Asianet Suvarna News Asianet Suvarna News

1996ರ ಬಳಿಕ ಮೊದಲ ಬಾರಿಗೆ ಒಂದೇ ಕೂಟಕ್ಕೆ 3ನೇ ಬಾರಿಗೆ ಅಧಿಕಾರ, ಜನತೆಗೆ ಮೋದಿ ಧನ್ಯವಾದ!

ಲೋಕಸಭಾ ಚುನಾವಣೆ ತೀರ್ಪು ಹೊರಬಿದ್ದಿದೆ. ಮೂರನೇ ಬಾರಿಗೆ ಎನ್‌ಡಿಎ ಬಹುಮತ ಸಿಕ್ಕಿದೆ. ಈ ಗೆಲುವಿನ ಬಳಿಕ ಬಿಜೆಪಿ ಪ್ರಧಾನ ಕಚೇರಿಗೆ ಆಗಮಿಸಿದ ಪ್ರಧಾನಿ ಮೋದಿ, ಜನತೆಗೆ ಧನ್ಯವಾದ ಹೇಳಿದ್ದಾರೆ. ಮೋದಿ ಭಾಷಣದ ವಿಡಿಯೋ ಇಲ್ಲಿದೆ.

Lok Sabha election result 2024 PM Address people of India after Mandate ckm
Author
First Published Jun 4, 2024, 9:13 PM IST | Last Updated Jun 4, 2024, 9:13 PM IST

ನವದೆಹಲಿ(ಜೂ.04) ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಬಹುಮತ ನೀಡಿದ ಜನತೆಗೆ ಪ್ರಧಾನಿ ಮೋದಿ ಧನ್ಯವಾದ ತಿಳಿಸಿದ್ದಾರೆ. 1962ರ ಬಳಿಕ ಇದೇ ಮೊದಲ ಬಾರಿಗೆ ಒಂದು ಸರ್ಕಾರ 2 ಸತತ ಅವಧಿ ಪೂರೈಸಿದ ಬಳಿಕ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿದೆ. ಎನ್‌ಡಿಎಗೆ ಆಶೀರ್ವಾದ ಮಾಡಿದ ದೇಶದ ಜನತೆಗೆ ಪ್ರಧಾನಿ ಮೋದಿ ಧನ್ಯವಾದ ಹೇಳಿದ್ದಾರೆ. ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಮೋದಿ, ಜನತೆಯನ್ನುದ್ದೇಶಿ ಮಾತನಾಡಿದ್ದಾರೆ. 

ಒಡಿಶಾ, ತೆಲಂಗಾಣದಲ್ಲಿ ಎನ್‌ಡಿಎ ಸರ್ಕಾರ ರಚಿಸುತ್ತಿದೆ. ಒಡಿಶಾದಲ್ಲಿ ಬಿಜೆಪಿ ಸರ್ಕಾರ ರಚಿಸುತ್ತಿದೆ. ಲೋಕಸಭೆಯಲ್ಲೂ ಬಿಜೆಪಿ ಒಡಿಶಾದಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಜಗನ್ನಾಥನ ಭೂಮಿಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಆಡಳಿತ ನಡೆಸಲಿದೆ ಎಂದು ಮೋದಿ ಹೇಳಿದ್ದಾರೆ. 

ಕುಸಿದ ಬಿಜೆಪಿಗೆ ಮತ್ತೊಂದು ಹಿನ್ನಡೆ, ವಾರಣಾಸಿಯಲ್ಲಿ ಮೋದಿ ಗೆದ್ದರೂ ಅಂತರ ಕುಸಿತ!

ನಿಮ್ಮ ಪ್ರೀತಿ, ನಿಮ್ಮ ಆಶೀರ್ವಾದಕ್ಕೆ ಎಲ್ಲಾ ಭಾರತೀಯರಿಗೆ ಧನ್ಯವಾದ ಅರ್ಪಿಸುತ್ತೇನೆ. ಮಂಗಳವಾರದ ಪವಿತ್ರ ದಿನ ಎನ್‌ಡಿಎಗೆ ಮೂರನೇ ಬಾರಿಗೆ ಆಶೀರ್ವಾದ ನೀಡಿದ್ದಾರೆ. ಎನ್‌ಡಿಎ ಮೂರನೇ ಬಾರಿಗೆ ಅಧಿಕಾರ ನೀಡಿದ್ದೀರಿ. ನಾವು ಜನತಾ ಜನಾರ್ಧಾನರಿಗೆ ಅಭಾರಿಯಾಗಿದ್ದೇವೆ. ಎನ್‌ಡಿಎ ಮೇಲೆ ಸಂಪೂರ್ಣ ವಿಶ್ವಾಸವಿಟ್ಟ ಎಲ್ಲರಿಗೂ ಧನ್ಯವಾದ ಎಂದು ಮೋದಿ ಹೇಳಿದ್ದಾರೆ.

ಈ ಗೆಲುವು ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವದ ಗೆಲುವು. ಇದು ಭಾರತದ ಸಂವಿಧಾನದ ಗೆಲುವು. ಇದು ವಿಕಸಿತ ಭಾರತದ ಗೆಲುವು. ಇದು ಸಬ್ ಕಾ ಸಾತ್  ಸಬ್‌ಕಾ ವಿಕಾಸ್, ಸಬ್ ಕಾ ವಿಶ್ವಾಸಕ್ಕೆ ಸಿಕ್ಕ ಗೆಲುವು. ಭಾರತದ ಚುನಾವಣೆ ವ್ಯವಸ್ಥೆ ಮೇಲೆ ಎಲ್ಲಾ ಭಾರತೀಯರಿಗೆ ಹೆಮ್ಮೆ ಇದೆ. ಇಷ್ಟು ದೊಡ್ಡ ರಾಷ್ಟ್ರದಲ್ಲಿ ಇಷ್ಟು ವ್ಯವಸ್ಥಿತವಾಗಿ ಚುನಾವಣೆ ಆಯೋಜಿಸುವು ದೇಶ ಮತ್ತೊಂದಿಲ್ಲ. ಭಾರತದ ಲೋಕತಂತ್ರದ ಚುನಾವಣೆ ಪ್ರಕ್ರಿಯೆ ತಾಖತ್ತು ಇದು. ಇದು ನಮಗೆಲ್ಲಾ ಅತ್ಯಂತ ಗೌರವದ ವಿಷಯ ಎಂದು ಮೋದಿ ಹೇಳಿದ್ದಾರೆ. ಭಾರತದ ಲೋಕತಂತ್ರದ ಸಾಮರ್ಥ್ಯವನ್ನು ವಿಶ್ವದ ಮುಂದೆ ಗರ್ವದಿಂದ ಪ್ರಸುತ್ತ ಪಡಿಸುತ್ತಿದ್ದೇವೆ. ಜಮ್ಮು ಮತ್ತು ಕಾಶ್ಮೀರದ ಮತದಾನದಲ್ಲಿ ದಾಖಲೆಯ ಮತದಾನವಾಗಿದೆ. ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ.

ಬಿಜೆಪಿ ಕೇರಳದಲ್ಲಿ ಖಾತೆ ತೆರೆದಿದೆ. ನಮ್ಮ ಕೇರಳದ ಕಾರ್ಯಕರ್ತರು ಬಲಿದಾನ ಮಾಡಿದ್ದಾರೆ. ಸಂಘರ್ಷದ ಜೊತೆ ಸೇವೆಯನ್ನೂ ಮಾಡಿದ್ದಾರೆ. ಹಲವು ಪೀಳಿಗೆ ಸತತ ಪರಿಶ್ರಮದಿಂದ ಇಂದು  ಕೇರಳದಲ್ಲಿ ಕಮಲ ಅರಳಿದೆ ಎಂದು ಮೋದಿ ಹೇಳಿದ್ದಾರೆ. ತೆಲಂಗಾಣದಲ್ಲಿ ಬಿಜೆಪಿ ಸಂಖ್ಯೆ ದುಪ್ಪಟ್ಟಾಗಿದೆ. ಮಧ್ಯಪ್ರದೇಶ, ಉತ್ತರಾಖಂಡ, ಹಿಮಾಚಲ, ಚತ್ತೀಸಘಡ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ. ಈ ಎಲ್ಲಾ ರಾಜ್ಯ ಹಾಗೂ ವಿಧಾನಸಭಾ ಚುನಾವಣೆಯ ಅರುಣಾಚಲ, ಸಿಕ್ಕಿಂ, ಆಂಧ್ರ ಪ್ರದೇಶ ಜನತೆಗೂ ಮೋದಿ ಧನ್ಯವಾದ ಅರ್ಪಿಸಿದ್ದಾರೆ. 

ಜೂ.9ಕ್ಕೆ ಆಂಧ್ರ ಸಿಎಂ ಆಗಿ ಚಂದ್ರಬಾಬು ನಾಯ್ಡು ಪ್ರಮಾಣವಚನ, ಮೋದಿ ಭಾಗಿ!

ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನೇತೃತ್ವದಲ್ಲಿ, ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಎನ್‌ಡಿಎ ಉತ್ತಮ ಪ್ರದರ್ಶನ ನೀಡಿದೆ. 10 ವರ್ಷಗಳ ಹಿಂದೆ ಜನರು ಬದಲಾವಣೆಗೆ ಮತ ನೀಡಿದ್ದರು. ಒಂದು ಸಮಯದಲ್ಲಿ ದೇಶ ನಿರಾಶೆಯಲ್ಲಿ ಮುಳುಗಿತ್ತು.  ಪ್ರತಿ ದಿನ ಭ್ರಷ್ಟಾಚಾರದಲ್ಲಿ ದೇಶ ಮುಳುಗಿತ್ತು. ಈ ಸಮಯದಲ್ಲಿ ದೇಶವನ್ನ ನಿರಾಶೆಯಿಂದ ಆಶಾವಾದಕ್ಕೆ ಕೊಂಡೊಯ್ದಿದ್ದೇವೆ. ನಾವೆಲ್ಲಾ ಜವಾಬ್ದಾರಿಯಿಂದ ಕೆಲಸ ಮಾಡಿದ್ದೇವೆ. 2019ರಲ್ಲ ನಮಗೆ ಜನರು ಆಶೀರ್ವಾದ ಮಾಡಿದ್ದರು. ಇದೀಗ 3ನೇ ಬಾರಿಗೆ ನಮಗೆ ಜನತೆ ಆಶೀರ್ವಾದ ನೀಡಿದ್ದಾರೆ ಎಂದು ಮೋದಿ ಹೇಳಿದ್ದಾರೆ.
 

Latest Videos
Follow Us:
Download App:
  • android
  • ios