೋಲ್ವಾಲ್ಕರ್ ಗುರೂಜಿ ಹೇಳಿದ್ದಾರೆ ಎಂದು ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಈ ಪೋಸ್ಟ್ ಬೆನ್ನಲ್ಲೇ ಭಾರಿ ವಿವಾದ ಸೃಷ್ಟಿಯಾಗಿದೆ. ಗೋಲ್ವಾಲ್ಕರ್ ಈ ರೀತಿ ಮಾತುಗಳನ್ನು ಆಡಿಲ್ಲ. ದಿಗ್ವಿಜಯ್ ಸಿಂಗ್ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಎಂದು ಆರ್‌ಎಸ್‌ಎಸ್ ಪ್ರಮುಖರು ತಿರುಗೇಟು ನೀಡಿದ್ದರು. ಇದರ ಬೆನ್ನಲ್ಲೇ ಇಂದೋರ್ ಪೊಲೀಸರು ದಿಗ್ವಿಜಯ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. 

Sunil Kanugolu: ಮಧ್ಯಪ್ರದೇಶ ಟಾಸ್ಕ್‌ಗೆ ರೆಡಿಯಾದ ಕಾಂಗ್ರೆಸ್‌ ಮಾಸ್ಟರ್‌ಮೈಂಡ್‌ ಸುನೀಲ್‌ ಕನುಗೋಲು!

ಇತ್ತ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್, ಸುಳ್ಳು ಸುದ್ದಿಯನ್ನು ಹಬ್ಬಿಸುವ ಮೂಲಕ ಗೋಲ್ವಾಲ್ಕರ್ ವಿರುದ್ದ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದರು. ದಿಗ್ವಿಜಯ್ ಸಿಂಗ್ ಟ್ವೀಟ್ ಆರ್‌ಎಸ್‌ಎಸ್ ನಾಯಕರನ್ನು ಕೆರಳಿಸಿತ್ತು. ಇದರ ವಿರುದ್ಧ ಸತತ ಟೀಕೆ ಕೇಳಿಬಂದಿತ್ತು. ವಿವಾದ ಹೆಚ್ಚಾಗುತ್ತಿದ್ದಂತೆ ದಿಗ್ವಿಜಯ್ ಸಿಂಗ್ ಮತ್ತೆರೆಡು ಟ್ವೀಟ್ ಮಾಡಿ ಸಮರ್ಥನೆ ಜೊತೆಗೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಇದು ಮತ್ತೊಂದು ವಿವಾದಕ್ಕೆ ಕಾರಣಾಗಿದೆ.

 

 

ಮೋದಿ ಹಾಗೂ ಅಮಿತ್ ಶಾ ಜಿ, ನೀವು ಸೇರಿಸಿಕೊಂಡಿರುವ, ನಿಮ್ಮ ಪಕ್ಕದಲ್ಲಿರುವ ಗುಂಪುಗಳು ಮೊದಲು ನಿಮ್ಮ ವಿರುದ್ಧ ಮಾತನಾಡುತ್ತಿದ್ದರು. ಈಗ ನಿಮ್ಮನ್ನು ಹೊಗಳುತ್ತಿದೆ. ನಿಮ್ಮನ್ನು ಹೊಗಳುತ್ತಿರುವ ಗುಂಪು ನೀವು ಅಧಿಕಾರಿಗಳ ಕಳೆದುಕೊಂಡ ಬೆನ್ನಲ್ಲೇ ಮೊದಲು ನಿಮ್ಮನ್ನು ಬಿಟ್ಟು ಹೋಗುತ್ತಾರೆ. ಕಷ್ಟಕಾಲದಲ್ಲಿ ನಿಮ್ಮ ನೆರವಿಗೆ ನಿಂತವರು ಇದೀಗ ಮನೆಯಲ್ಲಿದ್ದಾರೆ. ನಿವಿಬ್ಬರು ಅತೀ ದೊಡ್ಡ ತಪ್ಪು ಮಾಡುತ್ತಿದ್ದೀರಿ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ದಿಗ್ವಿಜಯ್‌ ಸಿಂಗ್‌ ಹೇಳಿಕೆ ಒಪ್ಪಲ್ಲ ಎಂದ ರಾಹುಲ್‌ ಗಾಂಧಿ, ಸೇನೆಯ ಕಾರ್ಯಾಚರಣೆಗಳಿಗೆ ಸಾಕ್ಷಿ ಬೇಕಿಲ್ಲ ಎಂದ ರಾಗಾ!

ಈ ಟ್ವೀಟ್ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿದ ದಿಗ್ವಿಜಯ್ ಸಿಂಗ್, ನಾನು ನಿಮ್ಮನ್ನು ಟೀಕೆ ಮಾಡುತ್ತೇನೆ. ಮುಂದೆಯೂ ಮಾಡುತ್ತೇನೆ. ನಾನು ಬಲವಾಗಿ ವಿರೋಧಿಸುವ ನಿಮ್ಮ ಸಿದ್ಧಾಂತದೊಂದಿಗೆ ನೀವು ರಾಜೀಮಾಡಿಕೊಂಡಿಲ್ಲ. ಇದರ ಹೊರತಾಗಿ ನಾನು ನಿಮ್ಮ ಅಭಿಮಾನಿ, ದೇವರು ನಿಮಗೆ ಒಳ್ಳೆ ಬುದ್ದಿ ನೀಡಲಿ ಎಂದು ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ.   ದಿಗ್ವಿಜಯ್ ಸಿಂಗ್ ಟ್ವೀಟ್ ಸರಮಾಲೆ ಇದೀಗ ಆರ್‌ಎಸ್‌ಎಸ್ ಹಾಗೂ ಬಿಜೆಪಿಯನ್ನು ಕೆರಳಿಸಿದೆ. 

Follow Us:
Download App:
  • android
  • ios