ತೆಲಂಗಾಣದ ಐತಿಹಾಸಿಕ ರಾಮಪ್ಪ ದೇವಸ್ಥಾನಕ್ಕೆ ವಿಶ್ವಪಾರಂಪರಿಕ ತಾಣ ಯುನೆಸ್ಕೂದಿಂದ ಸ್ಥಾನಮಾನ ಪಡೆದ ಸುಂದರ ಮಂದಿರ ರಷ್ಯಾ, ಚೀನಾ, ಸ್ಪೇನ್ , ಈಜಿಪ್ಟ್ ಸೇರಿದಂತೆ ಹಲವು ರಾಷ್ಟ್ರಗಳಿಂದ ಸಿಕ್ಕಿತು ಮನ್ನಣೆ

ಹೈದರಾಬಾದ್(ಜು.25): ವಿಶ್ವದಲ್ಲಿ ಭಾರತದ ಹೆಸರು ಮತ್ತೊಮ್ಮೆ ರಾರಾಜಿಸಿದೆ. ಈ ಬಾರಿ ಯುನೆಸ್ಕೋ(UNESCO )ವಿಶ್ವ ಪರಂಪರೆ ಸಮಿತಿಯ 44ನೇ ಅಧಿವೇಶನದಲ್ಲಿ ಭಾರತದ ಮತ್ತೊಂದು ದೇವಸ್ಥಾನಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ತೆಲಂಗಾಣದ ರಾಮಪ್ಪ ದೇವಾಲಯಕ್ಕೆ ಯುನೆಸ್ಕೂ ವಿಶ್ವ ಪಾರಂಪರಿಕ ತಾಣ ಸ್ಥಾನಮಾನ ನೀಡಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

ಜೈಪುರಕ್ಕೆ ಯುನೆಸ್ಕೋ ವಿಶ್ವ ಪಾರಂಪರಿಕ ತಾಣದ ಮಾನ್ಯತೆ!

ಯುನೆಸ್ಕೂ ಅಧಿವೇಶನದಲ್ಲಿ 12 ನೇ ಶತಮಾನದ ಕಾಕತಿಯನ್ ವಾಸ್ತುಶಿಲ್ಪದ ಅದ್ಭುತವನ್ನು ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರ್ಪಡೆಗೊಳುವುದಾಗಿ ಪ್ರಕಟಿಸಿದೆ. ಇದಕ್ಕಾಗಿ ಯುನೆಸ್ಕೋ ಅಧಿವೇಶನದಲ್ಲಿರುವ ಭಾರತದ ಪ್ರತಿನಿಧಿ ಪಾಲಂಪೇಟ್ ಜನರನ್ನು ಅಭಿನಂದಿಸುತ್ತೇವೆ ಎಂದು ಯನೆಸ್ಕೂ 44ನೇ ಅಧಿವೇಶನ ಹೇಳಿದೆ.

ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರ್ಪಡೆಗೊಂಡ ಬೆನ್ನಲ್ಲೇ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕರಕುಶಲತೆಯ ಅನುಭವ ಪಡೆಯಲು ಎಲ್ಲರೂ ರಾಮಪ್ಪ ದೇವಾಲಯಕ್ಕೆ ಭೇಟಿ ನೀಡಲು ಮನವಿ ಮಾಡಿದ್ದಾರೆ. 

ಎಲ್ಲರಿಗೂ ಅಭಿನಂದನೆಗಳು, ವಿಶೇಷವಾಗಿ ತೆಲಂಗಾಣ ಜನತೆಗೆ ಅಭಿನಂದನೆ. ಅಪ್ರತಿಮ ರಾಮಪ್ಪ ದೇವಾಲಯ ಶ್ರೇಷ್ಠ ಕಾಕತೀಯ ರಾಜವಂಶದ ಅತ್ಯುತ್ತಮ ಕರಕುಶಲತೆಯನ್ನು ಪ್ರದರ್ಶಿಸುತ್ತದೆ. ಈ ಭವ್ಯವಾದ ದೇವಾಲಯಕ್ಕೆ ಭೇಟಿ ನೀಡಿ, ಈ ಮಂದಿರ ಭವ್ಯತೆ, ವಿಶೇಷತೆಯ ಅನುಭವವನ್ನು ಪಡೆಯಲು ನಾನು ನಿಮ್ಮೆಲ್ಲರನ್ನು ಕೋರುತ್ತೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

Scroll to load tweet…

ತೆಲಂಗಾಣದ ಮುಲುಗು ಜಿಲ್ಲೆಯಲ್ಲಿರುವ ಈ ರಾಮಪ್ಪ ಮಂದಿರ ಭಾರತದ ಶ್ರೇಷ್ಠ ಕರಕುಶಲತೆಗೆ ಹಿಡಿದ ಕನ್ನಡಿಯಾಗಿದೆ. ಈ ದೇವಾಯ ಸುಮಾರು 800 ವರ್ಷಗಳ ಹಿಂದೆ ನಿರ್ಮಾಣವಾಗಿದೆ. 

ಡಾರ್ಜಿಲಿಂಗ್‌ ಟಾಯ್‌ಟ್ರೈನ್‌ಗೆ ಯುನೆಸ್ಕೋ ಪಾರಂಪರಿಕ ಪಟ್ಟ ಕಳೆದುಕೊಳ್ಳುವ ಭೀತಿ!

ರಷ್ಯಾ, ಓಮನ್, ಬ್ರೆಜಿಲ್, ಸೌದಿ ಅರೇಬಿಯಾ, ಈಜಿಪ್ಟ್, ಸ್ಪೇನ್, ಥೈಲ್ಯಾಂಡ್, ಹಂಗೇರಿ, ಇಥಿಯೋಪಿಯಾ, ಚೀನಾ ಮತ್ತು ಇತರ ಕೆಲವು ದೇಶಗಳು ರಾಮಪ್ಪ ದೇವಾಲಯವನ್ನು ಅತ್ಯುತ್ತಮ ಪರಂಪರೆಯ ತಾಣವೆಂದು ಅಧಿವೇಶನದಲ್ಲಿ ಬಣ್ಣಸಿದೆ. ಇದೇ ವೇಳೆ ತೆಲಂಗಾಣ ಅಧಿಕಾರಿಗಳು ಈ ದೇವಾಲಯವನ್ನು ಸಂರಕ್ಷಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.