Asianet Suvarna News Asianet Suvarna News

PM Modi Food ಸರ್ಕಾರದಿಂದ ಒಂದೂ ರೂಪಾಯಿ ಪಡೆದಿಲ್ಲ, ಪ್ರಧಾನಿ ಮೋದಿ ಭರಿಸುತ್ತಾರೆ ಆಹಾರದ ವೆಚ್ಚ!

ಸಚಿವರು, ಶಾಸಕರು ಮುಖ್ಯಮಂತ್ರಿ, ಪ್ರಧಾನಿ, ಸಂಸದರಿಗೆ ಹಲವು ಭತ್ಯೆಗಳು ಸೌಲಭ್ಯಗಳಿವೆ. ಇದರಲ್ಲಿ ಆಹಾರದ ಭತ್ಯೆ ಕೂಡ ಒಂದಾಗಿದೆ. ಇದೀಗ ಪ್ರಧಾನಿ ಮೋದಿ ಆಹಾರದ ಖರ್ಚಿನ ಮಾಹಿತಿ ಆರ್‌ಟಿಐನಡಿ ಬಹಿರಂಗವಾಗಿದೆ. ಮೋದಿ ಇದುವರೆಗೆ ತಮ್ಮ ಸ್ವಂತ ಖರ್ಚಿನಲ್ಲೇ ಊಟ ಮಾಡಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.

PM Modi bears his own food expenses not a single rupee spent from government PMO reply to RTI ckm
Author
First Published Aug 31, 2022, 3:38 PM IST

ನವದೆಹಲಿ(ಆ.31):  ಫೋನ್ ಬಿಲ್, ಪ್ರಯಾಣದ ವೆಚ್ಚ, ಆಹಾರ ಖರ್ಚು ಸೇರಿದಂತೆ ಹಲವು ಸೌಲಭ್ಯಗಳು, ಭತ್ಯೆಗಳು ಸಂಸದರು, ಶಾಸಕರು, ಸಚಿವರಿಗಿದೆ. ಇನ್ನು ಭಾರತದ ಪ್ರಧಾನಿಗಳಿಗೆ ವಿಶೇಷ ಭತ್ಯೆಗಳಿವೆ. ಬಹುತೇಕರು ತಮಗಿರುವ ಭತ್ಯೆ, ಸೌಲಭ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತಾರೆ.  ಆದರೆ ಪ್ರಧಾನಿ ನರೇಂದ್ರ ಮೋದಿ ಇದಕ್ಕೆ ತದ್ವಿರುದ್ದವಾಗಿದ್ದಾರೆ. 2014ರಿಂದ ಇಲ್ಲಿವರೆಗೆ ಪ್ರಧಾನಿ ಮೋದಿ ತಮ್ಮ ಆಹಾರದ ಖರ್ಚನ್ನು ತಾವೇ ನೋಡಿಕೊಂಡಿದ್ದಾರೆ. ಸರ್ಕಾರದಿಂದ ಒಂದು ರೂಪಾಯಿಯನ್ನು ತೆಗೆದುಕೊಂಡಿಲ್ಲ. ಸರ್ಕಾರದಿಂದ ಪ್ರಧಾನಿ ಮೋದಿ ಆಹಾರಕ್ಕಾಗಿ ವಿಶೇಷ ಭತ್ಯೆ ಇದೆ. ಆದರೆ ಇದುವರೆಗೂ ಮೋದಿ ಸರ್ಕಾರದಿಂದ ಯಾವುದೇ ಹಣ ಪಡೆದುಕೊಂಡಿಲ್ಲ. ತಮ್ಮ ಆಹಾರದ ಖರ್ಚನ್ನು ತಮ್ಮ ಸ್ವಂತ ಹಣದಿಂದಲೇ ಭರಿಸಿದ್ದಾರೆ. ಈ ಮಾಹಿತಿ ಆರ್‌ಟಿಐನಡಿ ಬಹಿರಂಗವಾಗಿದೆ. ಸಾಮಾಜಿಕ ಕಾರ್ಯಕರ್ತ ಬಿನೋದ್ ಬಿಹಾರಿ ಸಿಂಗ್ ಈ ಕುರಿತು ಆರ್‌ಟಿಐನಡಿ ಪ್ರಧಾನಿ ಕಾರ್ಯಾಲಯವನ್ನು ಪ್ರಶ್ನಿಸಿದ್ದರು. ಇದಕ್ಕೆ ಪ್ರಧಾನಿ ಕಾರ್ಯಾಲಯ ದಾಖಲೆ ಸಮೇತ ಉತ್ತರ ನೀಡಿದೆ.

2014ರಲ್ಲಿ ಪ್ರಧಾನಿ ನರೇಂದ್ರ ಮೋದಿ(Indian Prime Minister) ಭಾರತದ ಪ್ರಧಾನಿಯಾಗಿ ಮೊದಲ ಬಾರಿಗೆ ಅಧಿಕಾರ ಸ್ವೀಕರಿಸಿದರು. ಪ್ರಧಾನಿ ಮೋದಿ ನಿವಾಸ, ಎಸ್‌ಪಿಜಿ ಭದ್ರತೆ, ಪ್ರಯಾಣದ ವೆಚ್ಚ, ಆಹಾರದ ಖರ್ಚು(food allowance) ಸೇರಿದಂತೆ ಹಲವು ಭತ್ಯೆಗಳು ಮೋದಿಗಿದೆ. ಇದರಲ್ಲಿ ಪ್ರಧಾನಿ ಮೋದಿ ಆಹಾರಕ್ಕಾಗಿ ಹೆಚ್ಚಿನ ಹಣ ಸರ್ಕಾರದಿಂದ ಒದಗಿಸಲಾಗುತ್ತದೆ. ಆದರೆ  ಈ ಹಣವನ್ನು ಮೋದಿ ಬಳಸಿಕೊಂಡಿಲ್ಲ. ತಮ್ಮ ಸ್ವಂತ ಖರ್ಚಿನಿಂದ(Modi himself bears food expenses) ಆಹಾರ ವೆಚ್ಚ ಭರಿಸಿದ್ದಾರೆ.

PM Modi In Mangaluru: ಪ್ರಧಾನಿ ಮೋದಿ ಸಮಾವೇಶದ ವೇಳೆ ಗೊಂದಲ ಸೃಷ್ಟಿಸುವ ಪ್ರಯತ್ನ, 2 ಕೇಸ್‌ ದಾಖಲು!

ಆಹಾರ  ವಿಚಾರದಲ್ಲೂ ಮೋದಿ(Narendra Modi) ತುಂಬಾ ಸರಳವಾಗಿದ್ದಾರೆ. 2015ರ ಬಜೆಟ್ ಅಧಿವೇಶನದ ಬಳಿಕ ಮೋದಿ ಎಲ್ಲರಿಗೂ ಅಚ್ಚರಿ ನೀಡಿದ್ದರು. ಸಂಸತ್ತಿನ ಮೊದಲ ಮಹಡಿಯಲ್ಲಿರುವ ಕ್ಯಾಂಟೀನ್‍ಗೆ ಭೇಟಿ ನೀಡಿ ಆಹಾರ(Food) ಸೇವಿಸಿದ್ದರು.  ಇಷ್ಟೇ ಅಲ್ಲ ಕ್ಯಾಂಟೀನ್ ಅಭಿವೃದ್ಧಿ ಅನುದಾನ ಬಿಡುಗಡೆ ಮಾಡಿದ್ದರು. 2021ರಲ್ಲಿ ಮೋದಿ ಸರ್ಕಾರ ಕ್ಯಾಂಟೀನ್ ಸಬ್ಸಿಡಿ ಕುರಿತು ಮಹತ್ವದ ನಿರ್ಧಾರ ಘೋಷಿಸಿತ್ತು. ಸ್ಪೀಕರ್ ಓಮ್ ಬಿರ್ಲಾ ಸಂಸದರು, ಶಾಸಕರಿಗಾಗಿ ಕ್ಯಾಂಟೀನ್‌ಗೆ ವಾರ್ಷಿಕ 17 ಕೋಟಿ ರೂಪಾಯಿ ಸಬ್ಸಡಿ ನೀಡಲಾಗುತ್ತಿತ್ತು. ಈ ಅನುದಾನ ಕಡಿತಗೊಳಿಸಿದರು.  ಈ ಮೂಲಕ ಸರ್ಕಾರ ಅಪಾರ ಹಣ ಉಳಿಸಿದರು.

ಮಂಗಳೂರು ಮೋದಿ ಸಮಾವೇಶ: ಸಂಚಾರ ಬದಲಾವಣೆ?, ಎಲ್ಲಿ ಪಾರ್ಕಿಂಗ್ ವ್ಯವಸ್ಥೆ? ಕಂಪ್ಲೀಟ್ ಡಿಟೈಲ್ಸ್..!

ಸೆಪ್ಟೆಂಬರ್ 2ಕ್ಕೆ ಮಂಗಳೂರಿಗೆ ಮೋದಿ, ಕಡಲ ನಗರಿ ರೆಡಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ವಾಗ​ತ​ಕ್ಕೆ ಕಡಲ ತಡಿ ಮಂಗಳೂರು(PM Modi visit to Mangaluru) ಸಜ್ಜಾಗಿದೆ. ಬಂಗ್ರ ಕೂಳೂರಿನ ವಿಶಾಲವಾದ 25ರಿಂದ 30 ಎಕರೆ ಜಾಗದಲ್ಲಿ ಸಿದ್ಧತೆ ಅಂತಿಮ ಹಂತ ತಲುಪಿದೆ. ಪೂರ್ಣ ಪ್ರಮಾ​ಣ​ದ ಎಸ್‌​ಪಿಜಿ ತಂಡ ಮಂಗ​ಳೂ​ರಿ​ನಲ್ಲಿ ಬೀಡು​ಬಿ​ಟ್ಟಿದ್ದು, ಪ್ರಧಾನಿ ಸಂಚ​ರಿ​ಸುವ ಎಲ್ಲ ಕಡೆ ಭದ್ರ​ತೆಗೆ ಸಂಬಂಧಿ​ಸಿ​ದ ಪ್ರಕ್ರಿ​ಯೆ​ಗ​ಳನ್ನು ನಡೆ​ಸುತ್ತಿ​ದೆ. ಜರ್ಮನ್‌ ತಂತ್ರಜ್ಞಾನದ ವಿಶಾಲವಾದ ಪೆಂಡಾ​ಲ್‌​ಗ​ಳನ್ನು ಗೋಲ್ಡ್‌ ಫಿಂಚ್‌ ಮೈದಾ​ನ​ದಲ್ಲಿ ಅಳ​ವ​ಡಿ​ಸ​ಲಾ​ಗಿದೆ. ವಿಮಾನ ನಿಲ್ದಾ​ಣ​ದಿಂದ ಎನ್‌​ಎಂಪಿ​ಎ ಸಂಪರ್ಕ ರಸ್ತೆಯ ದುರಸ್ತಿ ಕಾರ್ಯ ಸಮ​ರೋ​ಪಾ​ದಿ​ಯಲ್ಲಿ ನಡೆ​ದಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾ​ರಿಯ ಈ ಭಾಗ​ದಲ್ಲಿ ಮಂಗ​ಳ​ವಾರ ದಿನ​ವಿಡಿ ಟ್ರಾಫಿಕ್‌ ಜ್ಯಾಂ ಉಂಟಾ​ಗಿತ್ತು. ರಸ್ತೆ ಇಕ್ಕೆ​ಲ​ಗ​ಳ​ಲ್ಲಿನ ಗಿಡ​ಗಂಟಿ, ಪೊದೆ ಎಲ್ಲ ನೆಲ​ಸ​ಮ​ಗೊ​ಳಿಸಿ ಸ್ವಚ್ಛ​ಗೊ​ಳಿ​ಸುವ ಕಾರ್ಯವೂ ನಡೆ​ಯು​ತ್ತಿ​ದೆ.ಪ್ರಧಾನಮಂತ್ರಿಯ ಆಗಮನದ ಸ್ಥಳ, ಭದ್ರತಾ ವಿಚಾರ ಹಾಗೂ ಅವರನ್ನು ಸ್ವಾಗತಿಸಲು ತೆರಳುವ ಪ್ರಮುಖರ ಬಗ್ಗೆ ಜಿ.ಪಂ. ಸಭಾಂಗ​ಣ​ದ​ಲ್ಲಿ ಸಭೆ ನಡೆ​ಯಿ​ತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಸಚಿವರಾದ ವಿ.ಸುನಿಲ್‌ ಕುಮಾರ್‌, ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ, ಶಾಸಕರಾದ ಡಾ.ಭರತ್‌ ಶೆಟ್ಟಿ, ವೇದವ್ಯಾಸ್‌ ಕಾಮತ್‌, ನಾಯಕರಾದ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡುಬಿದಿರೆ ಮತ್ತಿ​ತ​ರರು ಇದ್ದ​ರು.

Follow Us:
Download App:
  • android
  • ios