Asianet Suvarna News Asianet Suvarna News

ಗುಜರಾತ್ ಚುನಾವಣೆ, ಪ್ರಧಾನಿಗೆ ಮಹತ್ವದ ಸಲಹೆ ನೀಡಿದ ಅಣ್ಣ ಸೋಮಾಭಾಯಿ ಮೋದಿ!

ಗುಜರಾತ್ ಚುನಾವಣೆಯ 2ನೇ ಹಂತದ ಮತದಾನ ನಡೆಯುತ್ತಿದೆ. ಬಿಜೆಪಿ ಮತ್ತೆ ಅಧಿಕಾರ ಹಿಡಿಯುವ ವಿಶ್ವಾಸದಲ್ಲಿದೆ. ಇತ್ತ ಪ್ರಧಾನಿ ಮೋದಿ ಕಳೆದ ಕೆಲ ದಿನಗಳಿಂದ ಭರ್ಜರಿ ಪ್ರಚಾರ, ಸಮಾವೇಶ, ರೋಡ್ ಶೋ ನಡೆಸಿದ್ದಾರೆ. ಇಂದು ಸಬರಮತಿ ಕ್ಷೇತ್ರದಲ್ಲಿ ಮತದಾನ ಮಾಡಿದ್ದಾರೆ. ಇದರ ನಡುವೆ ಪ್ರಧಾನಿ ಮೋದಿ ಸಹೋದರ ಸೋಮಾಭಾಯಿ ಮೋದಿ ಮಹತ್ವದ ಸಲಹೆ ನೀಡಿದ್ದಾರೆ.

PM Modi brother somabhai modi Asked PM to take rest Due to tiredness work for nation ckm
Author
First Published Dec 5, 2022, 3:59 PM IST

ಅಹಮ್ಮದಾಬಾದ್(ಡಿ.05): ಗುಜರಾತ್ ಚುನಾವಣೆ ಇಡೀ ದೇಶದ ಗಮನಸೆಳೆದಿದೆ. ಸದ್ಯ 2ನೇ ಹಂತದ ಮತದಾನ ನಡೆಯುತ್ತಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಾರ್ಟಿ ನಡುವೆ ತೀವ್ರ ಸ್ಪರ್ಧೆ ಎರ್ಪಟ್ಟಿದೆ. ಖುದ್ದು ಪ್ರಧಾನಿ ನರೇಂದ್ರ ಮೋದಿ ಕಳೆದ ಕೆಲದಿನಗಳಿಂದ ಗುಜರಾತ್‌ನಲ್ಲಿ ಬೀಡು ಬಿಟ್ಟಿದ್ದಾರೆ. ರೋಡ್ ಶೋ, ಸಮಾವೇಶ, ಪ್ರಚಾರ ನಡೆಸಿದ್ದಾರೆ. ಇದೀಗ ಸಬರಮತಿ ವಿಧಾನಸಭಾ ಕ್ಷೇತ್ರದಲ್ಲಿ ಮೋದಿ ಮತದಾನ ಮಾಡಿದ್ದಾರೆ. ಇತ್ತ ಪ್ರಧಾನಿ ಮೋದಿ  ಅಣ್ಣ ಸೋಮಾಭಾಯಿ ಮೋದಿ ಕೂಡ ಮತದಾನ ಮಾಡಿದ್ದಾರೆ. ಮತದಾನಕ್ಕೂ ಮುನ್ನ ಅಹಮ್ಮದಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದಾರೆ. ಕೆಲ ಹೊತ್ತು ಸೋಮಾಭಾಯಿ ಮೋದಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ. ದೇಶಕ್ಕಾಗಿ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದೀರಿ. ಕೆಲಸ, ಕಾರ್ಯಕ್ರಮಗಳ ನಿಮಿತ್ತ ದೇಶ ವಿದೇಶ ಸುತ್ತಾಡುತ್ತಿದ್ದೀರಿ. ಹೀಗಾಗಿ ಕೆಲ ದಿನಗಳ ಕಾಲ ವಿಶ್ರಾಂತಿ ಪಡೆದುಕೊಳ್ಳಲು ಮೋದಿಗೆ ಸೋಮಾಭಾಯಿ ಮೋದಿ ಸೂಚಿಸಿದ್ದಾರೆ.

ಪ್ರಧಾನಿ ಜೊತೆಗಿನ ಮಾತುಕತೆ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಸೋಮಾಭಾಯಿ ಮೋದಿ, ವಿಶ್ರಾಂತಿ ಪಡೆಯಲು ಸೂಚಿಸಿದ್ದೇನೆ ಎಂದಿದ್ದಾರೆ. ಇದೇ ವೇಳೆ ಮತದಾರರಲ್ಲಿ ಸೋಮಾಭಾಯಿ ಮೋದಿ ಮನವಿ ಮಾಡಿದ್ದಾರೆ.ಎಲ್ಲಾ ಮತದಾರರಲ್ಲಿ ಒಂದೇ ಮನವಿ. ಜವಾಬ್ದಾರಿಯುತ ನಾಯಕ ಹಾಗೂ ಪಕ್ಷಕ್ಕೆ ಮತ ನೀಡಿದೆ. ಅಭಿವೃದ್ಧಿ ಪರ ಕೆಲಸ ಮಾಡುವ ಪಕ್ಷಕ್ಕೆ ಮತ ನೀಡಿ ಎಂದು ಸೋಮಾಭಾಯಿ ಮೋದಿ ಮನವಿ ಮಾಡಿದ್ದಾರೆ. ಇದೇ ವೇಳೆ 2014ರಿಂದ ದೇಶದಲ್ಲಿ ಪ್ರದಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಕೊಂಡಾಡಿದ್ದಾರೆ.

ಒಂದು ವೋಟ್ ಮಾಡೋಕೆ ಎರಡೂವರೆ ಗಂಟೆ ಬೇಕಾ?: ಮೋದಿ ವಿರುದ್ಧ ಚುನಾವಣಾ ಅಯೋಗಕ್ಕೆ ಕಾಂಗ್ರೆಸ್‌ ದೂರು!

ಸೋಮಾಭಾಯಿ ಮೋದಿ ಕೂಡ ರಾನಿಪ್ ಹೈಸ್ಕೂಲ್‌ನಲ್ಲಿ ಮತದಾನ ಮಾಡಿದ್ದಾರೆ. ಇದೇ ಮತಗಟ್ಟೆಯಲ್ಲಿ ಮೋದಿ ಕೂಡ ಮತದಾನ ಮಾಡಿದ್ದಾರೆ.  ಇಂದು ಎರಡನೇ ಹಂತದ ಮತದಾನ ನಡೆಯುತ್ತಿದೆ. 14 ಜಿಲ್ಲೆಗಳ 93 ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದೆ. 93 ಸ್ಥಾನಗಳಲ್ಲಿ ಬಿಜೆಪಿ, ಕಾಂಗ್ರೆಸ್‌, ಆಮ್‌ ಆದ್ಮಿ ಪಕ್ಷ ಸೇರಿ ಒಟ್ಟು 61 ಪಕ್ಷಗಳ 833 ಅಭ್ಯರ್ಥಿಗಳು ಚುನಾವಣಾ ಕಣಕ್ಕಿಳಿದಿದ್ದಾರೆ. 285 ಸ್ವತಂತ್ರ ಅಭ್ಯರ್ಥಿಗಳು ಕೂಡಾ ಸ್ಪರ್ಧಿಸಲಿದ್ದಾರೆ.

ಎಲ್ಲ ಕ್ಷೇತ್ರಗಳಲ್ಲಿ 2.51 ಕೋಟಿ ಮತದಾರರಿದ್ದಾರೆ. 14,975 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 1.13 ಲಕ್ಷ ಚುನಾವಣಾ ಸಿಬ್ಬಂದಿಯನ್ನು ನೇಮಿಸಲಾಗಿದೆ.

ಮೊದಲ ಹಂತದ ಮತದಾನದಲ್ಲಿ ಕುಸಿತ:
ಗುಜರಾತ್‌ ವಿಧಾನಸಭೆಯ 89 ಸ್ಥಾನಗಳಿಗೆ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ.63.14ರಷ್ಟುಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. 2017ರಲ್ಲಿ ಇದೇ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಶೇ.66.75ರಷ್ಟುಮತದಾನವಾಗಿತ್ತು. ಅದಕ್ಕೆ ಹೋಲಿಸಿದರೆ ಶೇ.3ರಷ್ಟುಕಡಿಮೆ ಮತ ದಾಖಲಾಗಿದೆ. ನರ್ಮದಾ ಜಿಲ್ಲೆಯಲ್ಲಿ ಗರಿಷ್ಠ ಶೇ 78.24ರಷ್ಟುಮತದಾನವಾಗಿದ್ದ್ರೆ, ಬೊಟಾದ್‌ನಲ್ಲಿ ಕನಿಷ್ಠ ಶೇ.57.59ರಷ್ಟುಮತ ಚಲಾವಣೆಯಾಗಿದೆ. ಎರಡನೇ ಹಂತದ ಮತದಾನ ಡಿ.5ಕ್ಕೆ ನಡೆಯಲಿದ್ದು, ಫಲಿತಾಂಶ ಡಿ.8ಕ್ಕೆ ಪ್ರಕಟವಾಗಲಿದೆ. ಅಂದೇ ಹಿಮಾಚಲಪ್ರದೇಶ ಚುನಾವಣೆಯ ಫಲಿತಾಂಶವೂ ಪ್ರಕಟವಾಗಲಿದೆ.

Follow Us:
Download App:
  • android
  • ios