ಎಂಎಸ್‌ಪಿ(MSP) ಹೆಚ್ಚಳವನ್ನು ಪ್ರಕಟಿಸಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್, ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗದ (ಸಿಎಸಿಪಿ) ಶಿಫಾರಸುಗಳ ಆಧಾರದ ಮೇಲೆ 14 ಮುಂಗಾರು ಹಂಗಾಮಿನ ಬೆಳೆ ಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಮೋದಿ ಅಧ್ಯಕ್ಷತೆಯ ಸಂಪುಟ ಅನುಮೋದಿಸಿದೆ

ನವದೆಹಲಿ: ನರೇಂದ್ರ ಮೋದಿ ಸರ್ಕಾರ 3ನೇ ಬಾರಿ (Narendra Modi Government) ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ರೈತರಿಗೆ ಬುಧವಾರ ಬಂಪರ್ ಕೊಡುಗೆ ನೀಡಿದೆ. ಭತ್ತ, ರಾಗಿ, ತೊಗರಿ, ಹತ್ತಿ, ಶೇಂಗಾ ಸೇರಿದಂತೆ 17 ಧಾನ್ಯಗಳು/ಬೆಳೆಗಳ ಬೆಂಬಲ ಬೆಲೆಯನ್ನು ಭರ್ಜರಿ ಏರಿಕ ಮಾಡಿದೆ. ಎಂಎಸ್‌ಪಿ(MSP) ಹೆಚ್ಚಳವನ್ನು ಪ್ರಕಟಿಸಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್, ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗದ (ಸಿಎಸಿಪಿ) ಶಿಫಾರಸುಗಳ ಆಧಾರದ ಮೇಲೆ 14 ಮುಂಗಾರು ಹಂಗಾಮಿನ ಬೆಳೆ ಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಮೋದಿ ಅಧ್ಯಕ್ಷತೆಯ ಸಂಪುಟ ಅನುಮೋದಿಸಿದೆ ಎಂದು ಹೇಳಿದರು. ಹರಿಯಾಣ, ಮಹಾರಾಷ್ಟ್ರ, ಜಾರ್ಖಂಡ್ ಮತ್ತು ದೆಹಲಿಯಂತಹ ಚುನಾವಣೆಗಳು ವರ್ಷಾಂತ್ಯಕ್ಕೆ ನಡೆಯಲಿದ್ದು, ಈ ಬೆಳೆಗಳನ್ನು ಈ ರಾಜ್ಯಗಳಲ್ಲೇ ಹೆಚ್ಚು ಬೆಳೆಯಲಾಗುತ್ತದೆ ಎಂಬುದು ಗಮನಾರ್ಹವಾಗಿದೆ.

ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ ಪಿ) ಶೇ.5.35 ರಷ್ಟು ಅಂದರೆ ಕ್ವಿಂಟಲ್‌ಗೆ 117 ರು.ನಷ್ಟು ಹೆಚ್ಚಿಸಿ ಕ್ವಿಂಟಲ್‌ಗೆ 2,300 ರು.ಗೆ ಏರಿಸಲಾಗಿದೆ. ಸರ್ಕಾರವು ಹೆಚ್ಚುವರಿ ಅಕ್ಕಿ ದಾಸ್ತಾನು ಹೊಂದಿದ್ದರೂ ಭತ್ತದ ಬೆಂಬಲ ಬೆಲೆ ಹೆಚ್ಚಿಸಲಾಗಿದೆ. ಇನ್ನು ರಾಗಿ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 444 ರು., ಮೆಕ್ಕೆಜೋಳವನ್ನು 135 ರು., ತೊಗರಿಬೇಳೆಯನ್ನ 550 ರು., ಹೆಸರುಬೇಳೆಯನ್ನು 124 ರು., ಉದ್ದಿನ ಬೇಳೆಯನ್ನು 450 ರು., ಶೇಂಗಾ 406 ರು., ಸೋಯಾಬೀನ್ 292 ರು., ಸೂರ್ಯಕಾಂತಿ ಬೀಜ 520 ರು. ಹಾಗೂ ಹತ್ತಿಯನ್ನು 501 ರು. ನಷ್ಟು ಹೆಚ್ಚಿಸಲಾಗಿದೆ.

ಸಂದರ್ಶನದಲ್ಲಿ ಮೋದಿ ಸರ್ಕಾರದ ಕುರಿತು ಶಾಕಿಂಗ್ ಹೇಳಿಕೆ ನೀಡಿದ ರಾಹುಲ್ ಗಾಂಧಿ

2018ರ ಕೇಂದ್ರ ಬಜೆಟ್‌ನಲ್ಲಿ ಬೆಂಬಲ ಬೆಲೆಯು ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ 1.5 ಪಟ್ಟು ಇರಬೇಕು ಎಂದು ಸರ್ಕಾರವು ಸ್ಪಷ್ಟವಾದ ನೀತಿ ನಿರ್ಧಾರವನ್ನು ತೆಗೆದುಕೊಂಡಿದೆ ಮತ್ತು ಇತ್ತೀಚಿನ ಬೆಂಬಲ ಬೆಲೆ ಹೆಚ್ಚಳದಲ್ಲಿ ಈ ತತ್ವವನ್ನು ಅನುಸರಿಸಲಾಗಿದೆ ಎಂದು ವೈಷ್ಣವ್ ವ್ ಹೇಳಿದರು. ಹೇಳಿದರು. ವೆಚ್ಚವನ್ನು ವೆಚ್ಚವನ್ನು ವೈಜ್ಞಾನಿಕವಾಗಿ ಲೆಕ್ಕಾಚಾರ ಮಾಡಲಾಗಿದೆ ಎಂದು ಅವರು ಹೇಳಿದರು.

ಫೊರೆನ್ಸಿಕ್ ಲ್ಯಾಬ್‌ಗೆ 2254 ಕೋಟಿ ರೂಪಾಯಿ

ಇದೇ ವೇಳೆ ಸಂಪುಟ ಸಭೆಯು ದೇಶದ ವಿಧಿವಿಜ್ಞಾನ ಲ್ಯಾಬ್‌ಗಳ ಉನ್ನತೀಕರಣಕ್ಕೆ 2254 ಕೋಟಿ ರು. ನೀಡಲು ನಿರ್ಧರಿಸಿದೆ. ಅಂತೆಯೇ ವಾರಾಣಸಿ ಏರ್‌ಪೋರ್‌ ಅಭಿವೃದ್ಧಿಗೆ 2870 ಕೋಟಿ ರು. ನೀಡಲೂ ಸಭೆ ಅನುಮೋದನೆ ನೀಡಿದೆ.

UGC-NET ಪರೀಕ್ಷೆ ನಡೆದ ಮರುದಿನವೇ ರದ್ದು, ಅಕ್ರಮ ದೂರಿನ ಬೆನ್ನಲ್ಲೇ ಸರ್ಕಾರದ ಆದೇಶ!

ಬೆಂಬಲ ಬೆಲೆ (ಕ್ವಿಂಟಲ್‌ಗೆ)

ಬೆಳೆ ಪರಿಷ್ಕೃತ ಬೆಂಬಲ (ರೂ.ಗಳಲ್ಲಿ)ಬೆಲೆ ಏರಿಕೆ ಪ್ರಮಾಣ (ರೂ.ಗಳಲ್ಲಿ)
ಭತ್ತ2300117
ಜೋಳ3371191
ರಾಗಿ4290444
ಮಕ್ಕೆಜೋಳ2225135
ತೊಗರಿಬೇಳೆ7550550
ಹೆಸರುಬೇಳೆ8682124
ಉದ್ದಿನಬೇಳೆ7400450
ಶೇಂಗಾ6783406
ಸೋಯಾ4892292
ಹತ್ತಿ712150