ನವ​ದೆ​ಹಲಿ​(ಮಾ.08): ಆರೋಗ್ಯ ಕ್ಷೇತ್ರ​ದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ವಿವಿಧ ಸುಧಾ​ರಣಾ ಕ್ರಮ​ಗ​ಳಿಂದಾಗಿ ಬಡ​ವರ್ಗ ಮತ್ತು ಔಷ​ಧ​ಗ​ಳ ಅನಿ​ವಾ​ರ್ಯತೆ ಇರು​ವ​ವರು ವಾರ್ಷಿಕ 50 ಸಾವಿರ ಕೋಟಿ ರು. ಉಳಿ​ತಾಯ ಮಾಡು​ವಂತಾ​ಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ​ಪಾ​ದಿ​ಸಿ​ದ್ದಾರೆ.

ಬಡ ಜನ​ರಿಗೆ ಕೈಗೆ​ಟು​ಕುವ ದರ​ದಲ್ಲಿ ಔಷ​ಧ​ಗಳು, ವೈದ್ಯ​ಕೀಯ ಚಿಕಿತ್ಸೆ ಹಾಗೂ ವೈದ್ಯ​ಕೀಯ ಸಾಧ​ನ​ಗಳ ದರ​ವನ್ನೂ ತಮ್ಮ ಸರ್ಕಾರ ಇಳಿಕೆ ಮಾಡಿದ್ದು, ಇದ​ರಿಂದ ಬಡ​ಜ​ನ​ರಿಗೆ ಅನು​ಕೂ​ಲ​ವಾ​ಗಿದೆ ಎಂದು ಹೇಳಿ​ದ್ದಾರೆ. ಶಿಲ್ಲಾಂಗ್‌​ನ​ಲ್ಲಿ​ರುವ ಈಶಾನ್ಯ ಭಾರ​ತದ ಇಂದಿರಾ ಗಾಂಧಿ ಪ್ರಾದೇ​ಶಿಕ ಆರೋಗ್ಯ ಮತ್ತು ವೈದ್ಯ​ಕೀಯ ಸಂಸ್ಥೆ​(​ಎನ್‌​ಇ​ಜಿ​ಆ​ರ್‌​ಐ​ಎ​ಚ್‌​ಎಂಎ​ಸ್‌)ನಲ್ಲಿ ದೇಶದ 7500ನೇ ಜನೌ​ಷಧಿ ಕೇಂದ್ರವನ್ನು ಮೋದಿ ಅವರು ​ವಿ​ಡಿಯೋ ಕಾನ್ಫ​ರೆನ್ಸ್‌ ಮೂಲಕ ಉದ್ಘಾ​ಟಿ​ಸಿ ಬಳಿಕ ಅವರು ಮಾತನಾಡಿದರು.

ಜನ​ರಿಗೆ ಕೈಗೆ​ಟು​ಕುವ ದರ​ದಲ್ಲಿ ಪೂರೈ​ಸ​ಲಾ​ಗು​ತ್ತಿ​ರುವ ಜನೌ​ಷಧಿ ಯೋಜ​ನೆಯು ದೇಶದ ಉದ್ದ​ಗ​ಲಕ್ಕೂ ಹಬ್ಬಿ​ಕೊ​ಳ್ಳು​ತ್ತಿದೆ. ಜನೌ​ಷಧಿ ಯೋಜನೆ ಬಗ್ಗೆ ಅರಿವು ಮೂಡಿ​ಸಲು ಮಾ.1ರಿಂದ ಮಾ.7ರವ​ರೆಗೆ ಜನೌ​ಷಧಿ ವಾರ​ವಾಗಿ ಆಚ​ರಿ​ಸ​ಲಾ​ಗಿದೆ. ಅಲ್ಲದೆ ಜನೌ​ಷಧಿ ಕೇಂದ್ರ​ಗ​ಳಿಂದ ಈಶಾನ್ಯ ಭಾರ​ತದ ಗುಡ್ಡ​ಗಾಡು ಮತ್ತು ಬುಡ​ಕಟ್ಟು ಜನಾಂಗ​ದ​ವ​ರಿಗೆ ಭಾರೀ ಅನು​ಕೂ​ಲ​ವಾ​ಗಿದೆ ಎಂದು ಹೇಳಿ​ದ್ದಾರೆ.