ಜೈಪುರ್(ಜು.06): ರಾಜಸ್ಥಾನ ರಾಜಧಾನಿ ಜೈಪುರಕ್ಕೆ ಯುನೆಸ್ಕೋ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ದೊರಕಿದೆ.

ಈ ಕುರಿತು ಟ್ವೀಟ್ ಮಾಡಿರುವ ಯುನೆಸ್ಕೋ, ಸಾಂಪ್ರದಾಯಿಕ ವಾಸ್ತುಶಿಲ್ಪಕ್ಕೆ ಹೆಸರಾದ ಜೈಪುರವನ್ನು ಸೇರಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

 ಬಾಕುವಿನಲ್ಲಿ ನಡೆಯುತ್ತಿರುವ ಯುನೆಸ್ಕೋ ವಿಶ್ವ ಪಾರಂಪರಿಕ ಸಮಿತಿಯ 43ನೇ ಅಧಿವೇಶನದಲ್ಲಿ, ಜೈಪುರಕ್ಕೆ ವಿಶ್ವ ಪಾರಂಪರಿಕ ಸ್ಥಾನ ನೀಡುವ ನಿರ್ಣಯ ಕೈಗೊಳ್ಳಲಾಗಿದೆ. 

ಜೈಪುರ ನಗರ ವಿಶ್ವ ಪಾರಂಪರಿಕಾ ಪಟ್ಟಿಗೆ ಸೇರ್ಪಡೆಯಾಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದು, ಜೈಪುರ ಸಂಸ್ಕೃತಿ ಮತ್ತು ಶೌರ್ಯಕ್ಕೆ ಸಂಬಂಧಿಸಿದ ನಗರವಾಗಿದೆ.  ಈ ನಗರವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಪಟ್ಟಿಗೆ ಸೇರಿಸಿರುವುದರಿಂದ ಸಂತೋಷವಾಗಿದೆ..ಎಂದು ಟ್ವೀಟ್ ಮಾಡಿದ್ದಾರೆ.