ಸ್ಟಾರ್ಟ್‌ಅಪ್ ತವರಾಗಿದೆ ಪ್ರಧಾನಿ ಮೋದಿ ನವ ಭಾರತ, ಯುವಕರಿಗೆ ಹೆಚ್ಚಿನ ಅವಕಾಶ, ರಾಜೀವ್ ಚಂದ್ರಶೇಖರ್!

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ನವ ಭಾರತ ನಿರ್ಮಾಣವಾಗಿದೆ. ಈ ಹಿಂದಿನ ಭಾರತಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ಸರ್ಕಾರದ ಸೌಲಭ್ಯಗಳು ಒಂದು ಪೈಸೆ ಕಡಿತವಾಗದಂತೆ, ಮಧ್ಯವರ್ತಿಗಳ ಕೈಗೆ ಸಿಗದೆ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿದೆ. ಭಾರತ ಸ್ಟಾರ್ಟ್ಆಪ್ ಹಬ್ ಆಗಿ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗಿದೆ. ತಂತ್ರಜ್ಞಾನದ ಬಳಕೆ ಹೆಚ್ಚಾಗಿದೆ. ಯುವಕರಿಗೆ ಹೆಚ್ಚಿನ ಅವಕಾಶ ಹಾಗೂ ವೇದಿಕೆ ಸಿಕ್ಕಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ರಾಜೀವ್ ಚಂದ್ರಶೇಖರ್ ಭಾಷಣ ಸಂಪೂರ್ಣ ವಿವರ ಇಲ್ಲಿವೆ.

PM Modi building new India full of opportunities for youths MoS Rajeev Chandrasekhar address  PES University Bengalauru ckm

ಬೆಂಗಳೂರು(ಸೆ.09): ಪ್ರಧಾನಿ ನರೇಂದ್ರ ಮೋದಿ ನಿರ್ಮಿಸಿದ ನವ ಭಾರತದಲ್ಲಿ ಯುವ ಸಮೂಹಕ್ಕೆ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗಿದೆ. ಆವಿಷ್ಕಾರಕ್ಕೆ ವೇದಿಕೆ ಒದಗಿಸಲಾಗಿದೆ. ಪ್ರತಿಭೆಗೆ ಪ್ರೋತ್ಸಾಹ ಹಾಗೂ ಅದಕ್ಕೆ ತಕ್ಕ ವೇದಿಕೆಯೂ ನಿರ್ಮಾಣವಾಗಿದೆ. ಇದರಿಂದ ನವ ಭಾರತದಲ್ಲಿ ಯುವ ಸಮೂಹಕ್ಕೆ ಉದ್ಯೋಗವಕಾಶಗಳು ಹೆಚ್ಚಾಗಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಬೆಂಗಳೂರಿನ ಪಿಇಎಸ್ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಸಚಿವರು, ನವ ಭಾರತದಲ್ಲಿ ಆಗಿರುವ ಬದಲಾವಣೆ ಹಾಗೂ ಯುವ ಸಮೂಹಕ್ಕೆ ಸಿಕ್ಕಿರುವ ಅಕಾಗಳ ಕುರಿತು ಹೇಳಿದ್ದಾರೆ. ಭಾರತ ಜಸಂಖ್ಯೆಯಲ್ಲಿ ಅತೀ ದೊಡ್ಡ ದೇಶ. ಪ್ರತಿ ರಾಜ್ಯಗಳಲ್ಲಿ ಭಾಷೆ, ಸಂಪ್ರದಾಯ, ಸ್ಥಳೀಯ ವಿಚಾರಧಾರೆಗಳು ವಿಭಿನ್ನ.  ಇತ್ತ ಪ್ರಜಾಪ್ರಭುತ್ವನ್ನು ನಿಷ್ಕ್ರೀಯ ಪ್ರಜಾಪ್ರಭುತ್ವವಾಗಿ ನೋಡಲಾಗುತ್ತಿತ್ತು. ಯೋಜನೆ ದೆಹಲಿಯಿಂದ ದೇಶದ ಮೂಲೆಯ ಹಳ್ಳಿ ತಲುಪುವಾಗ ಫಲಾನುಭವಿಗೆ ಸಂಪೂರ್ಣವಾಗಿ ಏನೂ ಸಿಗುವುದಿಲ್ಲ ಅನ್ನೋ ಮಾತಿತ್ತು. ಆದರೆ ಪ್ರಧಾನಿ ಮೋದಿ ಭಾರತದಲ್ಲಿ ಇದೆಲ್ಲಾ ಬದಲಾಗಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ದೆಹಲಿಯಿಂದ ಫಲಾನುಭವಿಗೆ ಬಿಡುಗಡೆ ಮಾಡುವ 100 ರೂಪಾಯಿ ಹಳ್ಳಿಯ ಮೂಲೆಯಲ್ಲಿರುವಾತನಿಗೆ ತಲುವಾಗ 85 ರೂಪಾಯಿ ಮದ್ಯವರ್ತಿಗಳು, ಅಧಿಕಾರಿಗಳು ನುಂಗುತ್ತಿದ್ದರು. ಕೇವಲ 15 ರೂಪಾಯಿ ಫಲಾನುಭವಿಗೆ ತಲುಪುತ್ತಿತ್ತು. ಇದನ್ನು ಅಂದಿನ ಪ್ರಧಾನಿ ರಾಜೀವ್ ಗಾಂಧಿಯೇ(Rajeev Gnadhi) ಹೇಳಿದ್ದರು. ಭಾರತದ ಬ್ಯಾಂಕಿಂಗ್(Banking System) ವ್ಯವಸ್ಥೆ ಕೇವಲ 9 ಕುಂಟುಂಬಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಪ್ರಧಾನಿ ಮೋದಿ(PM Narendra Modi) ಆಡಳಿತದಲ್ಲಿ ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆ(Bank Account) ತೆರೆಯಲಾಯಿತು. ಬಳಿಕ ಈಗ ಬಿಡುಗಡೆ ಮಾಡುವ ಒಂದೂ ರೂಪಾಯಿ ಯಾವುದೇ ಕಡಿತವಿಲ್ಲದೆ, ಯಾವುದೇ ವಿಳಂಬವಿಲ್ಲದೆ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದೆ. ಡಿಜಿಟಲ್(Digital India) ಇಂಡಿಯಾದಿಂದ DBT  ಮೂಲಕ ಹಣ ಫಲಾನುಭವಿಗಳ ಖಾತೆಗೆ ಜಮೆ ಆಗಲಿದೆ ಎಂದು ರಾಜೀವ್ ಚಂದ್ರಶೇಖರ್(Rajeev chandrasekhar) ವಿದ್ಯಾರ್ಥಿಗಳನ್ನುದ್ದೇಶಿ ಹೇಳಿದರು.

 

ತೆರಿಗೆ ಸಂಗ್ರಹದಲ್ಲಿ ಮೋದಿ ಸರ್ಕಾರ ಐತಿಹಾಸಿಕ ದಾಖಲೆ: ಸಚಿವ ರಾಜೀವ್ ಚಂದ್ರಶೇಖರ್!

ಈ ಹಿಂದಿನ ಭಾರತದಲ್ಲಿ ಸಣ್ಣ ಅಥವಾ ಯಾವುದೇ ಉದ್ಯಮ(Business) ಆರಂಭಿಸಲು ಕೆಲವು ಕಟ್ಟುಪಾಡುಗಳಿತ್ತು. ಆತ ಶ್ರೀಮಂತ ವ್ಯಕ್ತಿಯಾಗಿರಬೇಕು. ಉದ್ಯಮಿ ಕುಟುಂಬದಿಂದ ಬಂದಿರಬೇಕು. ಯಾವುದೇ ಹಿನ್ನಲೆ ಇಲ್ಲದ ಕೆಳ ವರ್ಗ, ಮದ್ಯಮ ವರ್ಗದ ವ್ಯಕ್ತಿಗೆ ಉದ್ಯಮಕ್ಕಾಗಿ ಸಾಲ ಸಿಗುವುದು ಕನಸಿನ ಮಾತಾಗಿತ್ತು. ಸ್ವಜನಪಕ್ಷಪಾತ ಮತ್ತು ಬಂಡವಾಳದ ಬಿಕ್ಕಟ್ಟಿನೊಂದಿಗೆ ಹೋರಾಡಬೇಕಾದ ಪರಿಸ್ಥಿತಿ ಇತ್ತು. ಇದು ಯಾರು ಬೇಕಾದರು ಉದ್ಯಮ ಆರಂಭಿಸಬಹುದು. ಯಾವುದೇ ದಾಖಲೆ, ಹಿನ್ನಲೆ ಇಲ್ಲದೆ ಬ್ಯಾಂಕ್ ಸಾಲ ನೀಡುತ್ತದೆ. ಮುದ್ರಾ(Mudra Loan) ಸೇರಿದಂತೆ ಹಲವು ಯೋಜನೆಗಳು ಆರಂಭಿಸಲಾಗಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದರು.

ಪ್ರಧಾನಿ ಮೋದಿ ಆಡಳಿತದಲ್ಲಿ ಭಾರತ ಕೋವಿಡ್‌(Covid 19) ಸಂಕಷ್ಟದ ನಡುವೆಯೂ ಪ್ರಗತಿ ಪಥದಲ್ಲಿ ಸಾಗುತ್ತಿದೆ. ಏಪ್ರಿಲ್-ಜೂನ್ 2022-23 ತ್ರೈಮಾಸಿಕದಲ್ಲಿ ಒಟ್ಟು ದೇಶೀಯ ಉತ್ಪನ್ನವು ಶೇಕಡಾ 13.5 ರಷ್ಟು ಬೆಳವಣಿಗೆಯಾಗಿದೆ. ಈ ಮೂಲಕ ಭಾರತ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಭಾರತದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಯಾಗಿದೆ. ಮೂಲೆ ಮೂಲೆಗೂ ಸಂಪರ್ಕ ಸಾಧ್ಯವಾಗಿದೆ. ಇದರಿಂದ ಉದ್ಯೋಗವಕಾಶಗಳು ಸೃಷ್ಟಿಯಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.

ರಾಹುಲ್‌ ಬಂಟರಿಂದಲೇ ಗಾಂಧೀಜಿ ಫೋಟೋ ಧ್ವಂಸ: ರಾಜೀವ್‌ ಚಂದ್ರಶೇಖರ್‌

ಭಾರತ ಡಿಜಿಟಲ್ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದೆ. ಇದರ ಮುಂದುವರಿದ ಭಾಗವೇ ಸ್ಟಾರ್ಟ್ಆಪ್(India Startup Hub). ಕೇಂದ್ರದ ಯೋಜನೆಗಳಿಂದ ಇದೀಗ ಭಾರತ 75,000ಕ್ಕೂ ಹೆಚ್ಟು ಸ್ಟಾರ್ಟ್ಆಪ್‌ ಹೊಂದಿದೆ. 104 ಯೂನಿಕಾರ್ನ್‌ಗಳನ್ನು ಹೊಂದಿದೆ. ಇದು ಕೆಲವೆ ಕೆಲವು ವರ್ಷದಲ್ಲಿನ ಸಾಧನೆ. ಸಾಮಾನ್ಯ ವ್ಯಕ್ತಿ ಕೂಡ ಭಾರತದಲ್ಲಿ ಯಾವುದೇ ಸ್ಟಾರ್ಟ್ಅಪ್ ಆರಂಭಿಸಬುಹುದು. ಯಾವುದೇ ಉದ್ಯಮ ಆರಂಭಿಸಬಹುದು. ಇತರರಿಗೆ ಕೆಲಸ ಕೊಡಬಹುದು. ಇಂತಹ ವೇದಿಕೆ ಭಾರತದಲ್ಲಿ ಕಲ್ಪಿಸಲಾಗಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಪಿಇಎಸ್ ಕಾಲೇಜಿನಲ್ಲಿ(PES College) 3,495 ಪದವೀಧರಿಗೆ ಘಟಿಕೋತ್ಸವ ಸಮಾರಂಭದಲ್ಲಿ ಪ್ರಮಾಣಪತ್ರ ವಿತರಿಸಿದರು. ಪದವಿ ಪಡೆದ ಯುವ ಸಮೂಹ ರಾಷ್ಟ್ರ ನಿರ್ಮಾಣಕ್ಕೆ ಕೈಲಾದ ಕೊಡುಗೆ ನೀಡಬೇಕು. ಯುವ ರಾಷ್ಟ್ರ ಜಗತ್ತಿನಲ್ಲಿ ಪ್ರಭಾವ ಬೀರಬೇಕು. ನವ ಭಾರತದ ಆರ್ಥಿಕ ಸಾಮರ್ಥ್ಯ ಅರಿತುಕೊಳ್ಳಲು ಒಟ್ಟಾಗಿ ಕೆಲಸ ಮಾಡಬೇಕು ಎಂದು ರಾಜೀವ್ ಚಂದ್ರಶೇಖರ್ ಕರೆ ನೀಡಿದರು.

'ಹೊಸ ಬೆಂಗಳೂರಿಗೆ ಮ್ಯಾಪ್ ಹಾಗೂ ಬ್ಲೂ ಪ್ರಿಂಟ್ ಸಿದ್ದವಾಗ್ತಿದೆ'


 

Latest Videos
Follow Us:
Download App:
  • android
  • ios