Asianet Suvarna News Asianet Suvarna News

ಜಗತ್ತನ್ನು ರೂಪಿಸಿದ ಪ್ರಭಾವಿಗಳಲ್ಲಿ ಮೋದಿ ನಂ.4!

ಜಗತ್ತನ್ನು ರೂಪಿಸಿದ ಪ್ರಭಾವಿಗಳಲ್ಲಿ ಮೋದಿ ನಂ.4| ಈ ಪಟ್ಟಿಯಲ್ಲಿ ಟ್ರಂಪ್‌, ನ್ಯಾನ್ಸಿ ಪೆಲೋಸಿ, ಕ್ಸಿ ಜಿನ್‌ಪಿಂಗ್‌ಗೂ ಸ್ಥಾನ| ಟಾಪ್‌ 6 ರಾಜಕೀಯ ನಾಯಕರ ಪಟ್ಟಿ ಬಿಡುಗಡೆಗೊಳಿಸಿದ ಅಮೆರಿಕದ ಟೈಮ್‌ ಮ್ಯಾಗಜಿನ್‌

PM Modi Becomes 4th Influential Person Who Shaped The World
Author
Bangalore, First Published Dec 30, 2019, 9:05 AM IST
  • Facebook
  • Twitter
  • Whatsapp

ನ್ಯೂಯಾರ್ಕ್[ಡಿ.30]: ತಮ್ಮ ನೀತಿಗಳು ಮತ್ತು ಅಧಿಕಾರದ ಮೂಲಕ ಜಗತ್ತಿನ ಮೇಲೆ ಪ್ರಭಾವ ಬೀರಿದ ಟಾಪ್‌ 6 ರಾಜಕೀಯ ನಾಯಕರ ಪಟ್ಟಿಯೊಂದನ್ನು ಅಮೆರಿಕದ ಟೈಮ್‌ ಮ್ಯಾಗಜಿನ್‌ ಬಿಡುಗಡೆ ಮಾಡಿದ್ದು, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ 4ನೇ ಸ್ಥಾನ ಪಡೆದಿದ್ದಾರೆ.

ರಾಜ್ಯಕ್ಕೆ ಆಗಮಿಸಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಅಮೆರಿಕ ಸಂಸತ್‌ನ ಕೆಳಮನೆಯ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಟಾಪ್‌ 3 ಸ್ಥಾನ ಪಡೆದಿದ್ದಾರೆ. ನ್ಯೂಜಿಲೆಂಡ್‌ ಪ್ರಧಾನಿ ಜೆಸಿಂದಾ ಮತ್ತು ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯಲ್‌ ಮ್ಯಾಕ್ರಾನ್‌ 6ನೇ ಸ್ಥಾನ ಪಡೆದಿದ್ದಾರೆ.

2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರದ ಗದ್ದುಗೆಗೆ ಮರಳಿದರು. ಆ ನಂತರ, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿ ರದ್ದುಗೊಳಿಸುವ ದಿಟ್ಟಕ್ರಮ ಕೈಗೊಂಡರು.

ಮನ್ ಕಿ ಬಾತ್‌ನಲ್ಲಿ ಯುವಕರ ಮನದಾಳ ಬಿಚ್ಚಿಟ್ಟ ಪ್ರಧಾನಿ ಮೋದಿ!

ಅಲ್ಲದೆ, ಅಮೆರಿಕದ ಹೂಸ್ಟನ್‌ನಲ್ಲಿ ಏರ್ಪಡಿಸಲಾಗಿದ್ದ ಮೋದಿ ಅವರ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾರೀ ಜನ ಸಮೂಹವೇ ಸೇರಿತ್ತು ಎಂದು ಮೆಚ್ಚುಗೆ ವ್ಯಕ್ತಪಡಿಸಲಾಗಿದೆ. ಆದರೆ, ಮೋದಿ ಸರ್ಕಾರದ ಕೆಲ ನೀತಿ-ನಿರ್ಣಯಗಳು ಭಾರತದಲ್ಲಿರುವ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವನ್ನು ಆತಂಕಕ್ಕೆ ದೂಡಿದೆ ಎಂದು ಹೇಳಿದೆ.

ಡಿಸೆಂಬರ್ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios