Rongali Bihu ಸಂಗೀತ ವಾದ್ಯ ನುಡಿಸುವ ಮೂಲಕ ಅಸ್ಸಾಂ ರೊಂಗಾಲಿ ಬಿಹು ಆಚರಿಸಿದ ಮೋದಿ!
- ಅಸ್ಸಾಂ ಹೊಸ ವರ್ಷ ರೊಂಗಾಲಿ ಬಿಹು ಆಚರಣೆ
- ಅಸ್ಸಾಂ ಸಾಂಪ್ರದಾಯಿಕ ಸಂಗೀತ ವಾದ್ಯ ನುಡಿಸಿದ ಮೋದಿ
- ಕೇಂದ್ರ ಸಚಿವ ಸೊರ್ಬಾನಂದ್ ಸೋನ್ವಾಲ್ ಸಾಥ್
ನವದೆಹಲಿ(ಏ.23): ಅಸ್ಸಾಂ ಸಾಂಪ್ರಾದಾಯಿಕ ಸಂಗೀತ ವಾದ್ಯಗಳ ನುಡಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಸ್ಸಾಂ ಜನತೆಗೆ ಹೊಸ ವರ್ಷ ಆಚರಣೆಯಾದ ರೊಂಗಾಲಿ ಬಿಹು ಆಚರಿಸಿದ್ದಾರೆ. ನವೆದಹಲಿಯಲ್ಲಿ ಸರ್ಬಾನಂದ್ ಸೋನ್ವಾಲ್ ನಿವಾಸದಲ್ಲಿ ಆಯೋಜಿಸಿದ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೋದಿ ವಿಶೇಷವಾಗಿ ರೊಂಗಾಲಿ ಬಿಹು ಆಚರಿಸಿದ್ದಾರೆ.
ಮೊದಲಿಗೆ ಅಸ್ಸಾಂನ ತಬಲ ಬಾರಿಸಿದ ಪ್ರಧಾನಿ ಮೋದಿ, ಬಳಿಕ ವಿಸೇಷ ವಾದ್ಯವನ್ನು ನುಡಿಸಿದರು.ಈ ಮೂಲಕ ಅಸ್ಸಾಂ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದರು. ಇದೀಗ ಪ್ರಧಾನಿ ಮೋದಿ ಅಸ್ಸಾಂ ಸಂಗೀತ ನುಡಿಸುವ ವಿಡೀಯೋ ವೈರಲ್ ಆಗಿದೆ.
ಕರ್ನಾಟಕದಲ್ಲಿ ಯುಗಾದಿ ಆಚರಿಸಿದಂತೆ ಅಸ್ಸಾಂ ಜನತೆ ಹೊಸ ವರ್ಷವನ್ನು ರೊಂಗಾಲಿ ಬಿಹುವಾಗಿ ಆಚರಿಸುತ್ತಾರೆ. ನವದೆಹಲಿಯಲ್ಲಿ ಪ್ರಧಾನಿ ಮೋದಿ ರೊಂಗಾಲಿ ಬಿಹು ಆಚರಿಸುವ ಮೂಲಕ ಅಸ್ಸಾಂ ಜನತೆಗೆ ವಿಶೇಷ ಸಂದೇಶ ಸಾರಿದ್ದಾರೆ.
ಏಪ್ರಿಲ್ 24ಕ್ಕೆ ಜಮ್ಮು-ಕಾಶ್ಮೀರಕ್ಕೆ ಮೋದಿ: ಉಗ್ರರ ದಾಳಿ ಆತಂಕದಿಂದ ಭಾರೀ ಭದ್ರತೆ
ಮೋದಿ ರೊಂಗಾಲಿ ಬಿಹು ಆಚರಣೆಗೆ ಅಸ್ಸಾಂ ಪ್ರಮುಖ ನಾಯಕ, ಕೇಂದ್ರ ಸಚಿವ ಸರ್ಬಾನಂದ್ ಸೋನ್ವಾಲ್ ಸಾಥ್ ನೀಡಿದರು.
ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ತೇಘ್ ಬಹದ್ದೂರ್ ಜಯಂತಿ ಆಚರಣೆ
ಸಿಖ್ ಗುರು ತೇಘ್ ಬಹದ್ದೂರ್ ಅವರ ತ್ಯಾಗವು ಭಾರತದ ಹಲವು ಪೀಳಿಗೆಗಳಿಗೆ ಸ್ಫೂರ್ತಿ. ಸಂಸ್ಕೃತಿಯ ಘನತೆಯನ್ನು ರಕ್ಷಿಸಲು ಮತ್ತು ಅದರ ಗೌರವವನ್ನು ಕಾಪಾಡಲು ಬದುಕಲೂ ಸಿದ್ಧ, ಸಾಯಲೂ ಸಿದ್ಧ ಎನ್ನುವ ಮಹತ್ತರ ಆದರ್ಶವನ್ನು ಅವರು ಹೊಂದಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಸಿಖ್ಖರ 9ನೇ ಗುರುಗಳಾದ ತೇಘ್ ಬಹದ್ದೂರ್ ಅವರ 400ನೇ ಜನ್ಮದಿನದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ 10 ಗಂಟೆಗೆ ಕೆಂಪುಕೋಟೆಯಿಂದ ದೇಶವನ್ನು ಉದ್ದೇಶಿಸಿ ಐತಿಹಾಸಿಕ ಭಾಷಣ ಮಾಡಿದರು. ಇದಕ್ಕೂ ಮುನ್ನ ತೇಘ್ ಬಹದ್ದೂರ್ ಅವರಿಗೆ ಪ್ರಾರ್ಥನೆ ಸಲ್ಲಿಸಿ, ಅವರ ಸ್ಮರಣಾರ್ಥ ನಾಣ್ಯ ಮತ್ತು ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆ ಮಾಡಿದರು.
ಭಾರತ-ಬ್ರಿಟನ್ ಸಂಬಂಧ ಮತ್ತಷ್ಟು ಗಟ್ಟಿ: ಮೋದಿ-ಜಾನ್ಸನ್ ಮಾತುಕತೆ ಯಶಸ್ವಿ
ನಂತರ ಮಾತನಾಡಿದ ಪ್ರಧಾನಿ ಮೋದಿ, ಶಹೀಬ್ ಕೀರ್ತನೆ ಕೇಳಿ ಮನಸ್ಸು ಶಾಂತವಾಯಿತು. ಭಾರತ ಸಿಖ್ ಗುರುಗಳ ಆದರ್ಶಗಳನ್ನು ಪಾಲನೆ ಮಾಡುತ್ತಾ ಮುಂದೆ ಸಾಗುತ್ತಿದೆ ಎಂಬುದು ನನಗೆ ಅತೀವ ಸಂತೋಷ ನೀಡಿದೆ. ಕೆಂಪುಕೋಟೆ ಹಲವು ಐತಿಹಾಸಿಕ ಕಾರ‍್ಯಕ್ರಮಗಳಿಗೆ ಸಾಕ್ಷಿಯಾಗಿದೆ. ಈ ಕೋಟೆಯು ಗುರು ತೇಜ್ ಬಹದ್ದೂರ್ ಅವರ ಹುತಾತ್ಮರಾಗಿದ್ದಕ್ಕೂ ಸಾಕ್ಷಿಯಾಗಿದೆ. ಈ ದೇಶಕ್ಕೆ ತೇಘ್ ಬಹದ್ದೂರ್‌ರ ಕೊಡುಗೆ ಮತ್ತು ತ್ಯಾಗವನ್ನು ವರ್ಣಿಸಲಸಾಧ್ಯ. ತೇಘ್, ಮೊಘಲ್ ದೊರೆ ಔರಂಗಾಜೇಬ್ ವಿರುದ್ಧ ನಿಂತರು, ಭಾರತಕ್ಕಾಗಿ ಇಡೀ ಜೀವನ ಮುಡಿಪಾಗಿಟ್ಟರು ಎಂದು ಶ್ಲಾಘಿಸಿದರು.
ದೇಶದ ಏಕತೆ ಜತೆ ರಾಜಿ ಇಲ್ಲ: ಮೋದಿ ಖಡಕ್ ಮಾತು
ರಾಷ್ಟ್ರ ರಾಜಧಾನಿ ಸೇರಿದಂತೆ ಕೆಲ ರಾಜ್ಯಗಳಲ್ಲಿ ನಡೆಯುತ್ತಿರುವ ಮತೀಯ ಘರ್ಷಣೆಗಳ ಬಗ್ಗೆ ಇದೇ ಮೊದಲ ಬಾರಿ ಪರೋಕ್ಷವಾಗಿ ಪ್ರಸ್ತಾಪಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಯಾವುದೇ ಕಾರಣಕ್ಕೂ ದೇಶದ ಸಮಗ್ರತೆ ಹಾಗೂ ಏಕತೆಯ ಜೊತೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದು ತೀಕ್ಷ$್ಣವಾಗಿ ಹೇಳಿದ್ದಾರೆ.ಗುರುವಾರ ನಾಗರಿಕ ಸೇವೆಗಳ ದಿನಾಚರಣೆಯಲ್ಲಿ ಮಾತನಾಡಿದ ಪ್ರಧಾನಿ, ‘ನಮ್ಮದು ಪ್ರಜಾಪ್ರಭುತ್ವ ದೇಶ. ಇಲ್ಲಿ ಸಮಾನತೆ, ಜಾಗತೀಕರಣ ಹಾಗೂ ಏಕತೆ ಎಂಬ ಮೂರು ಸವಾಲುಗಳು ಇಂದು ನಮ್ಮ ಮುಂದಿವೆ. ಯಾವತ್ತೂ ನಾವು ಭಾರತದ ಏಕತೆ ಹಾಗೂ ಸಮಗ್ರತೆಯ ಜೊತೆ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಅದು ನಮ್ಮ ಹಾಗೂ ಪ್ರತಿಯೊಬ್ಬ ನಾಗರಿಕ ಸೇವಾ ಅಧಿಕಾರಿಯ ಪ್ರಥಮ ಹಾಗೂ ಅತ್ಯುನ್ನತ ಜವಾಬ್ದಾರಿಯಾಗಿದೆ’ ಎಂದು ಹೇಳಿದರು.