EXCLUSIVE | ಕಾಂಗ್ರೆಸ್‌ ಗ್ಯಾರಂಟಿಗಳ ಬಗ್ಗೆ ಏನಂದ್ರು ಪ್ರಧಾನಿ ನರೇಂದ್ರ ಮೋದಿ

ರಾಜ್ಯದ ಕಾಂಗ್ರೆಸ್‌ ಸರ್ಕಾರ ನೀಡಿರುವ ಐದು ಗ್ಯಾರಂಟಿ ಯೋಜನೆಗಳು ಹಾಗೂ ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಹೇಗೆ ಭಿನ್ನ ಎನ್ನುವುದನ್ನೂ ಪ್ರಧಾನಿ ಮೋದಿ ಸಂದಶರ್ನದಲ್ಲಿ ಮಾತನಾಡಿದ್ದಾರೆ.

pm-modi exclusive-interview-in-asianet-news-on-Congress-party-guaranteed-schemes-freebies-san

ಬೆಂಗಳೂರು (ಏ.20): 'ನಾವು ಎಂದು ಕೂಡ ನಮ್ಮ ದೇಶದ ನಾಗರೀಕರ ಸಾಮರ್ಥ್ಯದ ಬಗ್ಗೆ ಅನುಮಾನ ಪಡಬಾರದು..' ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಅಭಿಪ್ರಾಯವೇನು ಎನ್ನುವ ಪ್ರಶ್ನೆಗೆ ಉತ್ತರಿಸುವಾಗ ಪ್ರಧಾನಿ ನರೇಂದ್ರ ಮೋದಿ ಈ ಮಾತು ಹೇಳಿದರು. 'ಕರ್ನಾಟಕದ ಬಗ್ಗೆ ಒಂದು ಪ್ರಶ್ನೆ ಇದೆ. ಕಾಂಗ್ರೆಸ್ ಸರ್ಕಾರ ಏನು 5 ಗ್ಯಾರಂಟಿಗಳನ್ನ ನೀಡಿದೆ. 2000 ರೂಪಾಯಿ ತಿಂಗಳಿಗೆ ಕೊಡೋದು. ಈ ಉಚಿತ ಯೋಜನೆಗಳನ್ನ ನೀವು ಹೇಗೆ ನೋಡ್ತೀರಾ?' ಎಂದು ಏಷ್ಯಾನೆಟ್‌ ಸುವರ್ಣನ್ಯೂಸ್‌ ಪ್ರಧಾನ ಸಂಪಾದಕ ಅಜಿತ್‌ ಹನುಮಕ್ಕನವರ್‌ ಪ್ರಶ್ನೆ ಕೇಳಿದ್ದರು. ಲೋಕಸಭೆ ಚುನಾವಣೆಯಲ್ಲಿ ಮಹಿಳೆಯರಿಗೆ 1 ಲಕ್ಷ ಕೊಡ್ತೀವಿ ಅಂದಿದ್ದಾರೆ. 25 ಗ್ಯಾರಂಟಿ ಬಗ್ಗೆ ಮಾತಾಡ್ತಿದ್ದಾರೆ. ಇದನ್ನ ಹೇಗೆ ನೋಡ್ತೀರಾ? ಎಂದು ಪ್ರಶ್ನೆ ಮಾಡಿದ್ದರು.

ಇದಕ್ಕೆ ಉತ್ತರ ನೀಡಿದ ಪ್ರಧಾನಿ, ' ನಿರಾಶದಾಯಕತೆಯಲ್ಲಿ ಮುಳುಗಿರುವ ರಾಜಕೀಯ ಪಕ್ಷ ಎಲ್ಲರಿಗೂ ಪ್ರೀತಿಯನ್ನ ಹಂಚೋಕೆ ಕಷ್ಟ ಪಡ್ತಿದೆ. ನಾನು ನನ್ನ ಬಗ್ಗೆ ಮಾತಾಡ್ತೀನಿ. ತುಂಬಾ ದೀರ್ಘ ಸಮಯದವರೆಗೂ ಗುಜರಾತ್ ಮುಖ್ಯಮಂತ್ರಿಯಾಗಿ ಕೆಲಸ ಮಾಡೋ ಅವಕಾಶ ಸಿಗ್ತು. 10 ವರ್ಷದಿಂದ ಪ್ರಧಾನ ಮಂತ್ರಿಯಾಗಿ ಕೆಲಸ ಮಾಡೋಕೆ ಅವಕಾಶ ಸಿಗ್ತು. ನನ್ನ ಬಳಿ ಇಷ್ಟು ದೊಡ್ಡ ಅನುಭವವಿದೆ. ನಾವು ಎಂದು ಕೂಡ ನಮ್ಮ ದೇಶದ ನಾಗರೀಕರ ಸಾಮರ್ಥ್ಯದ ಬಗ್ಗೆ ಅನುಮಾನ ಪಡಬಾರದು. ನಾನು ಒಂದು ಬಾರಿ ಕೆಂಪುಕೋಟೆಯಿಂದ ಹೇಳಿದೆ. ಯಾರಿಗೆ ಸಾಮರ್ಥ್ಯವಿದೆ ಅವರು ಗ್ಯಾಸ್ ಸಬ್ಸಿಡಿ ತ್ಯಜಿಸಬೇಕು ಅಂತ. ದೇಶದಲ್ಲಿ ಒಂದು ಕೋಟಿಗಿಂತ ಹೆಚ್ಚಿನವರು ಗ್ಯಾಸ್ ಸಬ್ಸಿಡಿಯನ್ನ ತ್ಯಜಿಸಿದ್ರು' ಎಂದು ಹೇಳಿದರು.

ನಮ್ಮ ದೇಶದ ಜನರಿಗೆ ಪ್ರಧಾನಿ ಶಾಸ್ತ್ರಿ ಜೀ ಊಟ ತ್ಯಜಿಸಿ, ಊಟ ತ್ಯಜಿಸಿ ಎಂದಿದ್ರು. ನಮಗಿಂತ ಜನರು ದೇಶವನ್ನ ಹೆಚ್ಚಾಗಿ ಪ್ರೀತಿಸ್ತಾರೆ. ನಮಗಿಂತ ದೇಶಕ್ಕೆ ಹೆಚ್ಚು ಮಾಡಲು ತಯಾರಿದ್ದಾರೆ. ನಾವು ಅವರನ್ನ ಎಂದೂ ಕೆಳಮಟ್ಟದಲ್ಲಿ ನೋಡಬಾರದು. ನೋಡಿ ಕೋವಿಡ್ ಸಮಯದಲ್ಲಿ ಪಾರ್ಲಿಮೆಂಟ್ನಲ್ಲಿ ಸಂಸದರಿಗೆ ನಿಮ್ಮ ಸಂಬಳ ತ್ಯಜಿಸಿ ಎಂದು ಮನವಿ ಮಾಡಿದ್ದೆ. ನನ್ನ ಮಾತು ಕೇಳಿ ಸಂಸದರೆಲ್ಲಾ ಅವರ ಸಂಬಳವನ್ನ ಬಿಟ್ಟುಕೊಟ್ಟರು. ಇಂಥಾ ವಿಷಯಗಳಿಂದ ಪ್ರೇರಣೆ ಸಿಗುತ್ತದೆ. ಬಡವರನ್ನ ಕಷ್ಟದಲ್ಲಿ ನಾವು ಕೈ ಹಿಡಿಯಬೇಕು. ದೇಶದ ನಾಗರೀಕರ ಕೈಯನ್ನ ನಾವು ಹಿಡಿಯಬೇಕು. ನಮ್ಮ ಮಾಡೆಲ್ ಯಾವುದು ಅಂದ್ರೆ ದೇಶದ ಪ್ರತಿಯೊಬ್ಬ ನಾಗರೀಕರನ್ನ ಸಶಕ್ತನ್ನಾಗಿ ಮಾಡಬೇಕು. ಅದರಲ್ಲೂ ಬಡವರಿಗೆ ವಿಶೇಷ ರೂಪದಲ್ಲಿ ಸಶಕ್ತರನ್ನಾಗಿಸಬೇಕು. ಇದಕ್ಕೆ ವ್ಯವಸ್ಥಿತ ಯೋಜನೆಗಳನ್ನ ರೂಪಿಸಬೇಕು. ಜನರನ್ನ ಜೀವನ ಸುಧಾರಿಸುವುದು ಸರ್ಕಾರದ ಜವಾಬ್ದಾರಿ. ಇದೇನು ಉಪಕಾರವಲ್ಲ.. ನಮ್ಮ ಜವಾಬ್ದಾರಿ' ಎಂದು ಹೇಳಿದರು.

ಹಾಗಾದರೆ, ಅದನ್ನ ಸಾಧಿಸುವುದು ಹೇಗೆ? ನಾವು ಜನೌಷಧಿ ಕೇಂದ್ರಗಳನ್ನ ತೆರೆದೆವು. ಸುಮಾರು 11 ಸಾವಿರ ಜನೌಷಧಿ ಕೇಂದ್ರಗಳನ್ನ ತೆರೆದಿದ್ದೇವೆ. 25 ಸಾವಿರ ಕೇಂದ್ರಗಳನ್ನ ತೆರೆಯಬೇಕು ಅಂತಿದ್ದೇವೆ. ಜನೌಷಧಿ ಕೇಂದ್ರದಲ್ಲಿ ಸುಮಾರು 2 ಸಾವಿರ ಔಷಧಗಳು ಸಿಗುತ್ತವೆ. 300ಕ್ಕೂ ಅಧಿಕ ಔಷಧ ಉಪಕರಣಗಳು ನಿಮಗೆ ಅಲ್ಲಿ ಸಿಗುತ್ತವೆ. ಅಲ್ಲಿ ನಿಮಗೆ ಶೇಕಡ 80ರಷ್ಟು ಡಿಸ್ಕೌಂಟ್ಗೆ ಸಿಗುತ್ತೆ. ಉದಾಹರಣೆಗೆ ಒಂದು ಪರಿವಾರಕ್ಕೆ ತಿಂಗಳಿಗೆ 2-3 ಸಾವಿರದ ಔಷಧಗಳು ಅಗತ್ಯವಿದ್ರೆ, ಮಧ್ಯಮ ವರ್ಗಕ್ಕೆ ಅವರ ಬಜೆಟ್ಗೆ ಅದು ದೊಡ್ಡದಾಗುತ್ತೆ. ಹೀಗಾಗಿ 80 ಪರ್ಸೆಂಟ್ ಡಿಸ್ಕೌಂಟ್ ನೀಡಲಾಗ್ತಿದೆ. ಇದರಿಂದ ತಂದೆ-ತಾಯಿಯರ ಸೇವೆ ಮಾಡಬಹುದು ಅಲ್ವಾ..? 

ಕರೆಂಟ್ ಬಿಲ್ ಕಡಿಮೆ ಮಾಡೋಕೆ ನಾವು ಎಲ್ಇಡಿ ಬಲ್ಬ್ ಯೋಜನೆ ತಂದೆವು. ಕಾಂಗ್ರೆಸ್ ಸರ್ಕಾರವಿದ್ದಾಗ ಯಾವ ಎಲ್ಇಡಿ ಬಲ್ಬ್ 400 ರೂಪಾಯಿಗೆ ಸಿಗುತ್ತಿತೋ, ಇಂದು ಅದೇ ಬಲ್ಬ್ 40 ರೂಪಾಯಿಗೆ ಸಿಗುತ್ತೆ.. ಎಲ್ಇಡಿ ಬಲ್ಬ್ನಿಂದಾಗಿ ಕರೆಂಟ್ ಬಿಲ್ನಲ್ಲಿ ಶೇ.20 ರಿಂದ 30ರಷ್ಟು ಉಳಿತಾಯವಾಗುತ್ತೆ. ಈಗ ನಾವು ಪಿಎಂ ಸೂರ್ಯಘರ್ ಯೋಜನೆ ತಂದಿದ್ದೇವೆ. ನೀವು ಸೋಲಾರ್ ಪ್ಯಾನೆಲ್ ಹಾಕಿಸಿದ್ರೆ, ಕರೆಂಟ್ ಬಿಲ್ ಸಂಪೂರ್ಣ ಇಲ್ಲವಾಗುತ್ತೆ. ಅಷ್ಟೇ ಅಲ್ಲ ಆ ವಿದ್ಯುತ್ನ ನೀವು ಮನೆಗೆ ಮಾತ್ರವಲ್ಲ, ನಿಮ್ಮ ಎಲೆಕ್ಟ್ರಿಕ್ ವಾಹನವನ್ನು ಚಾರ್ಜಿಂಗ್ ಸಹ ಮಾಡಬಹುದು. ಇದರಿಂದ ನಿಮ್ಮ ಸಂಚಾರ ವೆಚ್ಚವಿಲ್ಲದೇ ನಡೆಯಲಿದೆ. 

ಅಧಿಕಾರ ಚಲಾಯಿಸಿಲ್ಲ, ಜನರ ಸೇವೆ ಮಾಡಿದ್ದೇವೆ, 2024ರ ಅಭೂತಪೂರ್ವ ಗೆಲುವಿನ ಕುರಿತು ಮೋದಿ ಮಾತು!

ಇದು ಜನರನ್ನ ಸಶಕ್ತರನ್ನಾಗಿ ಮಾಡುತ್ತೆ. ಜತೆಗೆ ಅವರ ಖರ್ಚನ್ನೂ ಕಡಿಮೆ ಮಾಡುತ್ತೆ. ಈ ಎಲ್ಲಾ ಯೋಜನೆಗಳ ಪರಿಣಾಮ ಏನಾಗುತ್ತೆ..? ಗರೀಬಿ ಹಠಾವೋ ಘೋಷಣೆಯನ್ನ 5 ದಶಕಗಳಿಂದ ಕೇಳಿದ್ದೇವೆ. ಈಗ ದೇಶ ಮೊದಲಬಾರಿಗೆ ಕೇಳುತ್ತಿದೆ. 25 ಕೋಟಿ ಜನ ಬಡತನ ರೇಖೆಯಿಂದ ಹೊರಗೆ ಬಂದಿದ್ದಾರೆ ಅಂತ. ಇದು ಜನರನ್ನ ಸಶಕ್ತರನ್ನಾಗಿ ಮಾಡೋದ್ರಿಂದ ಸಾಧ್ಯವಾಗುತ್ತೆ. ದೇಶದ ಸಮಾನ್ಯ ನಾಗರೀಕರಿಗೆ ಬಹಳ ಸಾಮಾರ್ಥ್ಯವಿದೆ. ನಾನು ದೇಶದ ಸಾಮಾನ್ಯ ನಾಗರೀಕರ ಹೆಚ್ಚು ಭರವಸೆ ಇಟ್ಟಿದ್ದೇನೆ ಎಂದು ಮೋದಿ ಹೇಳಿದ್ದಾರೆ.

EXCLUSIVE | ಭ್ರಷ್ಟಾಚಾರ ಕೊನೆ ಮಾಡ್ಬೇಕು ಅಂದ್ರೆ, ಇಡಿ-ಸಿಬಿಐನಂಥ ಸಂಸ್ಥೆಗೆ ಮುಕ್ತ ಸ್ವಾತಂತ್ರ್ಯ ನೀಡಬೇಕು: ಮೋದಿ

Latest Videos
Follow Us:
Download App:
  • android
  • ios