ಮಂಗಳೂರು ಮೋದಿ ಸಮಾವೇಶ: ಸಂಚಾರ ಬದಲಾವಣೆ?, ಎಲ್ಲಿ ಪಾರ್ಕಿಂಗ್ ವ್ಯವಸ್ಥೆ? ಕಂಪ್ಲೀಟ್ ಡಿಟೈಲ್ಸ್..!
ಭದ್ರತೆ ದೃಷ್ಟಿಯಿಂದ ಮತ್ತು ಜನರಿಗೆ ಸಮಸ್ಯೆ ಆಗದಂತೆ ಮಂಗಳೂರಿನಲ್ಲಿ ಹಲವಾರು ಸಂಚಾರ ಬದಲಾವಣೆ ಮಾಡಿ ಆದೇಶ ಹೊರಡಿಸಿದ ಮಂಗಳೂರು ಕಮಿಷನರ್ ಶಶಿಕುಮಾರ್
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು(ಆ.31): ಸೆ.2ರಂದು ಸರ್ಕಾರದ ಅಧಿಕೃತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸುತ್ತಿದ್ದು, ಈ ವೇಳೆ ಭದ್ರತೆ ದೃಷ್ಟಿಯಿಂದ ಮತ್ತು ಜನರಿಗೆ ಸಮಸ್ಯೆ ಆಗದಂತೆ ಮಂಗಳೂರಿನಲ್ಲಿ ಹಲವಾರು ಸಂಚಾರ ಬದಲಾವಣೆ ಮಾಡಿ ಮಂಗಳೂರು ಕಮಿಷನರ್ ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಸಮಾವೇಶಕ್ಕೆ ಬರುವ ವಾಹನಗಳಿಗೂ ಪ್ರತ್ಯೇಕ ಪಾರ್ಕಿಂಗ್ ಜಾಗ ಮೀಸಲಿಡಲಾಗಿದೆ. ಈ ಕುರಿತು ಮಾಹಿತಿ ಇಲ್ಲಿದೆ.
ಮಂಗಳೂರು: ಪ್ರಧಾನಿ ಕಾರ್ಯಕ್ರಮಕ್ಕೆ 1 ಲಕ್ಷ ಜನ, ಮೋದಿಗೆ ಪರಶುರಾಮ ಪುತ್ಥಳಿ ಉಡುಗೊರೆ
ಸಂಚಾರ ಬದಲಾವಣೆ ವಿವರ:
ಸೆ.2 ರ ಬೆಳಿಗ್ಗೆ 6 ಗಂಟೆಯಿಂದ ಕೂಳೂರು ಜಂಕ್ಷನ್ ನಿಂದ ಕೊಟ್ಟಾರ ಜಂಕ್ಷನ್ ವರೆಗೆ ಸಾಮಾನ್ಯ ವಾಹನ ಸಂಚಾರ ನಿರ್ಬಂಧ ವಿಧಿಸಲಾಗಿದೆ. ಉಳಿದಂತೆ ಮಂಗಳೂರು ನಗರದ 9 ಕಡೆಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ. ನಂತೂರು ಸರ್ಕಲ್ ಮೂಲಕ ಆಗಮಿಸುವ ವಾಹನಗಳು ಬಿಕರ್ನಕಟ್ಟೆ-ಕೈಕಂಬ ಜಂಕ್ಷನ್ ಬಳಸಲು ಸೂಚನೆ ನೀಡಲಾಗಿದೆ. ಉಡುಪಿಗೆ ತೆರಳಲು ಬಿಕರ್ನಕಟ್ಟೆ ಮೂಲಕ ವಾಮಂಜೂರು- ಗುರುಪುರ-ಮೂಡಬಿದ್ರೆ-ಕಾರ್ಕಳ ರಸ್ತೆ ಬಳಸಬೇಕು. ಮೈಸೂರು, ಮಡಿಕೇರಿ ತೆರಳಲು ಬಿಕರ್ನಕಟ್ಟೆ- ಪಡೀಲ್-ಪುತ್ತೂರು-ಸುಳ್ಯ ಮೂಲಕ ರಸ್ತೆ ಬಳಸಬೇಕು. ಬೆಂಗಳೂರಿಗೆ ತೆರಳುವವರು ಬಿಕರ್ನಕಟ್ಟೆ-ಪಡೀಲ್-ಬಿ.ಸಿ.ರೋಡ್-ಉಪ್ಪಿನಂಗಡಿ ಮೂಲಕ ರಸ್ತೆ ಮೂಲಕ ಸಾಗಬೇಕು.
ಕಾಸರಗೋಡಿಗೆ ತೆರಳಲು ಬಿಕರ್ನಕಟ್ಟೆ-ಪಡೀಲ್-ಪಂಪ್ ವೆಲ್-ತೊಕ್ಕೊಟ್ಟು ಮೂಲಕ ರಸ್ತೆ ಹಾಗೂ ಪೊರ್ಕೋಡಿ ಜಂಕ್ಷನ್ ನಿಂದ ಜೋಕಟ್ಟೆ-ಕಾನಾ-ಸುರತ್ಕಲ್ ಹಾಗೂ ಏರ್ ಪೋರ್ಟ್ ನಿಂದ ಕೈಕಂಬ-ಗುರುಪುರ ಮೂಲಕ ಮಂಗಳೂರಿಗೆ ಬರಬಹುದು. ಮುಲ್ಕಿ ಜಂಕ್ಷನ್ ನಿಂದ ಕಿನ್ನಿಗೋಳಿ-ಕಟೀಲು-ಬಜಪೆ-ಕೈಕಂಬ ಮೂಲಕ ಮಂಗಳೂರಿಗೆ ಎಂಟ್ರಿಯಾಗಬಹುದು. ಹಳೆಯಂಗಡಿಯಿಂದ ಪಕ್ಷಿಕೆರೆ-ಕಿನ್ನಿಗೋಳಿ-ಏರ್ ಪೋರ್ಟ್ ರಸ್ತೆ ಮೂಲಕ ಬರಲು ಅವಕಾಶವಿದ್ದು, ಲೇಡಿಹಿಲ್ ಮೂಲಕ ಪಿವಿಎಸ್-ಬಂಟ್ಸ್ ಹಾಸ್ಟೆಲ್ ಮೂಲಕ ಪಂಪ್ ವೆಲ್ ಗೆ ವಾಹನ ಸಂಚಾರ ಇದೆ.
ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ ಪ್ರಧಾನಿ ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳ ಪಾರ್ಕಿಂಗ್ ಗೆ 11 ಕಡೆ ಪೊಲೀಸ್ ಇಲಾಖೆ ಜಾಗ ಗುರುತಿಸಿದ್ದು, ವಿವರ ಈ ಕೆಳಗಿನಂತಿದೆ.
1) ಡೆಲ್ಟಾ ಗ್ರೌಂಡ್-ಪೊಲೀಸ್ ಪಾಸ್ ಪಡೆದ ವಿವಿಐಪಿ ವಾಹನಗಳ ಪಾರ್ಕಿಂಗ್-300 ಕಾರು
2) ಸೋಮಯಾಜಿ ಮೈದಾನ ಕೂಳೂರು-ಪೊಲೀಸ್ ಪಾಸ್ ಪಡೆದ ವಿಐಪಿ ವಾಹನಗಳ ಪಾರ್ಕಿಂಗ್-500 ಕಾರು
3) ತಣ್ಣೀರು ಬಾವಿ ರಸ್ತೆ, ಪಣಂಬೂರು- ಉಡುಪಿ, ಸುರತ್ಕಲ್, ಕಾವೂರು ಕಡೆಯಿಂದ ಬರುವ ವಾಹನಗಳು- 1500 ಬಸ್, 500 ಕಾರುಗಳು
4) ಎನ್.ಎಂ.ಪಿ.ಟಿ ಮೈದಾನ, ಪಣಂಬೂರು- ಬಜಪೆ, ಕಾವೂರು ಹಾಗೂ ಉಡುಪಿ ವಾಹನಗಳು-200 ಬಸ್, 600 ಬೈಕ್
5) ಎಂ.ಎಸ್.ಇ.ಝಡ್ ರಸ್ತೆ, ಪಣಂಬೂರು- ಉಡುಪಿ, ಸುರತ್ಕಲ್ ಕಡೆಯ ವಾಹನಗಳು- 1000 ಲಘು ವಾಹನಗಳು
6) ಎ.ಜೆ.ಶೆಟ್ಟಿ ಇಂಜಿನಿಯರಿಂಗ್ ಕಾಲೇಜು, ಕುಳೂರು- ಪೊಲೀಸ್ ಪಾಸ್ ಪಡೆದ ವಿಐಪಿ ವಾಹನಗಳ ಪಾರ್ಕಿಂಗ್-100 ಕಾರು
7) ಗೋಲ್ಡ್ ಪಿಂಚ್ ಮೈದಾನದ ಪೂರ್ವ ಭಾಗದ ಅಮೆಜಾನ್ ಗೋಡಾನ್ ಬಳಿ- ಎಲ್ಲಾ ಭಾಗದ ವಾಹನ ಪಾರ್ಕಿಂಗ್- 2000 ಕಾರು ಮತ್ತು 3000 ಬೈಕ್
8) ಎ.ಜೆ. ಆಸ್ಪತ್ರೆ ಬಳಿಯ ಕುಂಟಿಕಾನದಿಂದ ಕಾವೂರು ಜಂಕ್ಷನ್- ಬೆಳ್ತಂಗಡಿ ಹಾಗೂ ಕಾಸರಗೋಡು ಕಡೆಯ ಬಸ್ ಗಳು- 350 ಬಸ್ ಗಳು
9) ಕೆಪಿಟಿ ಮೈದಾನ- ಮೂಡಬಿದ್ರೆ, ಮುಲ್ಕಿ ತಾಲೂಕಿನ ಬಸ್ ಗಳು- 200 ಬಸ್ ಗಳು
10) ವ್ಯಾಸ ನಗರ ಮೈದಾನ- ಪುತ್ತೂರು ಮತ್ತು ಸುಳ್ಯ ತಾಲೂಕಿನ ಬಸ್ ಗಳು- 50 ಬಸ್ ಗಳು
12) ಪದುವಾ ಮೈದಾನ- ಪುತ್ತೂರು ಮತ್ತು ಸುಳ್ಯ ತಾಲೂಕಿನ ಬಸ್ ಗಳು- 250 ಬಸ್ ಗಳು